Breaking News: ಒಂದೇ ಓವರ್​ನಲ್ಲಿ 7 ಸಿಕ್ಸರ್..! 16 ಸಿಕ್ಸರ್, 10 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಸಿಡಿಸಿದ ರುತುರಾಜ್..!

Vijay Hazare Trophy: ಉತ್ತರ ಪ್ರದೇಶ ಬೌಲರ್​ಗಳನ್ನು ಮನಬಂದಂತೆ ದಂಡಿಸಿರುವ ರುತುರಾಜ್ ಕೇವಲ 159 ಎಸೆತಗಳಲ್ಲಿ 220 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. ಅದರಲ್ಲೂ ಒಂದೇ ಓವರ್​ನಲ್ಲಿ ಭರ್ಜರಿ 7 ಸಿಕ್ಸರ್ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ.

Breaking News: ಒಂದೇ ಓವರ್​ನಲ್ಲಿ 7 ಸಿಕ್ಸರ್..! 16 ಸಿಕ್ಸರ್, 10 ಬೌಂಡರಿ ಸಹಿತ ಸ್ಫೋಟಕ ದ್ವಿಶತಕ ಸಿಡಿಸಿದ ರುತುರಾಜ್..!
Ruturaj Gaikwad
Follow us
TV9 Web
| Updated By: ಪೃಥ್ವಿಶಂಕರ

Updated on:Nov 28, 2022 | 3:43 PM

ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಕ್ವಾಟರ್ರ್​ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿದೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆಟಗಾರ ರುತುರಾಜ್ ಕಾಯಕ್ವಾಡ್ (Ruturaj Gaikwad) ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಉತ್ತರ ಪ್ರದೇಶ ಬೌಲರ್​ಗಳನ್ನು ಮನಬಂದಂತೆ ದಂಡಿಸಿರುವ ರುತುರಾಜ್ ಕೇವಲ 159 ಎಸೆತಗಳಲ್ಲಿ 220 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್​ಗೆ ಇಳಿದ ಮಹಾರಾಷ್ಟ್ರದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್ ತ್ರಿಪಾಠಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಸತ್ಯಜಿತ್ ಕೂಡ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಉತ್ತರ ಪ್ರದೇಶ ತಂಡದ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 159 ಎಸೆತಗಳನ್ನು ಎದುರಿಸಿದ ರುತುರಾಜ್ 10 ಬೌಂಡರಿ, ಬರೋಬ್ಬರಿ 16 ಸಿಕ್ಸರ್ ನೇರವಿನಿಂದ 220 ರನ್ ಬಾರಿಸಿದರು.

49ನೇ ಓವರ್​ನಲ್ಲಿ ವಿಶ್ವದಾಖಲೆ

ಮಹಾರಾಷ್ಟ್ರ ಇನ್ನಿಂಗ್ಸ್​ನ 49ನೇ ಓವರ್​ನಲ್ಲಿ ಉಗ್ರರೂಪ ತಾಳಿದ ರುತುರಾಜ್ ಒಂದೇ ಓವರ್​ನಲ್ಲಿ ಬರೋಬ್ಬರಿ 7 ಸಿಕ್ಸರ್ ಸಿಡಿಸಿದರು. ಈ ಓವರ್​ನಲ್ಲಿ ಒಂದು ನೋ ಬಾಲ್ ಕೂಡ ಆಗಿದ್ದು, ಆ ಎಸೆತದಲ್ಲೂ ರುತುರಾಜ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 7 ಸಿಕ್ಸರ್ ಸಿಡಿಸಿದ ದಾಖಲೆಯನ್ನು ರುತುರಾಜ್ ಬರೆದಿದ್ದಾರೆ. ಉತ್ತರ ಪ್ರದೇಶ ಪರ 49ನೇ ಓವರ್ ಎಸೆಯಲು ಬಂದ ವೇಗಿ ಶಿವಂ ಸಿಂಗ್ ಅವರ ಮೊದಲೆರಡು ಎಸೆತಗಳನ್ನು ಮಿಡ್ ಆನ್​ನಲ್ಲಿ ಸಿಕ್ಸರ್​ಗಟ್ಟಿದರು. 3ನೇ ಎಸೆತವನ್ನು ಮಿಡ್ ವಿಕೆಟ್ ಮೇಲೆ ಸಿಕ್ಸರ್​ಗಟ್ಟಿದ ರುತುರಾಜ್ 4ನೇ ಎಸೆತವನ್ನು ಮಿಡ್​ ಆಫ್​ ಮೇಲೆ ಸಿಕ್ಸರ್ ಬಾರಿಸಿದರು. ಬಳಿಕ ಐದನೇ ಎಸೆತ ನೋ ಬಾಲ್ ಆಗಿದ್ದು, ಆ ಎಸೆತವನ್ನು ರುತುರಾಜ್ ಮಿಡ್ ಆಫ್​ನಲ್ಲಿ ಸಿಕ್ಸರ್​ಗಟ್ಟಿದರು. ಬಳಿಕ ಸಿಕ್ಕ ಫ್ರಿ ಹಿಟ್ ಎಸೆತದಲ್ಲೂ ಸಿಕ್ಸರ್ ಸಿಡಿಸಿದ ಗಾಯಕ್ವಾಡ್, 6ನೇ ಎಸೆತವನ್ನು ಮಿಡ್ ಆಫ್​ ಮೇಲೆ ಸಿಕ್ಸರ್​ಗಟ್ಟಿದರು. ಹೀಗಾಗಿ 49ನೇ ಓವರ್​ನಲ್ಲಿ ದಾಖಲೆಯ 43 ರನ್​ಗಳು ಹರಿದುಬಂದವು.

ಇದನ್ನೂ ಓದಿ: IND vs NZ: 3ನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿ..! ಸರಣಿ ಸೋಲುವ ಆತಂಕದಲ್ಲಿ ಟೀಂ ಇಂಡಿಯಾ

ಬೌಂಡರಿಗಳಿಂದಲೇ 136 ರನ್

ಈ ಪಂದ್ಯದಲ್ಲಿ ಬರೋಬ್ಬರಿ 10 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದ ರುತುರಾಜ್ ಕೇವಲ ಬೌಂಡರಿಗಳಿಂದಲೇ 136 ರನ್ ಕಲೆ ಹಾಕಿದರು. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ದಾಖಲೆಯನ್ನು ರುತುರಾಜ್ ಬರೆದರು. ಮತ್ತೊಂದೆಡೆ, ಒಂದು ಓವರ್‌ನಲ್ಲಿ 43 ರನ್ ನೀಡಿದ ದುಬಾರಿ ಬೌಲರ್ ಎನ್ನುವ ಕುಖ್ಯಾತಿಗೆ ಶಿವ ಸಿಂಗ್ ಭಾಜನರಾದರು. ಇದಕ್ಕೂ ಮುನ್ನ ಈ ದಾಖಲೆ ಒಂದೇ ಓವರ್‌ನಲ್ಲಿ 38 ರನ್ ನೀಡಿದ ವೇಗಿ ಜೇಮ್ಸ್ ಫುಲ್ಲರ್ ಹೆಸರಿನಲ್ಲಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Mon, 28 November 22

ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಸ್ನೇಹಿತೆ ಶಶಿಕಲಾಗೆ ಪಾರ್ಸೆಲ್ ಯಾರು ಕಳಿಸಿದ್ದರು ಅನ್ನೋದು ಇನ್ನೂ ನಿಗೂಢ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಊರಿಗೆ ಚಿರತೆ ಭಯ, ಮಹಿಳೆಯನ್ನ ಬಲಿ ಪಡೆದ ಕೂಗಳತೆಯಲ್ಲೇ ಮಲಗಿದ ಭೂಪ
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ: ಲಾಡ್
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಬಿಮ್ಸ್​ ಆಡಳಿತ ವ್ಯವಸ್ಥೆ ಹಳಿತಪ್ಪಿದೆ, ಸರಿಮಾಡುವ ಅವಶ್ಯಕತೆಯಿದೆ: ಸಚಿವೆ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
ಜಿಂಕೆ ಹಿಂಡನ್ನು ಹೆದರಿಸಿದ 3 ಯುವಕರಿಗೆ ಬಿತ್ತು 15,000 ರೂ. ದಂಡ
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಸಚಿವೆ ಹೇಳಿದ್ದೇನು?
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್
ಅತೃಪ್ತ ಶಾಸಕರಿಗೆ ಅನುದಾನ ನೀಡಲು ಬಿಪಿಎಲ್ ಕಾರ್ಡ್ ರದ್ದು: ಅಶೋಕ
ಅತೃಪ್ತ ಶಾಸಕರಿಗೆ ಅನುದಾನ ನೀಡಲು ಬಿಪಿಎಲ್ ಕಾರ್ಡ್ ರದ್ದು: ಅಶೋಕ