ಮಾರ್ನಸ್ ಲಾಬುಶೇನ್…ಟೆಸ್ಟ್ ಕ್ರಿಕೆಟ್ ಪ್ರೇಮಿಗಳಿಗೆ ಈ ಹೆಸರು ಚಿರಪರಿಚಿತ. ಏಕೆಂದರೆ ಹೊಸ ತಲೆಮಾರಿನ ಅತ್ಯುತ್ತಮ ಟೆಸ್ಟ್ ಪ್ಲೇಯರ್ಗಳಲ್ಲಿ ಮಾರ್ನಸ್ ಕೂಡ ಒಬ್ಬರು. ಇದೇ ಕಾರಣದಿಂದಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಮಾರ್ನಸ್ ಲಾಬುಶೇನ್ ಅವರಲ್ಲಿ ವಿಶೇಷ ಬ್ಯಾಟಿಂಗ್ ಸಾಮರ್ಥ್ಯವಿದೆ ಎಂದಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಮಾರ್ನಸ್ ಬ್ಯಾಟಿಂಗ್ ಮಾಡುವಾಗ ಕಿರುಚಾಡುತ್ತಾ, ನಗಿಸುತ್ತಾ, ಬೌಲರುಗಳನ್ನು ಕೆಣಕುತ್ತಾ ಬ್ಯಾಟ್ ಬೀಸುವ ಆಟಗಾರ ಎಂಬುದು.
ಬ್ಯಾಟಿಂಗ್ ಮಾಡುವಾಗ ಇಷ್ಟೆಲ್ಲಾ ಕೀಟಲೆ ಮಾಡಿದ್ರೂ ತನ್ನ ಬ್ಯಾಟಿಂಗ್ ಮೇಲೆ ಏಕಾಗ್ರತೆಯನ್ನು ಕಳೆದುಕೊಳ್ಳುವುದಿಲ್ಲ ಎಂಬುದು ವಿಶೇಷ. ಇದಕ್ಕೆ ಸಾಕ್ಷಿಯೇ ಇದೀಗ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಮಾರ್ನಸ್ ಲಾಬುಶೇನ್ 2ನೇ ಸ್ಥಾನದಲ್ಲಿದ್ದಾರೆ.
ಟಿವಿ9 ನ ಅಂಗಸಂಸ್ಥೆ ನ್ಯೂಸ್9 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಹಾಗಿದ್ರೆ ಕಿಂಗ್ ಕೊಹ್ಲಿ ಬಗ್ಗೆ ಲಾಬುಶೇನ್ ಹೇಳಿದ್ದೇನು…?
ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಕೇಳಿದಾಗ, ಅವರೊಬ್ಬರು ಅದ್ಭುತ ಆಟಗಾರ. ನೀವು ಅವರ ಫಾರ್ಮ್ ಅನ್ನು ನಿರ್ಧರಿಸುವುದು ಶತಕ ಬಾರಿಸಿಲ್ಲ ಎಂಬ ವಿಚಾರದಿಂದ. ಇದೇ ರೀತಿಯಲ್ಲಿ ಸ್ಟೀವ್ ಸ್ಮಿತ್ ಅವರನ್ನು ಟೀಕಿಸಲಾಗಿತ್ತು. ಆದರೆ ಅವರು ಆ ಸಂದರ್ಭದಲ್ಲಿ ಅವರು ಅರ್ಧಶತಕದೊಂದಿಗೆ ಉತ್ತಮವಾಗಿಯೇ ಬ್ಯಾಟ್ ಮಾಡುತ್ತಿದ್ದರು.
ಇಲ್ಲಿ ವಿರಾಟ್ ಕೊಹ್ಲಿ ವಿಷಯದಲ್ಲೂ ಅದೇ ಆಗಿದೆ ಎಂದು ಭಾವಿಸುತ್ತೇನೆ. ಕೊಹ್ಲಿ ಅತ್ಯುತ್ತಮ ಆಟಗಾರ. ಮುಂಬರುವ ಕೆಲ ವರ್ಷಗಳಲ್ಲಿ ಅವರು ಸಾಕಷ್ಟು ರನ್ ಗಳಿಸಲಿದ್ದಾರೆ. ಹಾಗೆಯೇ ಶತಕಗಳನ್ನು ಬಾರಿಸಲಿದ್ದಾರೆ ಎಂಬುದರ ಬಗ್ಗೆ ನನಗೆ ಖಚಿತತೆ ಇದೆ. ಆದರೆ, ಅದು ಆಸ್ಟ್ರೇಲಿಯಾ ವಿರುದ್ದ ಆಗದಿರಲಿ ಎಂದು ಬಯಸುತ್ತೇನೆ ಎಂದು ಲಾಬುಶೇನ್ ನಕ್ಕರು.
ಇದೇ ವೇಳೆ ಆಸ್ಟ್ರೇಲಿಯ ಆಟಗಾರನಿಗೆ ಒಂದಷ್ಟು ರ್ಯಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪ್ರಶ್ನೋತ್ತರಗಳು ಈ ಕೆಳಗಿನಂತಿವೆ…