Babar Azam: 9ನೇ ತರಗತಿ ಪಠ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಕವರ್ ಡ್ರೈವ್ ಕುರಿತು ಪ್ರಶ್ನೆ..!
Babar Azam: ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಬಾಬರ್ ಕವರ್ ಡ್ರೈವ್ ಹೊಡೆಯುವುದರಲ್ಲಿ ನಿಸ್ಸೀಮರು. ಹೀಗಾಗಿಯೇ ಅವರ ಸೂಪರ್ ಕವರ್ ಡ್ರೈವ್ಗೆ ಕೋರ್ಸ್ ಪುಸ್ತಕದಲ್ಲಿ ಸ್ಥಾನ ಸಿಕ್ಕಿದೆ.
ಯಶಸ್ಸಿನ ಉತ್ತುಂಗದಲ್ಲಿದ್ದ ಪಾಕ್ ನಾಯಕ ಬಾಬರ್ ಅಜಮ್ (Babar Azam) ಈಗ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಮೊದಲು ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್ ಕಳೆದುಕೊಂಡ ಬಾಬರ್, ಬಳಿಕ ಫೈನಲ್ನಲ್ಲಿ ಲಂಕಾ ವಿರುದ್ಧ ಸೋಲನುಭವಿಸಬೇಕಾಯಿತು. ಇದರಿಂದ ಬಾಬರ್ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದ ಬಾಬರ್ ಏಷ್ಯಾಕಪ್ ಮುಗಿಯುವ ವೇಳೆಗೆ ನಂ.3 ಸ್ಥಾನಕ್ಕೆ ಕುಸಿದಿದ್ದಾರೆ. ಆದರೀಗ ಪಾಕ್ ನಾಯಕ ಬಾಬರ್ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆ ಸುದ್ದಿ ಏನೆಂದರೆ, 9 ನೇ ತರಗತಿಯ ಮಕ್ಕಳಿಗೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕವರ್ ಡ್ರೈವ್ ಬಗ್ಗೆ ಪಠ್ಯ ಇರಿಸಲಾಗಿದೆ.
ಭೌತಶಾಸ್ತ್ರ ಪುಸ್ತಕದಲ್ಲಿ ಬಾಬರ್ ಶಾಟ್ ಕುರಿತು ಪ್ರಶ್ನೆ
ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಬಾಬರ್ ಕವರ್ ಡ್ರೈವ್ ಹೊಡೆಯುವುದರಲ್ಲಿ ನಿಸ್ಸೀಮರು. ಹೀಗಾಗಿಯೇ ಅವರ ಸೂಪರ್ ಕವರ್ ಡ್ರೈವ್ಗೆ ಕೋರ್ಸ್ ಪುಸ್ತಕದಲ್ಲಿ ಸ್ಥಾನ ಸಿಕ್ಕಿದೆ. ವಾಸ್ತವವಾಗಿ ಪಾಕಿಸ್ತಾನದ 9ನೇ ತರಗತಿಯ ಭೌತಶಾಸ್ತ್ರ ಪುಸ್ತಕದಲ್ಲಿ ಬಾಬರ್ ಅವರ ಕವರ್ ಡ್ರೈವ್ ಉಲ್ಲೇಖಿಸಿ ಈ ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಪತ್ರಕರ್ತರೊಬ್ಬರು ಈ ಪ್ರಶ್ನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಬಾಬರ್‌ಗೆ ಸಂಬಂಧಿಸಿದ ಪ್ರಶ್ನೆಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತರಿಸಿರುವ ಅಭಿಮಾನಿಗಳು ಪಾಕಿಸ್ತಾನ ಶಿಕ್ಷಣ ಮಂಡಳಿಯು ಉತ್ತಮ ಪಠ್ಯಕ್ರಮವನ್ನು ಹೊಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ಸಮಯದಲ್ಲಿ ಇನ್ನು ಕೆಲವರು, ಬಾಬರ್ ಈ ಪ್ರಶ್ನೆಯನ್ನು ನೋಡಿದರೆ ಮತ್ತೆ ಅವರು ಇಂದೆಂದು ಕವರ್ ಡ್ರೈವ್ ಹೊಡೆಯುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಕುಚೇಷ್ಟೆ ಮಾಡಿದ್ದಾರೆ.
Babar Azam's cover drive related question in 9th grade physics syllabus (federal board) (via Reddit) pic.twitter.com/I2Tc9HldsG
— Shiraz Hassan (@ShirazHassan) September 13, 2022
ಏಷ್ಯಾಕಪ್‌ನಲ್ಲಿ ಬಾಬರ್ ವಿಫಲ
ಬಾಬರ್ ಅಜಮ್ ಬಹಳ ಸಮಯದಿಂದ ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಏಷ್ಯಾಕಪ್‌ನಲ್ಲಿ ಅವರು ಎರಡನೇ ಸ್ಥಾನಕ್ಕೆ ಕುಸಿಯಬೇಕಾಯಿತು. ಅಲ್ಲದೆ ಏಷ್ಯಾಕಪ್ ಮುಗಿದ ಬಳಿಕ ಅವರು ಇನ್ನು ಒಂದು ಸ್ಥಾನ ಕಳೆದುಕೊಂಡು 3ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇನ್ನು ಎಷ್ಯಾಕಪ್ನಲ್ಲಿ ಬಾಬರ್ ಪ್ರದರ್ಶನ ನೋಡುವುದಾದರೆ ಅವರು ಸೂಪರ್ 4 ರ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗರಿಷ್ಠ 30 ರನ್ ಗಳಿಸಿದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಕ್ರಮವಾಗಿ 10, 9, 14, 0, 30, 5 ರನ್‌ಗಳು ಬಂದವು.
ಅವರು ಭಾರತದ ವಿರುದ್ಧ ಗುಂಪು ಹಂತದಲ್ಲಿ 10 ರನ್ ಮತ್ತು ಸೂಪರ್ 4 ನಲ್ಲಿ 14 ರನ್ ಗಳಿಸಿದರು. ಫೈನಲ್‌ನಲ್ಲೂ ಬಾಬರ್ ಬ್ಯಾಟ್ ಕೆಲಸ ಮಾಡಲಿಲ್ಲ. ಶ್ರೀಲಂಕಾ ವಿರುದ್ಧದ ಪ್ರಶಸ್ತಿ ಪಂದ್ಯದಲ್ಲಿ ಅವರು ಕೇವಲ 5 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ಬಾಬರ್ ಕಳಪೆ ಫಾರ್ಮ್ ಭಾರವನ್ನು ಇಡೀ ತಂಡವೇ ಅನುಭವಿಸಬೇಕಾಯಿತು. ಇದೀಗ ಎಲ್ಲರ ಕಣ್ಣು ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ.