Ruturaj Gaikwad: 11 ಬೌಂಡರಿ, 5 ಸಿಕ್ಸರ್, 112 ರನ್! ದೇಶೀ ಟೂರ್ನಿಯಲ್ಲಿ ರುತುರಾಜ್ ಅಬ್ಬರದ ಶತಕ

Syed Mushtaq Ali Trophy: ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಒಟ್ಟು 65 ಎಸೆತಗಳಲ್ಲಿ 112 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ ಗಾಯಕ್ವಾಡ್‌ 172.30 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರು.

Ruturaj Gaikwad: 11 ಬೌಂಡರಿ, 5 ಸಿಕ್ಸರ್, 112 ರನ್! ದೇಶೀ ಟೂರ್ನಿಯಲ್ಲಿ ರುತುರಾಜ್ ಅಬ್ಬರದ ಶತಕ
ಶತಕ ಸಿಡಿಸಿದ ರುತುರಾಜ್
Follow us
TV9 Web
| Updated By: ಪೃಥ್ವಿಶಂಕರ

Updated on: Oct 12, 2022 | 3:42 PM

ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಿದಾನಗತಿಯ ಬ್ಯಾಟಿಂಗ್​ನಿಂದ ಎಲ್ಲರ ಟೀಕೆಗೆ ಗುರಿಯಾಗಿದ್ದ ರುತುರಾಜ್ ಗಾಯಕ್ವಾಡ್ (Ruturaj Gaikwad) ದೇಶೀ ಟೂರ್ನಿಯಲ್ಲಿ ರನ್ ಮಳೆ ಸುರಿಸಿದ್ದಾರೆ. ಅದ್ಯಾಕೋ ಏನೋ ರುತುರಾಜ್​ಗೆ ಬ್ಲೂ ಜೆರ್ಸಿ ಆಗಿಬರುವುದಿಲ್ಲ ಎಂದು ತೋರುತ್ತದೆ. ಐಪಿಎಲ್ ಸೇರಿ ದೇಶೀ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ತೋರಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಡುವ ರುತುರಾಜ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ, ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬರೋಬ್ಬರಿ 42 ಎಸೆತಗಳನ್ನು ಎದುರಿಸಿದ್ದ ರುತುರಾಜ್ ಕೇವಲ 19 ರನ್​ಗಳಿಸಿದ್ದರು. ಹೀಗಾಗಿ ಮೊದಲ ಏಕದಿನ ಪಂದ್ಯದ ಬಳಿಕ ತಂಡದಿಂದ ಅವರನ್ನು ಕೈಬಿಡಲಾಗಿತ್ತು. ಆದರೀಗ ದೇಶೀ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy) ಅಬ್ಬರದ ಶತಕ ಸಿಡಿಸುವ ಮೂಲಕ ರುತುರಾಜ್ ಆಯ್ಕೆಗಾರರ ಗಮನ ಸೆಳೆದಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ಪರ ಆಡುತ್ತಿರುವ ಗಾಯಕ್ವಾಡ್, ಸರ್ವಿಸಸ್ ತಂಡದ ವಿರುದ್ಧ ರನ್ ಮಳೆ ಸುರಿಸಿದ್ದಾರೆ. ಕೇವಲ 59 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಅವರ ಶತಕದ ಆದಾರದ ಮೇಲೆ ಮಹಾರಾಷ್ಟ್ರ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್ ಗಳಿಸಿದೆ.

65 ಎಸೆತಗಳಲ್ಲಿ 112 ರನ್

ಸರ್ವಿಸಸ್ ವಿರುದ್ಧ ಮಹಾರಾಷ್ಟ್ರ ಮೊದಲು ಬ್ಯಾಟ್ ಮಾಡಿತು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಒಟ್ಟು 65 ಎಸೆತಗಳಲ್ಲಿ 112 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ ಗಾಯಕ್ವಾಡ್‌ 172.30 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಗಾಯಕ್ವಾಡ್ ಕೇವಲ 59 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಕೇವಲ 17 ಎಸೆತಗಳಲ್ಲಿ 78 ರನ್

ರುತುರಾಜ್ ಗಾಯಕ್ವಾಡ್ ತಮ್ಮ ಶತಕವನ್ನು ಕೇವಲ 17 ಎಸೆತಗಳಲ್ಲಿ 78 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ರುತುರಾಜ್ 5 ಸಿಕ್ಸರ್‌ಗಳಿಂದ 30 ರನ್ ಗಳಿಸಿದರೆ, 12 ಬೌಂಡರಿಗಳಿಂದ 40 ರನ್ ಗಳಿಸಿದರು. ಮಹಾರಾಷ್ಟ್ರದ ಪರ ರುತುರಾಜ್ ಗಾಯಕ್ವಾಡ್ ಬಿಟ್ಟರೆ ಬೇರಾವ ಬ್ಯಾಟ್ಸ್​ಮನ್ ಕೂಡ ಹೆಚ್ಚು ಸದ್ದು ಮಾಡಲಿಲ್ಲ. ರುತುರಾಜ್ ಜೊತೆ ಇನ್ನಿಂಗ್ಸ್‌ ಆರಂಭಿಸಿದ ಯಶ್ ನಹರ್ ಕೇವಲ 1 ರನ್ ಗಳಿಸಿದರೆ, ರಾಹುಲ್ ತ್ರಿಪಾಠಿ ಕೇವಲ 19 ರನ್​ಗಳಿಗೆ ಸುಸ್ತಾದರು. ಅದೇ ವೇಳೆ 24 ರನ್ ಗಳಿಸಿದ ನೌಶಾದ್ ಶೇಖ್ ತಂಡದ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಮೋಹಿತ್- ಪುಲ್ಕಿತ್ ಉತ್ತಮ ಬೌಲಿಂಗ್

ಇತ್ತ ರುತುರಾಜ್ ಹೊರತಾಗಿ ಮಹಾರಾಷ್ಟ್ರ ತಂಡದ ಇತರ ಬ್ಯಾಟರ್​ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಸರ್ವಿಸಸ್‌ ತಂಡದ ಬೌಲಿಂಗ್ ವಿಭಾಗದಲ್ಲಿ ಮೋಹಿತ್ ಕುಮಾರ್ ಮತ್ತು ಪುಲ್ಕಿತ್ ನಗರ್ ಪಾತ್ರ ಅಧಿಕವಾಗಿತ್ತು. ಮಹಾರಾಷ್ಟ್ರ ಪರ ಉರುಳಿದ 6 ವಿಕೆಟ್‌ಗಳಲ್ಲಿ 5 ವಿಕೆಟ್‌ಗಳನ್ನು ಉರುಳಿಸುವಲ್ಲಿ ಈ ಇಬ್ಬರು ಬೌಲರ್​ಗಳು ಯಶಸ್ವಿಯಾದರು. ಮೋಹಿತ್ 4 ಓವರ್‌ಗಳಲ್ಲಿ 42 ರನ್ ನೀಡಿ 3 ವಿಕೆಟ್ ಪಡೆದರೆ, ಪುಲ್ಕಿತ್ 4 ಓವರ್‌ಗಳಲ್ಲಿ 41 ರನ್ ನೀಡಿ 2 ವಿಕೆಟ್ ಪಡೆದರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ