220, 168, 108.. ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಅಬ್ಬರ! ಫೈನಲ್​ನಲ್ಲೂ ಶತಕ ಸಿಡಿಸಿದ ಗಾಯಕ್ವಾಡ್

Ruturaj Gaikwad: ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ ರುತುರಾಜ್ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 108 ರನ್ ಗಳಿಸಿ ರನೌಟ್​ಗೆ ಬಲಿಯಾದರು.

220, 168, 108.. ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಅಬ್ಬರ! ಫೈನಲ್​ನಲ್ಲೂ ಶತಕ ಸಿಡಿಸಿದ ಗಾಯಕ್ವಾಡ್
Ruturaj Gaikwad
Follow us
TV9 Web
| Updated By: ಪೃಥ್ವಿಶಂಕರ

Updated on:Dec 02, 2022 | 1:09 PM

ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಫೈನಲ್ (Vijay Hazare Trophy Final) ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಮತ್ತೊಂದು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇಡೀ ಟೂರ್ನಿಯೂದ್ದಕ್ಕೂ ಶತಕಗಳ ಸುರಿಮಳೆಗೈದಿರುವ ರುತುರಾಜ್ ತಂಡ ಫೈನಲ್ ತಲುಪುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿರುವ ರುತುರಾಜ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿದೆ. ಅದರಲ್ಲೂ ನಾಯಕನ ಇನ್ನಿಂಗ್ಸ್ ಆಡಿದ ರುತುರಾಜ್ ತಂಡ ಈ ಟಾರ್ಗೆಟ್ ಸೆಟ್ ಮಾಡುವಲ್ಲಿ ಶತಕದ ಕೊಡುಗೆ ನೀಡಿದ್ದಾರೆ.

ಈ ಶತಕದೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಕೊನೆಯ 5 ಇನ್ನಿಂಗ್ಸ್‌ಗಳಲ್ಲಿ ಅವರ ಬ್ಯಾಟ್‌ನಿಂದ ಸಿಡಿದ ಸತತ ಮೂರನೇ ಮತ್ತು ಒಟ್ಟಾರೆ ನಾಲ್ಕನೇ ಶತಕ ಇದಾಗಿದೆ. ಅಸ್ಸಾಂ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ 168 ರನ್​ಗಳ ಬೃಹತ್ ಇನ್ನಿಂಗ್ಸ್ ಆಡಿದ್ದ ರುತುರಾಜ್ ತಂಡದ ಗೆಲುವಿನ ಪ್ರಮುಖ ಪಾತ್ರವಹಿಸಿದ್ದರು. ಈ ಇನ್ನಿಂಗ್ಸ್​ಗೂ ಮುನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ರುತುರಾಜ್ ಒಂದೇ ಓವರ್​ನಲ್ಲಿ ಭರ್ಜರಿ 7 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.

ಇದನ್ನೂ ಓದಿ: Breaking News: ಒಂದೇ ಓವರ್​ನಲ್ಲಿ 7 ಸಿಕ್ಸರ್..! 16 ಸಿಕ್ಸರ್, 10 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಸಿಡಿಸಿದ ರುತುರಾಜ್..!

ಮಹಾರಾಷ್ಟ್ರ ಕಳಪೆ ಆರಂಭ

ತಮ್ಮ ಮೂರನೇ ವಿಜಯ್ ಹಜಾರೆ ಟ್ರೋಫಿ ಫೈನಲ್ ಆಡುತ್ತಿರುವ ಸೌರಾಷ್ಟ್ರ ತಂಡ ಮಹಾರಾಷ್ಟ್ರ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಹಾಗೂ ಪವನ್ ಶಾ ಬೃಹತ್ ಜೊತೆಯಾಟ ನಡೆಸುವಲ್ಲಿ ವಿಫಲರಾದರು. 4 ರನ್ ಗಳಿಸಿದ್ದ ಪವನ್ ಶಾ ವಿಕೆಟ್ ಒಪ್ಪಿಸುವುದರೊಂದಿಗೆ ತಂಡಕ್ಕೆ ಮೊದಲ ಹಿನ್ನಡೆಯುಂಟು ಮಾಡಿದರು. ಆದರೆ ಇದಾದ ಬಳಿಕ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸುವಲ್ಲಿ ಸತ್ಯಜಿತ್ ಹಾಗೂ ರುತುರಾಜ್ ಯಶಸ್ವಿಯಾದರು. ಆದರೆ ಮೂರನೇ ವಿಕೆಟ್ ಮತ್ತೊಮ್ಮೆ ಬೇಗನೆ ಪತನವಾಯಿತು. ಹೀಗಾಗಿ 32ನೇ ಓವರ್​ವರೆಗೆ ಮಹಾರಾಷ್ಟ್ರ ತಂಡ 3 ವಿಕೆಟ್ ಕಳೆದುಕೊಂಡು ಕೇವಲ 105 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಂತಿಮ ಪಂದ್ಯದಲ್ಲಿ ರುತುರಾಜ್ ಶತಕ

ಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರದ ನಿಧಾನಗತಿಯ ಆರಂಭದಿಂದಾಗಿ ರುತುರಾಜ್ ಅವರ ಬ್ಯಾಟ್‌ ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಒಂದೆಡೆ ವಿಕೆಟ್ ಉರುಳುತ್ತಿದ್ದರು ಕ್ರೀಸ್​ನಲ್ಲಿ ನೆಲಕಚ್ಚಿ ನಿಂತ ರುತುರಾಜ್ ನಿದಾನವಾಗಿ ರನ್ ಪೇರಿಸುತ್ತಾ ತಂಡವನ್ನು ಸಂಕಷ್ಟದಿಂದ ಹೊರತಂದಿದಲ್ಲದೆ ಸತತ 3ನೇ ಶತಕವನ್ನು ಬಾರಿಸಿದರು. ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ ರುತುರಾಜ್ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 108 ರನ್ ಗಳಿಸಿ ರನೌಟ್​ಗೆ ಬಲಿಯಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Fri, 2 December 22