ವಿಶ್ವದ ಬೆಸ್ಟ್ ಆಟಗಾರನನ್ನು ಬದಿಗಿಟ್ಟು ಮತ್ಯಾರನ್ನೋ ಆಡಿಸುತ್ತಿದ್ದಾರೆ; ಬಿಸಿಸಿಐ ಕಾಲೆಳೆದ ಪಾಕ್ ಮಾಜಿ ನಾಯಕ

Rishabh Pant: ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಪಂತ್, ಸೂರ್ಯಕುಮಾರ್ ಯಾದವ್ ಅವರಿಗಿಂತ ಮುಂದೆ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಪಂತ್ ವೈಟ್ ಬಾಲ್ ಕ್ರಿಕೆಟಿಗನಲ್ಲ. ಆತ ಟೆಸ್ಟ್ ಆಟಗಾರ ಎಂದಿದ್ದಾರೆ.

ವಿಶ್ವದ ಬೆಸ್ಟ್ ಆಟಗಾರನನ್ನು ಬದಿಗಿಟ್ಟು ಮತ್ಯಾರನ್ನೋ ಆಡಿಸುತ್ತಿದ್ದಾರೆ; ಬಿಸಿಸಿಐ ಕಾಲೆಳೆದ ಪಾಕ್ ಮಾಜಿ ನಾಯಕ
ಸೂರ್ಯಕುಮಾರ್, ರಿಷಬ್ ಪಂತ್
Follow us
TV9 Web
| Updated By: ಪೃಥ್ವಿಶಂಕರ

Updated on:Dec 02, 2022 | 2:27 PM

ಸಿಹಿ- ಕಹಿಯೊಂದಿಗೆ ನ್ಯೂಜಿಲೆಂಡ್ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ (Team India) ಇದೀಗ ಬಾಂಗ್ಲಾ ಪ್ರವಾಸಕ್ಕೆ ಅಣಿಯಾಗಿದೆ. ಭಾನುವಾರದಿಂದ ಏಕದಿನ ಸರಣಿ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಉಭಯ ತಂಡಗಳು ಸಿದ್ದತೆ ಪೂರ್ಣಗೊಳಿಸಿವೆ. ಆದರೆ ಈ ನಡುವೆ ಕಳೆದ ಕೆಲವು ದಿನಗಳಿಂದ ಸತತ ವೈಫಲ್ಯ ಕಾಣುತ್ತಿರುವ ರಿಷಬ್ ಪಂತ್ (Rishabh Pant)​ ಬಗ್ಗೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿವೆ. ಏಷ್ಯಾಕಪ್​ನಿಂದ ಆರಂಭವಾದ ಪಂತ್ ಕಳಪೆ ಫಾರ್ಮ್​ ಸರಣಿ ಇಲ್ಲಿಯವರೆಗೂ ಮುಂದುವರೆದಿದೆ. ಕಿವೀಸ್ ಪ್ರವಾಸದಲ್ಲೂ ಪಂತ್ ಸಂಪೂರ್ಣ ವಿಫಲರಾದರು. ಮತ್ತೊಂದೆಡೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಕೂಡ ಏಕದಿನ ಸರಣಿಯಲ್ಲಿ ಯಶಸ್ಸು ಸಾಧಿಸಲಿಲ್ಲ. ಕಳಪೆ ಬ್ಯಾಟಿಂಗ್ ವಿಚಾರದಲ್ಲಿ ಸೂರ್ಯಕುಮಾರ್ ಹೆಚ್ಚು ಚರ್ಚೆಯಾಗದಿದ್ದರು, ಪಂತ್ ಮಾತ್ರ ಹಲವು ಕ್ರಿಕೆಟ್ ಪರಿಣಿತರ ಬಾಯಿಗೆ ತುತ್ತಾಗಿದ್ದಾರೆ. ಇದೀಗ ಟೀಕಿಸುವವರ ಸಾಲಿಗೆ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಸೇರಿಕೊಂಡಿದ್ದಾರೆ.

ರಿಷಬ್ ಪಂತ್ ವೈಟ್ ಬಾಲ್ ಆಟಗಾರ ಅಲ್ಲ..

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ನಂತರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಲ್ಮಾನ್ ಬಟ್, ಪಂತ್ ಆಕರ್ಷಕ ಆಟಗಾರ. ಆದರೆ ಅತ್ಯಂತ ಮುಕ್ತವಾಗಿ ಆಡಿದರೂ ನ್ಯೂಜಿಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಲ್ಲದೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಪಂತ್, ಸೂರ್ಯಕುಮಾರ್ ಯಾದವ್ ಅವರಿಗಿಂತ ಮುಂದೆ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಪಂತ್ ವೈಟ್ ಬಾಲ್ ಕ್ರಿಕೆಟಿಗನಲ್ಲ. ಆತ ಟೆಸ್ಟ್ ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರ ಎಂದಿದ್ದಾರೆ.

ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅತ್ಯುತ್ತಮ ಕ್ರಿಕೆಟ್ ಆಡುವ ಆಟಗಾರನ ಬದಲಿಗೆ ಫಾರ್ಮ್‌ನಿಂದ ಹೊರಗಿರುವ ಬ್ಯಾಟ್ಸ್‌ಮನ್‌ನನ್ನು ಮೊದಲು ಆಡಿಸುತ್ತಿದೆ. ಅದರಲ್ಲೂ ಇನ್-ಫಾರ್ಮ್ ಬ್ಯಾಟ್ಸ್‌ಮನ್‌ಗಳು ಹೆಚ್ಚು ಓವರ್‌ಗಳನ್ನು ಆಡಬೇಕು. ಹೀಗಾಗಿ ಫಾರ್ಮ್​ ಕಳೆದುಕೊಂಡಿರುವ ಪಂತ್ ಬದಲು ಫಾರ್ಮ್​ನಲ್ಲಿರುವ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್​ಗೆ ಇಳಿಯಬೇಕು.

ಇದನ್ನೂ ಓದಿ: 220, 168, 108.. ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಅಬ್ಬರ! ಫೈನಲ್​ನಲ್ಲೂ ಶತಕ ಸಿಡಿಸಿದ ಗಾಯಕ್ವಾಡ್

ಇದು ಬ್ಯಾಟ್ಸ್‌ಮನ್‌ನ ಮೇಲೆ ಪರಿಣಾಮ ಬೀರುತ್ತದೆ

ಆದರೆ ಟೀಂ ಇಂಡಿಯಾದಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಿಲ್ಲ. ಇದು ಇನ್-ಫಾರ್ಮ್ ಆಟಗಾರನ ಮೇಲೆ ಪರಿಣಾಮ ಬೀರಬಹುದು. ಬಿಸಿಸಿಐನ ಈ ಕ್ರಮ ಸೂರ್ಯಕುಮಾರ್ ಯಾದವ್ ಮೇಲೆ ಪರಿಣಾಮ ಬೀರುತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್ ಸಾಧ್ಯವಾದಷ್ಟು ಎಸೆತಗಳನ್ನು ಆಡಲು ಬಯಸುತ್ತಾನೆ ಎಂದು ಬಟ್ ಹೇಳಿದ್ದಾರೆ.

ಕಿವೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಎರಡನ್ನೂ ಆಡಿದ್ದ ಪಂತ್, ಟಿ20 ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ಕೇವಲ 8.50 ಸರಾಸರಿಯಲ್ಲಿ 17 ರನ್ ಗಳಿಸಿದ್ದರು. ಏತನ್ಮಧ್ಯೆ, 3 ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಿದ 2 ಇನ್ನಿಂಗ್ಸ್‌ಗಳಲ್ಲಿ ಅವರು 12.50 ಸರಾಸರಿಯಲ್ಲಿ 25 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:27 pm, Fri, 2 December 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್