IND vs BAN: ಬಾಂಗ್ಲಾ ತಂಡಕ್ಕೆ ಬಿಗ್ ಶಾಕ್; ಏಕದಿನ ಸರಣಿಯಿಂದ ನಾಯಕ ತಮೀಮ್ ಇಕ್ಬಾಲ್ ಔಟ್..!

| Updated By: ಪೃಥ್ವಿಶಂಕರ

Updated on: Dec 02, 2022 | 11:26 AM

IND vs BAN: ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ ಇಂಜುರಿಯಿಂದಾಗಿ ಇಡೀ ಏಕದಿನ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

IND vs BAN: ಬಾಂಗ್ಲಾ ತಂಡಕ್ಕೆ ಬಿಗ್ ಶಾಕ್; ಏಕದಿನ ಸರಣಿಯಿಂದ ನಾಯಕ ತಮೀಮ್ ಇಕ್ಬಾಲ್ ಔಟ್..!
ಬಾಂಗ್ಲಾ ತಂಡ
Follow us on

ಭಾರತ ಹಾಗೂ ಬಾಂಗ್ಲಾದೇಶ (Bangladesh vs India) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರದಂದು ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬಾಂಗ್ಲಾ ತಂಡದಲ್ಲಿ ಆಟಗಾರರ ಗಾಯದ ಸರಣಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ದಿನದ ಹಿಂದೆ ಅಂದರೆ ಡಿ.1ರಂದು ಇಂಜುರಿಯಿಂದಾಗಿ ತಂಡದ ವೇಗದ ಬೌಲರ್ ತಸ್ಕಿನ್ ಅಹ್ಮದ್ (Taskin Ahmed) ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯಿಂದ ಮಾಹಿತಿ ಹೊರಬಿದ್ದಿತ್ತು. ಇದೀಗ ಬಂದಿರುವ ಮಾಹಿತಿ ಪ್ರಕಾರ ಬಾಂಗ್ಲಾ ತಂಡ ತನ್ನ ನಿಯಮಿತ ನಾಯಕನಿಲ್ಲದೆ ಇಡೀ ಟೂರ್ನಿಯನ್ನು ಆಡಬೇಕಿದೆ. ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ (Tamim Iqbal) ಇಂಜುರಿಯಿಂದಾಗಿ ಇಡೀ ಏಕದಿನ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಗುರುವಾರವಷ್ಟೇ ಭಾರತ ತಂಡ ಬಾಂಗ್ಲಾದೇಶ ತಲುಪಿದೆ. ಮೊದಲ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಬುಧವಾರ (ಡಿಸೆಂಬರ್ 07) ನಡೆದರೆ, ಮೂರನೇ ಪಂದ್ಯ ಶನಿವಾರ (ಡಿಸೆಂಬರ್ 10) ನಡೆಯಲಿದೆ. ಬಾಂಗ್ಲಾದೇಶದ ನಾಯಕ ತಮೀಮ್ ಗಾಯದ ಸಮಸ್ಯೆಯಿಂದಾಗಿ ಈ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ: IPL auction 2023: ಒಬ್ಬ ಭಾರತೀಯನ ಹೆಸರಿಲ್ಲ! 2 ಕೋಟಿ ಮೂಲ ಬೆಲೆಯಲ್ಲಿ 21 ವಿದೇಶಿ ಆಟಗಾರರು

ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿದ್ದ ತಮೀಮ್ ಇಕ್ಬಾಲ್

ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಅಭ್ಯಾಸ ಪಂದ್ಯದ ವೇಳೆ ತಮೀಮ್ ಗಾಯಗೊಂಡಿದ್ದರು. ಅವರು ತೊಡೆಸಂದು ಗಾಯದಿಂದ ಬಳಲುತ್ತಿದ್ದು, ಸುಮಾರು ಎರಡು ವಾರಗಳ ಕಾಲ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ವರದಿಯಾಗಿದೆ. ಡಿಸೆಂಬರ್ 14 ರಿಂದ ಉಭಯ ದೇಶಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಅಷ್ಟರೊಳಗೆ ಅವರು ಫಿಟ್ ಆಗುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ತಮೀಮ್ ಅಲಭ್ಯತೆಯಿಂದಾಗಿ ಶಕೀಬ್ ಅಲ್ ಹಸನ್‌ಗೆ ತಂಡದ ನಾಯಕತ್ವ ನೀಡುವ ಸಾಧ್ಯತೆಗಳಿವೆ.

ತಸ್ಕಿನ್ ಅಹ್ಮದ್ ಕೂಡ ಔಟ್

ಬಾಂಗ್ಲಾದೇಶದ ವೇಗದ ದಾಳಿಯ ಮುಂಚೂಣಿಯಲ್ಲಿರುವ ತಸ್ಕಿನ್ ಅಹ್ಮದ್ ಬೆನ್ನುನೋವಿನ ಕಾರಣದಿಂದ ಡಿಸೆಂಬರ್ 4 ರಂದು ಮೀರ್‌ಪುರದಲ್ಲಿ ನಡೆಯಲ್ಲಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಆಯ್ಕೆ ಸಮಿತಿ ಅಧ್ಯಕ್ಷ ಮಿನ್ಹಾಜುಲ್ ಅಬೇದಿನ್ ನೀಡಿದ್ದಾರೆ

ಬಾಂಗ್ಲಾದೇಶ ಏಕದಿನ ತಂಡ

ತಮೀಮ್ ಇಕ್ಬಾಲ್ (ನಾಯಕ/ ಬದಲಿ ನಾಯಕನ ಅಧಿಕೃತ ಆಯ್ಕೆಯಾಗಿಲ್ಲ), ಲಿಟ್ಟನ್ ದಾಸ್, ಅನಾಮುಲ್ ಹಕ್ ಬಿಜೋಯ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್ (ಇಂಜುರಿ), ಹಸನ್ ಮಹಮೂದ್, ಇಬಾದತ್ ಹುಸೇನ್, ನಸುಮದ್ ಅಹ್ಮದ್, ನಜ್ಮುಲ್ ಹೊಸೈನ್ ಶಾಂತೋ, ಖಾಜಿ, ನೂರುಲ್ ಹಸನ್ ಸೋಹನ್, ಶೋರಿಫುಲ್ ಹಸನ್ (ಬ್ಯಾಕಪ್ ಆಟಗಾರ).

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ