Robin Uthappa: 25 ನೇ ವಯಸ್ಸಿನಲ್ಲಿ ಧರ್ಮ ಬದಲಾಯಿಸಿದ್ದ ರಾಬಿನ್ ಉತ್ತಪ್ಪ ಬಗ್ಗೆ ನಿಮಗೆಷ್ಟು ಗೊತ್ತು?

Robin Uthappa: ರಾಬಿನ್ ಉತ್ತಪ್ಪ ಅವರ ತಂದೆ ಹಿಂದೂ ಮತ್ತು ತಾಯಿ ಕ್ರಿಶ್ಚಿಯನ್. ಉತ್ತಪ್ಪ 25 ವರ್ಷದವರೆಗೂ ಹಿಂದುವಾಗಿಯೇ ಇದ್ದರು ಆದರೆ 2011 ರಲ್ಲಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.

Robin Uthappa: 25 ನೇ ವಯಸ್ಸಿನಲ್ಲಿ ಧರ್ಮ ಬದಲಾಯಿಸಿದ್ದ ರಾಬಿನ್ ಉತ್ತಪ್ಪ ಬಗ್ಗೆ ನಿಮಗೆಷ್ಟು ಗೊತ್ತು?
ಧೋನಿ, ಪಠಾಣ್ ಜೊತೆ ಉತ್ತಪ್ಪ
Follow us
TV9 Web
| Updated By: ಪೃಥ್ವಿಶಂಕರ

Updated on:Sep 14, 2022 | 9:09 PM

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್, ಮಾಜಿ ಆರ್​ಸಿಬಿ ಆಟಗಾರ ರಾಬಿನ್ ಉತ್ತಪ್ಪ (Robin Uthappa) ಎಲ್ಲಾ ಮಾದರಿಯ ಕ್ರಿಕೆಟ್​ಗೆ ಇಂದು ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಪರ 46 ODI ಮತ್ತು 13 T20 ಪಂದ್ಯಗಳನ್ನು ಆಡಿರುವ ಉತ್ತಪ್ಪ, ಟೀಮ್ ಇಂಡಿಯಾದ ಮೊದಲ ಟಿ20 ವಿಶ್ವಕಪ್ (T20 World Cup) ಗೆಲುವಿನ ಹೀರೋಗಳಲ್ಲಿ ಒಬ್ಬರಾಗಿದ್ದರು. ಉತ್ತಪ್ಪ, ಕರ್ನಾಟಕ ಮತ್ತು ಕೇರಳ ಪರ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದು, ಇದರಲ್ಲಿ ಅವರ ಬ್ಯಾಟ್ 9000 ಕ್ಕೂ ಹೆಚ್ಚು ರನ್ ಗಳಿಸಿದೆ. ಅದೇ ಸಮಯದಲ್ಲಿ, ಅವರು ಲಿಸ್ಟ್ ಎ ಪಂದ್ಯಗಳಲ್ಲಿಯೂ 6534 ರನ್ ಗಳಿಸಿದ್ದಾರೆ. ಟಿ20ಯಲ್ಲೂ ಅವರ ಬ್ಯಾಟ್‌ನಿಂದ 7272 ರನ್‌ಗಳು ದಾಖಲಾಗಿವೆ. ಮೈದಾನದಲ್ಲಿರುವವರೆಗೂ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಅವರ ಜೀವನದ ಐದು ಕುತೂಹಲಕಾರಿ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ.

  1. ರಾಬಿನ್ ಉತ್ತಪ್ಪ ಅವರ ತಂದೆಯ ಹೆಸರು ವೇಣು ಉತ್ತಪ್ಪ, ಇವರು ಅಂತಾರಾಷ್ಟ್ರೀಯ ಹಾಕಿಯ ರೆಫರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಕರ್ನಾಟಕ ಹಾಕಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ತಂದೆಗೆ ಹಾಕಿ ಕ್ರೀಡೆಯ ಮೇಲೆ ಪ್ರೀತಿ ಇದ್ದರೂ ಉತ್ತಪ್ಪ ಮಾತ್ರ ಕ್ರಿಕೆಟ್ ಆಯ್ದುಕೊಂಡು ಚಿಕ್ಕ ವಯಸ್ಸಿನಲ್ಲೇ ಈ ಕ್ರೀಡೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
  2. ರಾಬಿನ್ ಉತ್ತಪ್ಪ ಅವರ ತಂದೆ ಹಿಂದೂ ಮತ್ತು ತಾಯಿ ಕ್ರಿಶ್ಚಿಯನ್. ಉತ್ತಪ್ಪ 25 ವರ್ಷದವರೆಗೂ ಹಿಂದುವಾಗಿಯೇ ಇದ್ದರು ಆದರೆ 2011 ರಲ್ಲಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಉತ್ತಪ್ಪ ಜೊತೆಗೆ ಅವರ ಸಹೋದರಿ ಕೂಡ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.
  3. ರಾಬಿನ್ ಉತ್ತಪ್ಪ 10 ವರ್ಷದವರಾಗಿದ್ದಾಗ ಮೂರ್ಛೆ ರೋಗಕ್ಕೆ ತುತ್ತಾಗಿದ್ದರು (ಎಪಿಲೆಪ್ಟಿಕ್ ಸೀಜರ್).  ಚಿಕಿತ್ಸೆಯಿಂದಾಗಿ, ಅವರ ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯೆಯ ಕಂಡು ಬಂತು. ಇದರಿಂದಾಗಿ ಅವರು ತಮ್ಮ ತೂಕದಲ್ಲಿ  ಸಾಕಷ್ಟು ಏರಿಕೆ ಕಾಣಬೇಕಾಯಿತು. ಬಳಿಕ  20-25 ವರ್ಷಗಳವರೆಗೆ ಈ ಸಮಸ್ಯೆಯಿಂದ ಬಳಲಿದ್ದ ಉತ್ತಪ್ಪ, ನಂತರ  ಪೌಷ್ಟಿಕತಜ್ಞರ ಸಹಾಯದಿಂದ  ಈ ರೋಗದಿಂದ ಗುಣಮುಖರಾದರು. ಅನಂತರ ಬರೋಬ್ಬರಿ 20 ಕೆ.ಜಿ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿ ಕ್ರಿಕೆಟ್​ ಲೋಕಕ್ಕೆ ಎಂಟ್ರಿಕೊಟ್ಟರು.
  4. ಕ್ರಿಕೆಟ್​ನ ಮತ್ತಷ್ಟು ಎಬಿಸಿಡಿ ಕಲಿಯಲು ಉತ್ತಪ್ಪ, ಟೀಂ ಇಂಡಿಯಾದ ಮಾಜಿ ಬ್ಯಾಟರ್ ವೀಣ್ ಆಮ್ರೆ ಅವರನ್ನು ತಮ್ಮ ವೈಯಕ್ತಿಕ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡರು. ಹೀಗಾಗಿ ಉತ್ತಪ್ಪ ಆಡುತ್ತಿದ್ದ ಕಡೆಯಲ್ಲೆಲ್ಲಾ ಪ್ರವೀಣ್ ಆಮ್ರೆ ಅವರ ಜೊತೆ ಓಡಾಡುತ್ತಿದ್ದರು. ಆಮ್ರೆಯಿಂದಾಗಿ ಉತ್ತಪ್ಪ ತಮ್ಮ ಅನೇಕ ನ್ಯೂನತೆಗಳನ್ನು ಸರಿಪಡಿಸಿಕೊಂಡಿದ್ದಾರೆ.
  5. 2013-14ನೇ ವರ್ಷವನ್ನು ಉತ್ತಪ್ಪ ಅವರ ವೃತ್ತಿ ಜೀವನದ ಸುವರ್ಣ ವರ್ಷ ಎಂದು ಪರಿಗಣಿಸಲಾಗಿದೆ. ಈ ವರ್ಷ ಅವರು ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರು. ಬಳಿಕ ಅದೇ ವರ್ಷ ಇರಾನಿ ಟ್ರೋಫಿಯನ್ನೂ ಗೆದ್ದಿದ್ದರು. ಅಲ್ಲದೆ ಇದರೊಂದಿಗೆ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಬ್ಬರಿಸಿ, ಕೆಕೆಆರ್​ ತಂಡವನ್ನು ಚಾಂಪಿಯನ್ ಸಹ ಮಾಡಿದ್ದರು.

Published On - 8:58 pm, Wed, 14 September 22

ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ