ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕೆಚ್ಚೆದೆಯ ಹೋರಾಟದಿಂದ ಆಸ್ಟ್ರೇಲಿಯಾ ತಂಡ 3 ವಿಕೆಟ್ಗಳ ಜಯ ಸಾಧಿಸಿದೆ. 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ ದ್ವಿಶತಕ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ 4 ಬಾರಿ ಮುಖಾಮುಖಿಯಾಗಿವೆ. ಈ 4 ಪಂದ್ಯಗಳಲ್ಲೂ ಆಸ್ಟ್ರೇಲಿಯಾ ತಂಡವೇ ಜಯ ಸಾಧಿಸಿದೆ.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಝಾಹಿ, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.
ಮುಜೀಬ್ ಉರ್ ರೆಹಮಾನ್ ಎಸೆದ 46ನೇ ಓವರ್ನಲ್ಲಿ ಸಿಕ್ಸ್, ಸಿಕ್ಸ್, ಫೋರ್ ಹಾಗೂ ಸಿಕ್ಸ್ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
128 ಎಸೆತಗಳಲ್ಲಿ ದ್ವಿಶತಕ ಪೂರೈಸಿದ ಆಸ್ಟ್ರೇಲಿಯಾಗೆ 3 ವಿಕೆಟ್ಗಳ ಜಯ ತಂದುಕೊಟ್ಟ ಮ್ಯಾಕ್ಸ್‌ವೆಲ್.
ನವೀನ್ ಉಲ್ ಹಕ್ ಎಸೆದ 45ನೇ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಕೊನೆಯ 5 ಓವರ್ಗಳಲ್ಲಿ 25 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
ಅಝ್ಮತ್ ಒವರ್ಝಾಹಿ ಎಸೆದ 42ನೇ ಓವರ್ನಲ್ಲಿ 2 ಫೋರ್ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
ಈ ಫೋರ್ಗಳೊಂದಿಗೆ ವೈಯುಕ್ತಿಕ ಸ್ಕೋರ್ 150 ರನ್ ಪೂರೈಸಿದ ಮ್ಯಾಕ್ಸ್‌ವೆಲ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 39ನೇ ಓವರ್ನ ಮೊದಲ ಎಸೆತದಲ್ಲೇ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
95 ಎಸೆತಗಳಲ್ಲಿ 133 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಮ್ಯಾಕ್ಸ್‌ವೆಲ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
35 ಓವರ್ಗಳಲ್ಲಿ 200 ರನ್ ಕಲೆಹಾಕಿದ ಆಸ್ಟ್ರೇಲಿಯಾ.
7 ವಿಕೆಟ್ ಕಬಳಿಸಿರುವ ಅಫ್ಘಾನಿಸ್ತಾನ್.
ಸ್ಪೋಟಕ ಶತಕದೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಗ್ಲೆನ್ ಮ್ಯಾಕ್ಸ್‌ವೆಲ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
76 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್‌ವೆಲ್.
33 ಓವರ್ಗಳ ಮುಕ್ತಾಯದ ವೇಳೆಗೆ 186 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 169 ರನ್ಗಳು.
8ನೇ ವಿಕೆಟ್ಗೆ 78 ರನ್ಗಳ ಜೊತೆಯಾಟವಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್.
84 ರನ್ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ಗ್ಲೆನ್ ಮ್ಯಾಕ್ಸ್‌ವೆಲ್.
25 ಓವರ್ಗಳ ಮುಕ್ತಾಯದ ವೇಳೆಗೆ 126 ರನ್ ಕಲೆಹಾಕಿದ ಆಸ್ಟ್ರೇಲಿಯಾ.
7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನ್ ಬೌಲರ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 98 ರನ್ಗಳು.
7 ವಿಕೆಟ್ ಕಬಳಿಸಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದ ಮಿಚೆಲ್ ಸ್ಟಾರ್ಕ್.
ಆಸ್ಟ್ರೇಲಿಯಾ ತಂಡದ 7 ವಿಕೆಟ್ ಪತನ.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 17ನೇ ಓವರ್ನ 4ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದ ಮಾರ್ಕಸ್ ಸ್ಟೋಯಿನಿಸ್.
7 ಎಸೆತಗಳಲ್ಲಿ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಟೋಯಿನಿಸ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
15ನೇ ಓವರ್ನಲ್ಲಿ ರನ್ ಕದಿಯುವ ಯತ್ನದಲ್ಲಿ ರನೌಟ್ ಆದ ಮಾರ್ನಸ್ ಲಾಬುಶೇನ್. ರಹಮತ್ ಶಾ ಅತ್ಯುತ್ತಮ ಫೀಲ್ಡಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ 73 ರನ್ ಕಲೆಹಾಕಿದ ಆಸ್ಟ್ರೇಲಿಯಾ.
5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಬ್ಯಾಟಿಂಗ್.
10 ಓವರ್ಗಳ ಮುಕ್ತಾಯದ ವೇಳೆಗೆ 52 ರನ್ ಕಲೆಹಾಕಿದ ಆಸ್ಟ್ರೇಲಿಯಾ.
4 ವಿಕೆಟ್ ಕಬಳಿಸಿ ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಆಸ್ಟ್ರೇಲಿಯಾ ತಂಡಕ್ಕೆ 292 ರನ್ಗಳ ಗುರಿ ನೀಡಿರುವ ಅಫ್ಘಾನಿಸ್ತಾನ್.
ಅಝ್ಮತ್ ಒಮರ್ಝಾಹಿ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್ ಕ್ಲೀನ್ ಬೌಲ್ಡ್.
29 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ವಾರ್ನರ್.
2ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಜೋಶ್ ಇಂಗ್ಲಿಸ್ (0).
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ನವೀನ್ ಉಲ್ ಹಕ್ ಎಸೆದ 6ನೇ ಓವರ್ನ 4ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಮಿಚೆಲ್ ಮಾರ್ಷ್.
11 ಎಸೆತಗಳಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಿಚೆಲ್ ಮಾರ್ಷ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಅಝ್ಮತ್ ಒಮರ್ಝಾಹಿ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಮಿಚೆಲ್ ಮಾರ್ಷ್.
2ನೇ ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ಥರ್ಡ್ಮ್ಯಾನ್ ಬೌಂಡರಿಯತ್ತ ಸಿಕ್ಸ್.
5 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 33 ರನ್ಗಳು.
ನವೀನ್ ಉಲ್ ಹಕ್ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಟ್ರಾವಿಸ್ ಹೆಡ್ (0).
ಅಫ್ಘಾನಿಸ್ತಾನ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ನವೀನ್ ಉಲ್ ಹಕ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
ಮುಜೀಬ್ ಉರ್ ರೆಹಮಾನ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ಡೇವಿಡ್ ವಾರ್ನರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ ಕೊನೆಯ ಓವರ್ನಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 16 ರನ್ ಚಚ್ಚಿದ ರಶೀದ್ ಖಾನ್.
50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಆಸ್ಟ್ರೇಲಿಯಾ ತಂಡಕ್ಕೆ 292 ರನ್ಗಳ ಗುರಿ ನೀಡಿದ ಅಫ್ಘಾನಿಸ್ತಾನ್.
ಪ್ಯಾಟ್ ಕಮಿನ್ಸ್ ಎಸೆದ 49ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಇಬ್ರಾಹಿಂ ಝದ್ರಾನ್.
5ನೇ ಎಸೆತದಲ್ಲಿ ಇಬ್ರಾಹಿಂ ಬ್ಯಾಟ್ನಿಂದ ಆಫ್ ಸೈಡ್ನತ್ತ ಫೋರ್.
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 47ನೇ ಓವರ್ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ರಶೀದ್ ಖಾನ್.
5ನೇ ಎಸೆತದಲ್ಲಿ ರಶೀದ್ ಖಾನ್ ಬ್ಯಾಟ್ನಿಂದ ಮತ್ತೊಂದು ಫೋರ್.
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 46ನೇ ಓವರ್ನ ಮೊದಲ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಮೊಹಮ್ಮದ್ ನಬಿ.
ಮೂರನೇ ಎಸೆತದಲ್ಲಿ ಮೊಹಮ್ಮದ್ ನಬಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
131 ಎಸೆತಗಳಲ್ಲಿ ಶತಕ ಪೂರೈಸಿದ ಇಬ್ರಾಹಿಂ ಝದ್ರಾನ್.
ಅಫ್ಘಾನಿಸ್ತಾನ್ ಪರ ಏಕದಿನ ವಿಶ್ವಕಪ್ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಬರೆದ ಇಬ್ರಾಹಿಂ.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಆ್ಯಡಂ ಝಂಪಾ ಎಸೆದ 43ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಲಾಂಗ್ ಆಫ್ನಲ್ಲಿ ಕ್ಯಾಚ್ ನೀಡಿದ ಅಝ್ಮತ್ ಒವರ್ಝಾಹಿ.
18 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಝ್ಮತ್.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 40ನೇ ಓವರ್ನ 3ನೇ ಮತ್ತು 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಅಝ್ಮತ್ ಒಮರ್ಝಾಹಿ.
40 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಗಾನಿಸ್ತಾನ್ ತಂಡದ ಸ್ಕೋರ್ 195 ರನ್ಗಳು.
ಕ್ರೀಸ್ನಲ್ಲಿ ಅಝ್ಮತ್ ಒಮರ್ಝಾಹಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 38ನೇ ಓವರ್ನ 2ನೇ ಎಸೆತದಲ್ಲಿ ಹಶ್ಮತ್ ಶಾಹಿದಿ ಕ್ಲೀನ್ ಬೌಲ್ಡ್.
43 ಎಸೆತಗಳಲ್ಲಿ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ತಂಡದ ನಾಯಕ ಶಾಹಿದಿ.
ಕ್ರೀಸ್ನಲ್ಲಿ ಅಝ್ಮತ್ ಒಮರ್ಝಾಹಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
35 ಓವರ್ಗಳ ಮುಕ್ತಾಯದ ವೇಳೆಗೆ 165 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಇದುವರೆಗೆ ಕೇವಲ 2 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್ಗಳು.
ಕೊನೆಯ 90 ಎಸೆತಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಅಫ್ಘಾನ್ ಬ್ಯಾಟರ್ಗಳು.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ (23) ಹಾಗೂ ಇಬ್ರಾಹಿಂ ಝದ್ರಾನ್ (82) ಬ್ಯಾಟಿಂಗ್.
ಆ್ಯಡಂ ಝಂಪಾ ಎಸೆದ 31ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಹಶ್ಮತ್ ಶಾಹಿದಿ.
ಈ ಫೋರ್ನೊಂದಿಗೆ 150 ರನ್ ಪೂರೈಸಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ (19) ಹಾಗೂ ಇಬ್ರಾಹಿಂ ಝದ್ರಾನ್ (77) ಬ್ಯಾಟಿಂಗ್.
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ 25ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಹಮತ್ ಶಾ.
44 ಎಸೆತಗಳಲ್ಲಿ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ರಹಮತ್ ಶಾ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ (2) ಹಾಗೂ ಇಬ್ರಾಹಿಂ ಝದ್ರಾನ್ (65) ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 99 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಬೌಲರ್ಗಳು.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ರಹಮಾನುಲ್ಲಾ ಗುರ್ಬಾಝ್ (21) ಔಟ್.
15 ಓವರ್ಗಳ ಮುಕ್ತಾಯದ ವೇಳೆಗೆ 73 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ರಹಮಾನುಲ್ಲಾ ಗುರ್ಬಾಝ್ (21) ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿರುವ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 14ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
12 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 57 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ರಹಮಾನುಲ್ಲಾ ಗುರ್ಬಾಝ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 10ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ (21) ಔಟ್.
ಜೋಶ್ ಹ್ಯಾಝಲ್‌ವುಡ್ ಎಸೆದ 8ನೇ ಓವರ್ನ 3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಹಮಾನುಲ್ಲಾ ಗುರ್ಬಾಝ್.
25 ಎಸೆತಗಳಲ್ಲಿ 21 ರನ್ ಬಾರಿಸಿ ಗುರ್ಬಾಝ್ ಔಟ್.
7 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 33 ರನ್ ಕಲೆಹಾಕಿರುವ ಅಫ್ಘಾನಿಸ್ತಾನ್.
ಮೊದಲ ಯಶಸ್ಸು ಪಡೆಯಲು ಆಸೀಸ್ ಬೌಲರ್ಗಳ ಹರಸಾಹಸ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ನ 5ನೇ ಎಸೆತದಲ್ಲಿ ಹಿಂಬದಿಯತ್ತ ಫೋರ್ ಬಾರಿಸಿದ ರಹಮಾನುಲ್ಲಾ ಗುರ್ಬಾಝ್.
5 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 27 ರನ್ಗಳು.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಇದು ಅಫ್ಘಾನಿಸ್ತಾನ್ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
2ನೇ ಓವರ್ನಲ್ಲಿ ಕೇವಲ 1 ರನ್ ನೀಡಿದ ಬಲಗೈ ವೇಗಿ ಜೋಶ್ ಹ್ಯಾಝಲ್‌ವುಡ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
2 ಓವರ್ಗಳಲ್ಲಿ 6 ರನ್ ಕಲೆಹಾಕಿರುವ ಅಫ್ಘಾನಿಸ್ತಾನ್.
ಮೊದಲ ಓವರ್ನಲ್ಲಿ ಕೇವಲ 5 ರನ್ ನೀಡಿದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್.
ಕ್ರೀಸ್ನಲ್ಲಿ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಅಫ್ಘಾನಿಸ್ತಾನ್.
ಹಾಸನ: ಹೆಚ್ಡಿ ಕುಮಾರಸ್ವಾಮಿ ಯಾವಾಗಲೂ ಸುಳ್ಳು ಆರೋಪ ಮಾಡುತ್ತಾರೆ. ವಿರೋಧ ಪಕ್ಷದ ನಾಯಕನಾಗಿ ಸರ್ಕಾರಕ್ಕೆ ಸಲಹೆ ಕೊಡಬೇಕು. ನಾವು ಕೇಂದ್ರದ ಬಳಿ ಹಣ ಕೇಳಬಾರದಾ, ಅದು ಜಗಳನಾ? ಕೇಂದ್ರ, ರಾಜ್ಯ ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿ ಬರ ಬಂದಿದೆ, ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ರಾಜ್ಯದಲ್ಲಿ 37 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರದ ಬಳಿ 17,900 ಕೋಟಿ ಅನುದಾನ ಕೇಳಿದ್ದೇವೆ. ಕೇಂದ್ರ ಬರ ತಂಡ ಪರಿಶೀಲನೆ ಮಾಡಿದೆ, ಆದರೆ ವರದಿ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಝಾಹಿ, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Tue, 7 November 23