ಸಿಕ್ಸ್ಗಳ ಸುರಿಮಳೆ… ಯೂತ್ ಟೆಸ್ಟ್ನಲ್ಲಿ ಆಯುಷ್ ಸಿಕ್ಸರ್ ಸರದಾರ
India U19 vs England U19: ಭಾರತ ಮತ್ತು ಇಂಗ್ಲೆಂಡ್ ನಡುವಣ ಅಂಡರ್-19 ಯೂತ್ ಟೆಸ್ಟ್ ಸರಣಿಯು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ ಡ್ರಾನಲ್ಲಿ ಅಂತ್ಯವಾದರೆ, ದ್ವಿತೀಯ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಈ ಎರಡು ಮ್ಯಾಚ್ಗಳಲ್ಲೂ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಯಂಗ್ ಕ್ಯಾಪ್ಟನ್ ಆಯುಷ್ ಮ್ಹಾತ್ರೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ಯೂತ್ ಟೆಸ್ಟ್ನಲ್ಲಿ ಭಾರತ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳೊಂದಿಗೆ ಸಿಕ್ಸರ್ ಸರದಾರ ಎನಿಸಿಕೊಂಡಿದ್ದಾರೆ. ಈ ಸರಣಿಯ 2 ಟೆಸ್ಟ್ ಪಂದ್ಯಗಳ ಮೂಲಕ 18ರ ಯುವ ದಾಂಡಿಗ ಬಾರಿಸಿದ್ದು ಬರೋಬ್ಬರಿ 9 ಸಿಕ್ಸ್ಗಳು. ಈ ಮೂಲಕ 9 ವರ್ಷದೊಳಗಿನವರ ತಂಡದ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಡಿದ್ದಾರೆ.
ಇದಕ್ಕೂ ಮುನ್ನ ಅಂಡರ್-19 ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಸೌರವ್ ತಿವಾರಿ ಹೆಸರಿನಲ್ಲಿತ್ತು. 2007-08ರಲ್ಲಿ ಆಡಿದ ಯೂತ್ ಟೆಸ್ಟ್ ಸರಣಿಯಲ್ಲಿ ಸೌರವ್ ತಿವಾರಿ ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ 9 ಸಿಕ್ಸ್ ಸಿಡಿಸುವ ಮೂಲಕ ಆಯುಷ್ ಮ್ಹಾತ್ರೆ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸೂರ್ಯವಂಶಿಯನ್ನು ಹಿಂದಿಕ್ಕಿದ ಆಯುಷ್:
ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ 4 ಪಂದ್ಯಗಳ ಯೂತ್ ಟೆಸ್ಟ್ ಸರಣಿಯಲ್ಲಿ ವೈಭವ್ ಸೂರ್ಯವಂಶಿ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ತನ್ನ ಸಹ ಆಟಗಾರನ ದಾಖಲೆಯನ್ನು ಸಹ ಆಯುಷ್ ಮ್ಹಾತ್ರೆ ಮುರಿದಿದ್ದಾರೆ. ಅಂದರೆ ಕಳೆದ ವರ್ಷ ವೈಭವ್ ಬಾರಿಸಿದ 7 ಸಿಕ್ಸ್ಗಳ ದಾಖಲೆಯನ್ನು ಆಯುಷ್ 9 ಸಿಕ್ಸರ್ಗಳೊಂದಿಗೆ ಅಳಿಸಿ ಹಾಕಿದ್ದಾರೆ.
ನಾಯಕನ ದಾಖಲೆ:
ಇಂಗ್ಲೆಂಡ್ ವಿರುದ್ಧದ ಯೂತ್ ಟೆಸ್ಟ್ ಸರಣಿಯಲ್ಲಿ, ಆಯುಷ್ ಮ್ಹಾತ್ರೆ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಲ್ಲದೆ, ಯೂತ್ ಟೆಸ್ಟ್ ಸರಣಿಯ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕ ಎಂಬ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಈ ಸರಣಿಯ ದ್ವಿತೀಯ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಬಾರಿಸಿದ್ದ ಆಯುಷ್, ಎರಡನೇ ಇನ್ನಿಂಗ್ಸ್‌ನಲ್ಲಿ 126 ರನ್‌ಗಳನ್ನು ಸಿಡಿಸಿದರು. ಈ ಮೂಲಕ ಒಟ್ಟು 206 ರನ್ಗಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದನ್ನೂ ಓದಿ: Ayush Mhatre: ಆಯುಷ್ ಆರ್ಭಟಕ್ಕೆ ಮೆಕಲಂ ದಾಖಲೆ ಧೂಳೀಪಟ
ಇದಕ್ಕೂ ಮುನ್ನ ಯೂತ್ ಟೆಸ್ಟ್ ಪಂದ್ಯವೊಂದರಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ತನ್ಮಯ್ ಶ್ರೀವಾಸ್ತವ ಅವರ ಹೆಸರಿನಲ್ಲಿತ್ತು. 2006 ರಲ್ಲಿ ನಡೆದ ಯೂತ್ ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ತನ್ಮಯ್ 199 ರನ್‌ಗಳನ್ನು ಗಳಿಸಿದ್ದರು. ಇದೀಗ 206 ರನ್ಗಳೊಂದಿಗೆ ಆಯುಷ್ ಮ್ಹಾತ್ರೆ ಹೊಸ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
