Abu Dhabi T10: ಕೇವಲ 28 ಎಸೆತಗಳಲ್ಲಿ 9 ಸಿಕ್ಸರ್ ಸಹಿತ 76 ರನ್ ಚಚ್ಚಿದ ಪೊವೆಲ್..! ವಿಡಿಯೋ

Abu Dhabi T10: ಈ ಪಂದ್ಯದಲ್ಲಿ ಕೇವಲ 28 ಎಸೆತಗಳನ್ನು ಎದುರಿಸಿದ ಪೊವೆಲ್ 9 ಸಿಕ್ಸರ್ ಹಾಗೂ 1 ಬೌಂಡರಿ ಸಮೇತ ಬರೋಬ್ಬರಿ 76 ರನ್ ಚಚ್ಚಿದರು. ಆದರೆ ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪೊವೆಲ್ ತಾವು ಆಡಿದ 3 ಪಂದ್ಯಗಳಲ್ಲಿ ಕೇವಲ 39 ರನ್ ಮಾತ್ರ ಗಳಿಸಿದ್ದರು.

Abu Dhabi T10: ಕೇವಲ 28 ಎಸೆತಗಳಲ್ಲಿ 9 ಸಿಕ್ಸರ್ ಸಹಿತ 76 ರನ್ ಚಚ್ಚಿದ ಪೊವೆಲ್..! ವಿಡಿಯೋ
Rovman Powell
Follow us
TV9 Web
| Updated By: ಪೃಥ್ವಿಶಂಕರ

Updated on:Nov 28, 2022 | 11:57 AM

ಪ್ರಸ್ತುತ ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್​ನಲ್ಲಿ (Abu Dhabi T10) ನಿರೀಕ್ಷೆಯಂತೆ ಕೆರಿಬಿಯನ್ ದೈತ್ಯರ ಅಬ್ಬರ ಜೋರಾಗಿದೆ. ಟೂರ್ನಿಯ ಆರಂಭದಲ್ಲಿ ವೆಸ್ಟ್ ಇಂಡೀಸ್ ಮಾಜಿ ನಾಯಕ ಪೂರನ್ ಅಬ್ಬರದ ಇನ್ನಿಂಗ್ಸ್ ಆಡುವ ಮೂಲಕ ಟೂರ್ನಿಗೆ ರಂಗು ಹೆಚ್ಚಿಸಿದ್ದರು. ಇದೀಗ ವಿಂಡೀಸ್ ತಂಡದ ಮತ್ತೊಬ್ಬ ಸ್ಫೋಟಕ ಬ್ಯಾಟರ್ ರೋವ್‌ಮನ್ ಪೊವೆಲ್ (Rovman Powell) ಸಿಕ್ಸರ್​ಗಳ ಸುರಿಮಳೆಗೈದಿದ್ದಾರೆ. ನಾರ್ದರ್ನ್ ವಾರಿಯರ್ಸ್ (Northern Warriors) ತಂಡದ ನಾಯಕರೂ ಆಗಿರುವ ಪೊವೆಲ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದಾರೆ. ಪೊವೆಲ್​ ಇನ್ನಿಂಗ್ಸ್‌ನ ವಿಶೇಷ ಏನೆಂದರೆ ಈ ಆಟಗಾರನ ಬ್ಯಾಟ್​ನಿಂದ ಬರೋಬ್ಬರಿ 9 ಸಿಕ್ಸರ್​ಗಳು ಹೊರಬಂದರೆ ಕೇವಲ 1 ಬೌಂಡರಿ ಮಾತ್ರ ಸಿಡಿಯಿತು.

ಪೊವೆಲ್ ನಾಯಕತ್ವದ ಇನ್ನಿಂಗ್ಸ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಟೈಗರ್ಸ್ ತಂಡ ಹಜರತುಲ್ಲಾ ಝಝೈ (37 ರನ್) ಹಾಗೂ ಎವಿನ್ ಲೆವಿಸ್ (38 ರನ್) ಇನ್ನಿಂಗ್ಸ್ ಆದಾರದ ಮೇಲೆ ನಿಗಧಿತ 10 ಓವರ್​ಗಳಲ್ಲಿ 117 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರೋವ್‌ಮನ್ ಪೊವೆಲ್ ನಾಯಕತ್ವದ ನಾರ್ದರ್ನ್ ವಾರಿಯರ್ಸ್ ತಂಡ ಕೆನಾರ್ ಲೂಯಿಸ್ ಮತ್ತು ಆಡಮ್ ಲಿತ್ ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಪೊವೆಲ್ ಬಾಂಗ್ಲಾ ಟೈಗರ್ಸ್ ತಂಡದ ಗೆಲುವನ್ನು ಕಸಿದುಕೊಂಡರು. ಈ ಪಂದ್ಯದಲ್ಲಿ ಕೇವಲ 28 ಎಸೆತಗಳನ್ನು ಎದುರಿಸಿದ ಪೊವೆಲ್ 9 ಸಿಕ್ಸರ್ ಹಾಗೂ 1 ಬೌಂಡರಿ ಸಮೇತ ಬರೋಬ್ಬರಿ 76 ರನ್ ಚಚ್ಚಿದರು. ಆದರೆ ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪೊವೆಲ್ ತಾವು ಆಡಿದ 3 ಪಂದ್ಯಗಳಲ್ಲಿ ಕೇವಲ 39 ರನ್ ಮಾತ್ರ ಗಳಿಸಿದ್ದರು. ಇದರಿಂದಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಸೂಪರ್-12 ಸುತ್ತಿನಲ್ಲೂ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ನಾರ್ದರ್ನ್ ವಾರಿಯರ್ಸ್‌ಗೆ ಮೊದಲ ಜಯ

ಟಿ10 ಲೀಗ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇದು ನಾರ್ದರ್ನ್ ವಾರಿಯರ್ಸ್‌ ತಂಡದ ಮೊದಲ ಗೆಲುವು. ಈ ಮೊದಲು ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ತಂಡ ಇದೀಗ ಒಂದು ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಬಂದಿದೆ. ಬಾಂಗ್ಲಾ ಟೈಗರ್ಸ್ ತಂಡ ಕೂಡ ನಾಲ್ಕು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು ಕೊನೆಯ ಸ್ಥಾನದಲ್ಲಿದೆ. ಗ್ಲಾಡಿಯೇಟರ್ಸ್ ತಂಡ 6 ಅಂಕಗಳೊಂದಿಗೆ ಪ್ರಥಮ ಹಾಗೂ ಸ್ಯಾಂಪ್ ಆರ್ಮಿ 6 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಮತ್ತೊಂದು ಪಂದ್ಯದಲ್ಲಿ ಕ್ಯಾಡ್ಮೋರ್ ಅಬ್ಬರ

ಭಾನುವಾರ ನಡೆದ ಇನ್ನೊಂದು ಪಂದ್ಯದಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಪರ ಟಾಮ್ ಕ್ಯಾಡ್ಮೋರ್ ಕೂಡ ಬಿರುಸಿನ ಇನ್ನಿಂಗ್ಸ್ ಆಡಿದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ಯಾಡ್ಮೋರ್ ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿ ಸಹಿತ ಅಜೇಯ 82 ರನ್ ಗಳಿಸಿದರು. ಕ್ಯಾಡ್ಮೋರ್ ಅವರ ಅಬ್ಬರದ ಇನ್ನಿಂಗ್ಸ್ ಆದಾರದ ಮೇಲೆ ಗ್ಲಾಡಿಯೇಟರ್ಸ್ ತಂಡ 10 ಓವರ್‌ಗಳಲ್ಲಿ 140 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 122 ರನ್ ಗಳಿಸಲಷ್ಟೇ ಶಕ್ತವಾಯಿತು.

Published On - 11:52 am, Mon, 28 November 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ