ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸಿ ನಡು ರಸ್ತೆಯಲ್ಲಿ ದಂಡ ಕಟ್ಟಿದ ಪಾಕ್ ನಾಯಕ ಬಾಬರ್
Babar Azam: ಪಾಕಿಸ್ತಾನ ರಾಷ್ಟ್ರೀಯ ತಂಡದ ನಾಯಕ ಬಾಬರ್ ಆಝಂ ಎರಡೆರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಹಾಗೂ ಒನ್ ವೇನಲ್ಲಿ ಕಾರು ಚಲಾಯಿಸಿರುವ ಆರೋಪದಡಿ ಬಾಬರ್ಗೆ ದಂಡ ಹಾಕಲಾಗಿದೆ.
ಪಾಕಿಸ್ತಾನ ರಾಷ್ಟ್ರೀಯ ತಂಡದ ನಾಯಕ ಬಾಬರ್ ಆಝಂ (Babar Azam) ಎರಡೆರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಜಿಯೋ ನ್ಯೂಸ್ ವರದಿಯ ಪ್ರಕಾರ, ಏಷ್ಯಾಕಪ್‌ನಲ್ಲಿ (Asia Cup 2023) ಸೂಪರ್ 4 ಸುತ್ತಿನಲ್ಲೇ ಹೀನಾಯವಾಗಿ ಸೋತು ತವರಿಗೆ ಮರಳಿದ ಪಾಕ್ ಪಡೆಯ ನಾಯಕ ಬಾಬರ್, ಸೆಪ್ಟೆಂಬರ್ 17 ರಂದು ಲಾಹೋರ್‌ನ ಗುಲ್ಬರ್ಗ್ ಪ್ರದೇಶದಲ್ಲಿ ತಮ್ಮ ಐಷಾರಾಮಿ ಕಾರಿನಲ್ಲಿ ಒನ್ ವೇ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರ್ ಬಾಬರ್ ಅವರ ಕಾರನ್ನು ಅಡ್ಡಗಟ್ಟಿದಾರೆ. ಬಳಿಕ ಬಾಬರ್ ಬಳಿ ಕಾರಿನ ದಾಖಲೆಗಳು ಮತ್ತು ಡ್ರೈವಿಂಗ್ ಲೈಸೆನ್ಸ್ (Driving License) ಕೆಳಲಾಗಿದೆ. ಆದರೆ ಬಾಬರ್ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ನಿಯಮದಡಿಯಲ್ಲಿ ಪಾಕ್ ನಾಯಕನಿಗೆ 2000 ರೂ ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ.
ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಬಾಬರ್ ತಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಳ್ಳದೆ ಕಾರನ್ನು ಚಲಾಯಿಸಿ, ಪೊಲೀಸರಿಂದ ದಂಡಕ್ಕೆ ಗುರಿಯಾಗಿರುವ ವಿಚಾರ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಾಬರ್ ಅವರನ್ನು ಭಾರಿ ಟ್ರೋಲ್ ಮಾಡಲಾಗುತ್ತಿದೆ.
ಪಾಕ್ ತಂಡದಲ್ಲಿ ಕೋಲಾಹಲ: ಡ್ರೆಸ್ಸಿಂಗ್ ರೂಮ್ನಲ್ಲಿ ಜಗಳ! ಯಾರಿಗೂ ಹೇಳದೆ ಲಂಕಾದಿಂದ ಹೊರಟ ಬಾಬರ್
ವಿವಾದಗಳಲ್ಲಿ ಬಾಬರ್
ವಾಸ್ತವವಾಗಿ ಕೆಲವು ದಿನಗಳಿಂದ ಪಾಕ್ ನಾಯಕ ಬಾಬರ್ಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಈ ಬಾರಿ ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಏಷ್ಯಾಕಪ್ಗೆ ಎಂಟ್ರಿಕೊಟ್ಟಿದ್ದ ಪಾಕ್ ಪಡೆ ಸೂಪರ್ 4 ಸುತ್ತಿನಲ್ಲೇ ತನ್ನ ಪ್ರಯಾಣ ಮುಗಿಸಿತ್ತು. ಅಲ್ಲದೆ ಆಟಗಾರರ ಕಳಪೆ ಪ್ರದರ್ಶನಕ್ಕೆ ಅಸಮಾಧಾನ ಹೊರಹಾಕಿದ್ದ ಬಾಬರ್, ಡ್ರೆಸಿಂಗ್ ಕೋಣೆಯಲ್ಲಿ ತಂಡದ ಸಹ ಆಟಗಾರರೊಂದಿಗೆ ವಾಗ್ವಾದ ನಡೆಸಿ ಏಕಾಂಗಿಯಾಗಿ ತವರಿಗೆ ಮರಳಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಬಾಬರ್ ನಡೆಯಿಂದ ತಂಡದ ಇತರ ಆಟಗಾರರು ಬೇಸರಗೊಂಡಿದ್ದಾರೆ ಎಂಬು ವದಂತಿಯೂ ಹರಿದಾಡಿತ್ತು. ಆದರೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವದಂತಿಗಳೆಲ್ಲ ಸುಳ್ಳು ಎಂದು ಹೇಳುವ ಮೂಲಕ ಬಾಬರ್, ವದಂತಿಗಳಿಗೆ ತೆರೆ ಎಳೆದಿದ್ದರು.
ಇಂದು ಭಾರತಕ್ಕೆ ಪಾಕ್ ತಂಡ
ವಿಶ್ವಕಪ್ ಸಲುವಾಗಿ ಇಂದು ಪಾಕ್ ತಂಡ ಭಾರತಕ್ಕೆ ಕಾಲಿಡುತ್ತಿದೆ. ಇದೇ ಸೆ. 29 ರಂದು ಬಾಬರ್ ಪಡೆ ನ್ಯೂಜಿಲೆಂಡ್ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್‌ನಲ್ಲಿ ಆಡಲಿದೆ. ಹೀಗಾಗಿ ಉಭಯ ತಂಡಗಳು ಇಂದು ಹೈದರಾಬಾದ್ಗೆ ಬಂದಿಳಿಯಲ್ಲಿವೆ. ಕಿವೀಸ್ ತಂಡದ ಕೆಲವು ಆಟಗಾರರು ಈಗಾಗಲೇ ಹೈದರಾಬಾದ್ಗೆ ಬಂದಿದ್ದಾರೆ. ಉಳಿದ ಆಟಗಾರರು ಇಂದು ಸಂಜೆ ವೇಳೆಗೆ ಹೈದರಾಬಾದ್ ತಲುಪಲಿದ್ದಾರೆ. ಉಳಿದಂತೆ ಪಾಕ್ ತಂಡದ ಆಟಗಾರರು ದುಬೈ ಮೂಲಕ ಇಂದು ಹೈದರಾಬಾದ್ಗೆ ಬಂದಿಳಿಯಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ