IND vs ZIM: ಭಾರತದ ಈ ನಾಲ್ಕು ಆಟಗಾರರು ಜಿಂಬಾಬ್ವೆಯಲ್ಲಿ ಅಬ್ಬರಿಸಿದರೆ ಆಸ್ಟ್ರೇಲಿಯಾಗೆ ಟಿಕೆಟ್ ಖಚಿತ

IND vs ZIM: 2022ರ ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದ ಬಹುತೇಕ ಆಟಗಾರರು ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಆದರೆ ಇನ್ನೂ ಕೆಲವು ಆಟಗಾರರಿಗೆ ಜಿಂಬಾಬ್ವೆ ಸರಣಿ ಬಹಳ ಮುಖ್ಯವಾಗಿದೆ.

IND vs ZIM: ಭಾರತದ ಈ ನಾಲ್ಕು ಆಟಗಾರರು ಜಿಂಬಾಬ್ವೆಯಲ್ಲಿ ಅಬ್ಬರಿಸಿದರೆ ಆಸ್ಟ್ರೇಲಿಯಾಗೆ ಟಿಕೆಟ್ ಖಚಿತ
Indian cricket team
Follow us
TV9 Web
| Updated By: ಪೃಥ್ವಿಶಂಕರ

Updated on:Aug 14, 2022 | 6:14 PM

ಹರಾರೆಯಲ್ಲಿ ಟೀಂ ಇಂಡಿಯಾ (Indian cricket team) ಜಿಂಬಾಬ್ವೆ ಎದುರು ಕಣಕ್ಕಿಳಿಯುತ್ತಿದ್ದರೂ ಬಿಸಿಸಿಐ ಯೋಚನೆ ಮಾತ್ರ ಆಸ್ಟ್ರೇಲಿಯಾದ ಮೇಲಿದೆ. ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆಯೊಂದಿಗೆ ಮೂರು ಪಂದ್ಯಗಳ ODI ಸರಣಿಯನ್ನು ಆಡಲಿದ್ದು ಈ ಸರಣಿ ಭವಿಷ್ಯದ ದೃಷ್ಟಿಯಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರಿಗೆ ಮಹತ್ವದ್ದಾಗಿದೆ. ಏಷ್ಯಾಕಪ್ 2022 (Asia Cup 2022) ಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದವರು,ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ (T20 World Cup) ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ತವಕದಲ್ಲಿದ್ದಾರೆ.

ಆಗಸ್ಟ್ 18 ರಿಂದ ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಈ ಸರಣಿ ನಡೆಯಲಿದ್ದು, ಈ ಪ್ರವಾಸಕ್ಕಾಗಿ ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ನಾಯಕನಾಗಿರುವ ಕೆಎಲ್ ರಾಹುಲ್, ಅವೇಶ್ ಖಾನ್ ಮತ್ತು ದೀಪಕ್ ಹೂಡಾ ಮಾತ್ರ ಏಷ್ಯಾಕಪ್‌ಗೆ ಆಯ್ಕೆಯಾದ ಆಟಗಾರರಾಗಿದ್ದಾರೆ. ಇವರಲ್ಲದೆ, ದೀಪಕ್ ಚಹಾರ್ ಮತ್ತು ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಇವರುಗಳ ಹೊರತಾಗಿ ಈ ಪ್ರವಾಸವು ಮುಖ್ಯವಾಗಿರುವ ಕೆಲವು ಆಟಗಾರರು ಈ ತಂಡದಲ್ಲಿದ್ದಾರೆ.

ಈ 4 ಆಟಗಾರರಿಗೆ ಈ ಸರಣಿ ಬಹಳ ಮುಖ್ಯ

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್ ಟೂರ್ನಮೆಂಟ್​: ಟಿಕೆಟ್ ಬುಕ್​ ಮಾಡುವುದು ಹೇಗೆ? ಇಲ್ಲಿದೆ ಗೈಡ್​
Image
Asia Cup 2022: ಏಷ್ಯಾಕಪ್​ನಲ್ಲಿ ಭಾರತ- ಪಾಕ್ ಮುಖಾಮುಖಿ; ಯಾರಿಗೆ ಗೆಲುವು? ಪಾಂಟಿಂಗ್ ನುಡಿದ್ರು ಭವಿಷ್ಯ
Image
IND vs PAK: ಏಷ್ಯಾಕಪ್​ನಲ್ಲಿ ಪಾಕ್​ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿರಲಿದೆ

ಇಶಾನ್ ಕಿಶನ್

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಏಷ್ಯಾಕಪ್‌ಗೆ ಆಯ್ಕೆಯಾಗಿಲ್ಲ. ಆದರೆ ಅನೇಕ ತಜ್ಞರು ಕಿಶನ್ ಆಯ್ಕೆಯಾಗದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇಶಾನ್ ಅವರ ಇತ್ತೀಚಿನ ಪ್ರದರ್ಶನ ಏರಿಳಿತಗಳಿಂದ ತುಂಬಿದ್ದು, ಐಪಿಎಲ್‌ನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಿಶನ್ ಕೆಲವು ಅತ್ಯುತ್ತಮ ಇನ್ನಿಂಗ್ಸ್‌ ಆಡಿದ್ದರು. 2022 ರಲ್ಲಿ, ಇಶಾನ್ 14 ಇನ್ನಿಂಗ್ಸ್‌ಗಳಲ್ಲಿ 430 ರನ್ ಗಳಿಸಿದ್ದಾರೆ, ಈ ಮೂಲಕ ಈ ವರ್ಷ ಟೀಂ ಇಂಡಿಯಾ ಪರ ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್

ಡ್ಯಾಶಿಂಗ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಯಾವಾಗಲೂ ಇದೆ. ಆದರೆ ಸತತ ಅನೇಕ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲ ಎಂಬುದಂತೂ ನಿಜ. ನಾಯಕ ರೋಹಿತ್ ಶರ್ಮಾ ಅವರು ಈ ಹಿಂದೆ, ಸಂಜು ಸ್ಯಾಮ್ಸನ್ ನಮ್ಮ ಯೋಜನೆಯ ಭಾಗವಾಗಿದ್ದಾರೆ, ವಿಶೇಷವಾಗಿ ಆಸ್ಟ್ರೇಲಿಯಾದ ಬೌನ್ಸಿ ಪರಿಸ್ಥಿತಿಗಳ ವಿರುದ್ಧ, ಅವರು ಉತ್ತಮ ಬ್ಯಾಟ್ಸ್‌ಮನ್ ಎಂದು ಸಾಬೀತುಪಡಿಸಬಹುದು ಎಂದು ಹೇಳಿಕೊಂಡಿದ್ದರು. ಸಂಜು ಈ ವರ್ಷ T20 ಪಂದ್ಯಗಳಲ್ಲಿ 5 ಇನ್ನಿಂಗ್ಸ್‌ಗಳನ್ನು ಆಡಿ, 158 ಸ್ಟ್ರೈಕ್ ರೇಟ್‌ನಲ್ಲಿ 179 ರನ್ ಗಳಿಸಿದ್ದಾರೆ.

ಪ್ರಸಿದ್ಧ್ ಕೃಷ್ಣ

ಈ ಎತ್ತರದ ವೇಗದ ಬೌಲರ್ ಕಡಿಮೆ ಸಮಯದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ಕೃಷ್ಣ ಕಳೆದ ವರ್ಷ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇದುವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಇನ್ನೂ T20 ತಂಡಕ್ಕೆ ಪ್ರವೇಶ ಪಡೆಯದಿದ್ದರೂ, ಅವರ ತ್ವರಿತ ವೇಗ ಮತ್ತು ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುವ ಯಾವುದೇ ಪಿಚ್‌ನಿಂದ ಬೌನ್ಸ್ ಆಗುವ ಸಾಮರ್ಥ್ಯವು ಅವರನ್ನು ಮಾರಕವಾಗಿಸುತ್ತದೆ. ಐಪಿಎಲ್ 2022 ರಲ್ಲೂ ಅವರು ಈ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿಗೆ ಅವಕಾಶ ಪಡೆಯುವ ಸಾಧ್ಯತೆ ಇದೆ.

ಕುಲ್ದೀಪ್ ಯಾದವ್

ಅಂದ್ಹಾಗೆ, ಟೀಂ ಇಂಡಿಯಾದ ಸ್ಪಿನ್ ವಿಭಾಗ ಫುಲ್ ತುಂಬಿದ್ದು, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಯುಜ್ವೇಂದ್ರ ಚಾಹಲ್ ಜೊತೆಯಾಗಿದ್ದಾರೆ. ಇವರ ಹೊರತಾಗಿಯೂ ಕುಲ್ದೀಪ್ ಯಾದವ್​ಗೆ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ವೆಸ್ಟ್ ಇಂಡೀಸ್ ವಿರುದ್ಧ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಗಿಟ್ಟಿಸಿಕೊಂಡ ಕುಲ್ದೀಪ್ ಅದರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಯ. ಅಲ್ಲದೆ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವುದರಿಂದ ಕುಲ್ಚಾ ಜೋಡಿಯನ್ನು ಮತ್ತೊಮ್ಮೆ ಕಣಕ್ಕಿಳಿಸುವುದು ಹೆಚ್ಚು ಕಷ್ಟವಾಗುವುದಿಲ್ಲ.

Published On - 6:14 pm, Sun, 14 August 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ