India vs Australia Highlights, WTC Final 2023 Day 3: 3ನೇ ದಿನದಾಟದಂತ್ಯಕ್ಕೆ ಆಸೀಸ್ 123/4
India vs Australia Highlights today WTC Final 2023 Day 3 Match match scorecard in Kannada: ಇಂದು ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನವಾಗಿದೆ.

ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್‌ಗೆ 123 ರನ್ ಗಳಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ 296 ರನ್‌ಗಳ ಮುನ್ನಡೆ ಸಾಧಿಸಿದೆ. ಕ್ಯಾಮರೂನ್ ಗ್ರೀನ್ 7 ಮತ್ತು ಮಾರ್ನಸ್ ಲಬುಶೆನ್ 41 ರನ್ ಗಳಿಸಿ ಆಡುತ್ತಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 2 ಮತ್ತು ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಭಾರತದ ಮೊದಲ ಇನಿಂಗ್ಸ್ 296 ರನ್‌ಗಳಿಗೆ ಕೊನೆಗೊಂಡಿತ್ತು.
LIVE NEWS & UPDATES
-
India vs Australia Live Score: ಆಸ್ಟ್ರೇಲಿಯಾಗೆ 296 ರನ್‌ಗಳ ಮುನ್ನಡೆ
ಆಸ್ಟ್ರೇಲಿಯಾ 296 ರನ್‌ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್‌ಗೆ 123 ರನ್ ಗಳಿಸಿದೆ. ಕ್ಯಾಮರೂನ್ ಗ್ರೀನ್ 7 ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ 41 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
-
India vs Australia Live Score: ಟ್ರಾವಿಸ್ ಹೆಡ್ ಔಟ್
ಆಸೀಸ್ ತಂಡದ 4ನೇ ವಿಕೆಟ್ ಪತನವಾಗಿದೆ
ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್ ಸಿಡಿಸಿದ್ದ ಹೆಡ್ ಔಟಾಗಿದ್ದಾರೆ.
ಜಡೇಜಾ ಬೌಲಿಂಗ್ನಲ್ಲಿ ಜಡೇಜಾ ಅವರಿಗೆ ಕ್ಯಾಚಿತ್ತು ಹೆಡ್ ಔಟಾದರು.
ಹೆಡ್ ಕೇವಲ 18 ರನ್ ಗಳಿಸಲಷ್ಟೇ ಶಕ್ತರಾದರು
-
-
India vs Australia Live Score: ಸ್ಟೀವ್ ಸ್ಮಿತ್ ಔಟ್
ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ರವೀಂದ್ರ ಜಡೇಜಾ ಭಾರತಕ್ಕೆ 3ನೇ ಯಶಸ್ಸು ತಂದುಕೊಟ್ಟರು.
ಸ್ಮಿತ್ 34 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
-
India vs Australia Live Score: ಉಸ್ಮಾನ್ ಖವಾಜಾ ಔಟ್
ಉಸ್ಮಾನ್ ಖವಾಜಾ ಅವರನ್ನು ಉಮೇಶ್ ಯಾದವ್ ಪೆವಿಲಿಯನ್ಗೆ ಕಳುಹಿಸಿದ್ದಾರೆ.
ಉಮೇಶ್ ಖವಾಜಾ ನೀಡಿದ ಕ್ಯಾಚ್ ಅನ್ನು ಭರತ್ ಹಿಡಿದರು.
ಖವಾಜಾ 13 ರನ್ ಗಳಿಸಿ ಔಟಾದರು
-
India vs Australia Live Score: ಮೂರನೇ ಸೆಷನ್ ಆರಂಭ
ಮೂರನೇ ಸೆಷನ್ ಆರಂಭವಾಗಿದೆ. ಉಸ್ಮಾನ್ ಖವಾಜಾ ಮತ್ತು ಮಾರ್ನಸ್ ಲಬುಶೆನ್ ಭಾರತದ ಬೌಲರ್‌ಗಳ ಗುರಿಯಲ್ಲಿದ್ದಾರೆ. ಈ ಇಬ್ಬರೂ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು.
-
-
India vs Australia Live Score: ವಾರ್ನರ್ ಔಟ್
ಮೊಹಮ್ಮದ್ ಸಿರಾಜ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದಾರೆ.
ಡೇವಿಡ್ ವಾರ್ನರ್ ಒಂದು ರನ್ ಗಳಿಸಿ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ದಾರೆ.
-
India vs Australia Live Score: ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಆರಂಭ
ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. 173 ರನ್‌ಗಳ ಮುನ್ನಡೆಯೊಂದಿಗೆ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಕ್ರೀಸ್‌ಗೆ ಬಂದಿದ್ದಾರೆ.
-
India vs Australia Live Score :296 ರನ್‌ಗಳಿಗೆ ಆಲೌಟ್
ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾ 173 ರನ್‌ಗಳ ಮುನ್ನಡೆ ಸಾಧಿಸಿದೆ.
-
India vs Australia Live Score: ಠಾಕೂರ್ ಔಟ್
51 ರನ್‌ಗಳಿಗೆ ಶಾರ್ದೂಲ್ ಠಾಕೂರ್ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.
ಇದರೊಂದಿಗೆ ಭಾರತದ 9ನೇ ವಿಕೆಟ್ ಕೂಡ ಪತನವಾಯಿತು.
-
India vs Australia Live Score: ಅರ್ಧಶತಕ ಸಿಡಿಸಿದ ಶಾರ್ದೂಲ್ ಠಾಕೂರ್
ಭಾರತದ ಪರ ಮತ್ತೊಂದು ಅರ್ಧಶತಕ ದಾಖಲಾಗಿದೆ.
ರಹಾನೆ ಜೊತೆ ಶತಕದ ಜೊತೆಯಾಟವನ್ನಾಡಿದ ಶಾರ್ದೂಲ್ ಅರ್ಧಶತಕ ಸಿಡಿಸಿದ್ದಾರೆ.
ಕಮ್ಮಿನ್ಸ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಶಾರ್ದೂಲ್ ಅರ್ಧಶತಕ ಪೂರೈಸಿದರು.
-
India vs Australia Live Score: 8ನೇ ವಿಕೆಟ್ ಪತನ
ರಹಾನೆ ವಿಕೆಟ್ ಬಳಿಕ ಬಂದಿದ್ದ ಉಮೇಶ್ ಕೇವಲ 5 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಇದರೊಂದಿಗೆ ಭಾರತದ 8ನೇ ವಿಕೆಟ್ ಕೂಡ ಪತನವಾಯಿತು.
-
India vs Australia Live Score: 89 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ ರಹಾನೆ
ಅಜಿಂಕ್ಯ ರಹಾನೆ ಶತಕ ವಂಚಿತರಾಗಿದ್ದಾರೆ. ಪ್ಯಾಟ್ ಕಮಿನ್ಸ್ ಎಸೆತದಲ್ಲಿ ರಹಾನೆ ಗ್ರೀನ್ಗೆ ಕ್ಯಾಚಿತ್ತು ಔಟಾದರು. ರಹಾನೆ 89 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಗ್ರೀನ್ ಡೈವಿಂಗ್ ಮೂಲಕ ಉತ್ತಮ ಕ್ಯಾಚ್ ಪಡೆದರು.
-
India vs Australia Live Score: ಊಟದ ವಿರಾಮದವರೆಗೆ ಭಾರತದ ಸ್ಕೋರ್ 260/6
ಮೊದಲ ಸೆಷನ್ ಮುಗಿದಿದೆ. ಈ ಸೆಷನ್ನಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 260 ರನ್ ಕಲೆಹಾಕಿದೆ. ಅಜಿಂಕ್ಯ ರಹಾನೆ ಶತಕದ ಸಮೀಪ ತಲುಪಿದ್ದಾರೆ. ರಹಾನೆ ಮತ್ತು ಶಾರ್ದೂಲ್ ಠಾಕೂರ್ ನಡುವೆ ಶತಕದ ಜೊತೆಯಾಟ ನಡೆದಿದೆ.
-
India vs Australia Live Score: ರಹಾನೆ ಮತ್ತು ಠಾಕೂರ್ ಜೊತೆಯಾಟ
ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ಅವರ ದೊಡ್ಡ ಜೊತೆಯಾಟ ಭಾರತದ ಇನ್ನಿಂಗ್ಸ್ ನಿಭಾಯಿಸುತ್ತಿದೆ. ಇಬ್ಬರೂ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತವನ್ನು ಕಠಿಣ ಪರಿಸ್ಥಿತಿಯಿಂದ ಹೊರತರಲು ಹರಸಾಹಸ ಪಡುತ್ತಿದ್ದಾರೆ.
-
India vs Australia Live Score: ಅರ್ಧಶತಕ ಸಿಡಿಸಿದ ರಹಾನೆ
ಅಜಿಂಕ್ಯ ರಹಾನೆ 92 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.
ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಹಾನೆ ತಮ್ಮ ಟೆಸ್ಟ್ ಬದುಕಿನ 26ನೇ ಅರ್ಧಶತಕ ಸಿಡಿಸಿದ್ದಾರೆ.
ರಹಾನೆ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ ಸ್ಕೋರ್ 200 ರನ್‌ಗಳ ಸಮೀಪ ತಲುಪಿದೆ.
ಭಾರತದ ಸ್ಕೋರ್ 47 ಓವರ್‌ಗಳಲ್ಲಿ ಆರು ವಿಕೆಟ್‌ಗೆ 196 ಆಗಿದೆ.
-
India vs Australia Live Score: ಭರತ್ ಔಟ್
ಮೂರನೇ ದಿನದಾಟ ಆರಂಭವಾಗಿ ಒಂದು ನಿಮಿಷವೂ ಆಗಿಲ್ಲ, ಭಾರತಕ್ಕೆ ಆಘಾತ ಕಾದಿತ್ತು. ದಿನದ ಎರಡನೇ ಎಸೆತದಲ್ಲಿ ಸ್ಕಾಟ್ ಬೋಲ್ಯಾಂಡ್ ಕೆಎಸ್ ಭರತ್ ಅವರನ್ನು ಬೌಲ್ಡ್ ಮಾಡಿದರು. ಭರತ್ 5 ರನ್ ಗಳಿಸಲಷ್ಟೇ ಶಕ್ತರಾದರು
-
India vs Australia Live Score: 3ನೇ ದಿನದಾಟ ಆರಂಭ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ಮೂರನೇ ದಿನವಾದ ಇಂದು. ಮೂರನೇ ದಿನದ ಆಟ ಆರಂಭವಾಗಿದ್ದು, ಭರತ್ ಹಾಗೂ ರಹಾನೆ ದಿನದಾಟ ಆರಂಭಿಸಿದ್ದಾರೆ.
-
India vs Australia Live Score: ರಹಾನೆ ಮೇಲೆ ಎಲ್ಲರ ಚಿತ್ತ
ಟೀಂ ಇಂಡಿಯಾ ಇನ್ನೂ 318 ರನ್‌ಗಳ ಹಿನ್ನಡೆಯಲ್ಲಿದೆ. ಹೀಗಾಗಿ ಈ ಮೂರನೇ ದಿನದಾಟದಲ್ಲಿ ರಹಾನೆ ಅವರಿಂದ ಟೀಂ ಇಂಡಿಯಾ ಹೆಚ್ಚಿನ ನಿರೀಕ್ಷೆ ಹೊಂದಿದೆ. ಹೀಗಾಗಿ ಹಲವು ತಿಂಗಳ ಪುನರಾಗಮನದ ನಂತರ ರಹಾನೆ ಟೀಂ ಇಂಡಿಯಾ ಪರ ಹೇಗೆ ಆಡುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
Published On - Jun 09,2023 2:20 PM
