AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವ ಬದಲಾವಣೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

Australia vs England: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಆ್ಯಶಸ್ ಸರಣಿಯ ಮೊದಲೆರಡು ಮ್ಯಾಚ್​ಗಳು ಮುಗಿದಿವೆ. ಈ ಎರಡೂ ಪಂದ್ಯಗಳಲ್ಲೂ ಆತಿಥೇಯ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಇನ್ನು ಈ ಸರಣಿಯ ಮೂರನೇ ಪಂದ್ಯವು ಡಿಸೆಂಬರ್ 17 ರಿಂದ ಶುರುವಾಗಲಿದ್ದು, ಈ ಮ್ಯಾಚ್ ಮೂಲಕ ಪ್ಯಾಟ್ ಕಮಿನ್ಸ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 10, 2025 | 9:58 AM

Share
ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಈ ಬಾರಿ ಪ್ಯಾಟ್ ಕಮಿನ್ಸ್ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಮಿನ್ಸ್ ಇದೀಗ ತಂಡಕ್ಕೆ ಮರಳಿದ್ದು, ಇದರೊಂದಿಗೆ ಆಸ್ಟ್ರೇಲಿಯಾ ತಂಡದ ನಾಯಕತ್ವ ಕೂಡ ಬದಲಾಗಿದೆ.

1 / 6
ಅಂದರೆ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ ಪ್ಯಾಟ್ ಕಮಿನ್ಸ್ ಮರಳಿರುವುದರಿಂದ ಅವರಿಗೆ ಮತ್ತೆ ನಾಯಕತ್ವ ನೀಡಲಾಗಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಮ್ಯಾಚ್​ಗಳಲ್ಲಿ ಕಮಿನ್ಸ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

2 / 6
ಇನ್ನು ಸ್ನಾಯು ಸೆಳೆತ ಮತ್ತು ಅಕಿಲೀಸ್ ಗಾಯದಿಂದ ಬಳಲುತ್ತಿರುವ ಜೋಶ್ ಹೇಝಲ್​ವುಡ್ ಆ್ಯಶಸ್ ಸರಣಿಯಿಂದ ಹೊರಬಿದ್ದಿದ್ದಾರೆ. ಹೇಝಲ್​ವುಡ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಬೇಕಿದ್ದು, ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲಾಗಿದೆ.

3 / 6
ಅಡಿಲೇಡ್​ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಮೊದಲೆರಡು ಮ್ಯಾಚ್​ಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್​ಗಳ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ದ್ವಿತೀಯ ಪಂದ್ಯದಲ್ಲೂ 8 ವಿಕೆಟ್​ಗಳ ಜಯ ಸಾಧಿಸಿದೆ. ಈ ಮೂಲಕ 5 ಮ್ಯಾಚ್​ಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ಸರಣಿ ಗೆಲುವಿನ ಆಸೆಯನ್ನು ಜೀವಂತವಿರಿಸಿಕೊಳ್ಳಲು ಇಂಗ್ಲೆಂಡ್ ತಂಡ ಮೂರನೇ ಪಂದ್ಯದಲ್ಲಿ ಜಯ ಸಾಧಿಸಲಬೇಕು. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ...

4 / 6
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಮೈಕೆಲ್ ನೇಸರ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

5 / 6
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್.

6 / 6
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ

ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್

‘ದಿ ಡೆವಿಲ್’ ಸಿನಿಮಾ: 15 ದಿನಗಳಿಂದ ಮನೆಗೆ ಹೋಗಿಲ್ಲ ದರ್ಶನ್ ಫ್ಯಾನ್ಸ್

ಅರ್ಷದೀಪ್ ಮೇಲೆ ಉಗ್ರರೂಪ ತಾಳಿದ ಗಂಭೀರ್; ವಿಡಿಯೋ

ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS:ಅಲೋಕ್ ಕುಮಾರ್ ಗತ್ತು ನೋಡಿ

Bigg Boss: ಬಿಗ್​​ಬಾಸ್ ಟಾಸ್ಕ್: ಕಾವ್ಯಾಗೆ ಇದೆಂಥ ಶಿಕ್ಷೆ?

ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ

ದರ್ಶನ್ ರಾಜಕೀಯಕ್ಕೆ ಬರಬೇಕಾ ಬೇಡವಾ ಅನ್ನೋದು ಫ್ಯಾನ್ಸ್ ನಿರ್ಧಾರ: ದಿನಕರ್

ಹೊಸ ಲುಕ್​​ನಲ್ಲಿ ಪ್ರಧಾನಿ; ಧುರಂಧರ್ ಸ್ಟೈಲ್​ನ ಮೋದಿ ಮಾಂಟೇಜ್ ವೈರಲ್

ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಡಿಕೆ ಶಿವಕುಮಾರ್ ಆಪ್ತ