ಐಸಿಸಿ ಎಚ್ಚರಿಕೆಗೂ ಬಗ್ಗದ ಬಾಂಗ್ಲಾದೇಶ; ಕೈತಪ್ಪುತ್ತಾ ವಿಶ್ವಕಪ್ ಆತಿಥ್ಯ?
ICC vs Bangladesh Cricket: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ T20 ವಿಶ್ವಕಪ್‌ನಿಂದ ಹೊರನಡೆದು, ಐಸಿಸಿ ಎಚ್ಚರಿಕೆಗೂ ಬಗ್ಗದೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 260 ಕೋಟಿ ರೂ. ನಷ್ಟದ ಜೊತೆಗೆ, 2031ರ ವಿಶ್ವಕಪ್ ಆತಿಥ್ಯ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಮುಸ್ತಾಫಿಜುರ್ ರೆಹಮಾನ್ ವಿಚಾರದಿಂದ ಕೆರಳಿದ ಬಾಂಗ್ಲಾದೇಶ, ಸರ್ಕಾರದ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದೆ. ಇದು ಕ್ರಿಕೆಟ್ ಮಂಡಳಿಗೆ ಹಾಗೂ ಆಟಗಾರರಿಗೆ ದೊಡ್ಡ ಹೊಡೆತವಾಗಿದೆ.

ತನ್ನ ಗುಂಡಿಯನ್ನು ತಾನೇ ತೊಡಿಕೊಳ್ಳುತ್ತಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (Bangladesh Cricket Board) ಸಂಕಷ್ಟದ ದಿನಗಳು ಆರಂಭವಾಗಿವೆ. ಐಸಿಸಿ (ICC) ಎಚ್ಚರಿಕೆಗೂ ಬಗ್ಗದೆ ಟಿ20 ವಿಶ್ವಕಪ್‌ನಿಂದ (T20 World Cup) ತನ್ನ ತಂಡದ ಹೆಸರನ್ನು ಹಿಂಪಡೆದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಸರಿಸುಮಾರ್ 260 ಕೋಟಿ ಗೂ. ಅಧಿಕ ನಷ್ಟವುಂಟಾಗಲಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಬಾಂಗ್ಲಾದೇಶ ತಂಡದ ಆಟಗಾರರಿಗೂ ಮಂಡಳಿಯ ನಿರ್ಧಾರದಿಂದ ನಷ್ಟವುಂಟಾಗಿದೆ. ಇದೀಗ ಇದೆಲ್ಲದರ ಜೊತೆಗೆ ಐಸಿಸಿಯ ವಿರುದ್ಧವೇ ಆರೋಪಗಳ ಮಳೆಹರಿಸುತ್ತಿರುವ ಬಾಂಗ್ಲಾದೇಶ 2031 ರ ವಿಶ್ವಕಪ್ ಆತಿಥ್ಯವನ್ನು ಕಳೆದುಕೊಳ್ಳುವ ಹೊಸ್ತಿಲಿನಲ್ಲಿದೆ.
ವಾಸ್ತವವಾಗಿ ಐಪಿಎಲ್ನಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ಹೊರಹಾಕಿತ್ತು. ಇದರಿಂದ ಕೆರಳಿದ ಬಾಂಗ್ಲಾದೇಶ ಮಂಡಳಿ ಟಿ20 ವಿಶ್ವಕಪ್‌ಗಾಗಿ ನಮ್ಮ ತಂಡ ಭಾರತಕ್ಕೆ ಬರುವುದಿಲ್ಲ ಎಂದು ಬೆದರಿಕೆ ಹಾಕಿ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿತು. ಆದರೆ ಬಿಸಿಸಿಐ ಮತ್ತು ಐಸಿಸಿ, ಬಾಂಗ್ಲಾದೇಶ ಮಂಡಳಿಯನ್ನು ಮನವೊಲಿಸಲು ಪ್ರಯತ್ನಿಸಿದವು. ಆದರೆ ಬಾಂಗ್ಲಾದೇಶ ಸರ್ಕಾರದ ಒತ್ತಡದಿಂದಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದಿದೆ.
ಆತಿಥ್ಯ ಕಳೆದುಕೊಳ್ಳುತ್ತಾ ಬಾಂಗ್ಲಾ?
ಐಸಿಸಿಯ ಎಚ್ಚರಿಕೆಗೂ ಬಗ್ಗದ ಬಾಂಗ್ಲಾದೇಶ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವುದರಿಂದ ಸ್ಕಾಟ್ಲೆಂಡ್ ಅದರ ಸ್ಥಾನವನ್ನು ಪಡೆದುಕೊಂಡಿದೆ. ಇದಲ್ಲದೆ ಐಸಿಸಿಯಿಂದ ಬಾಂಗ್ಲಾದೇಶ ಮಂಡಳಿಗೆ ಬರುತ್ತಿದ್ದ ಆದಾಯವು ಸ್ಥಗಿತಗೊಳ್ಳಲಿದೆ. ಇದರ ಜೊತೆಗೆ ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಐಸಿಸಿ ಪಂದ್ಯಾವಳಿಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಬಾಂಗ್ಲಾದೇಶವು ಕೆಲವು ವರ್ಷಗಳ ಹಿಂದೆ ಟಿ20 ವಿಶ್ವಕಪ್ ಅನ್ನು ಆಯೋಜಿಸಿತ್ತು. ಹಾಗೆಯೇ ಭಾರತ ಮತ್ತು ಶ್ರೀಲಂಕಾದೊಂದಿಗೆ 2011 ರ ವಿಶ್ವಕಪ್ ಅನ್ನು ಸಹ ಆಯೋಜಿಸಿತ್ತು.
ದೇಶದಲ್ಲಿನ ಯಶಸ್ವಿ ಪಂದ್ಯಾವಳಿಗಳು ಮತ್ತು ಆಟದ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಐಸಿಸಿ ಬಾಂಗ್ಲಾದೇಶಕ್ಕೆ ಮತ್ತೊಂದು ಪ್ರಮುಖ ಪಂದ್ಯಾವಳಿಯ ಆತಿಥ್ಯ ವಹಿಸುವ ಅವಕಾಶ ನೀಡಿತ್ತು. ಬಾಂಗ್ಲಾದೇಶವನ್ನು 2031 ರ ವಿಶ್ವಕಪ್‌ನ ಸಹ-ಆತಿಥೇಯರನ್ನಾಗಿ ನೇಮಿಸಲಾಗಿದೆ, ಕಾಕತಾಳೀಯವಾಗಿ ಭಾರತದೊಂದಿಗೆ ಆತಿಥ್ಯ ವಹಿಸುವ ಹಕ್ಕುಗಳನ್ನು ಹಂಚಿಕೊಂಡಿದೆ. ಇದೀಗ ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಬಳಿ ಇರುವ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ಹಕ್ಕುಗಳನ್ನು ಕಸಿದುಕೊಳ್ಳುಬಹುದು. ಇದು ಸಂಭವಿಸಿದಲ್ಲಿ, ಬಾಂಗ್ಲಾದೇಶ ಮಂಡಳಿಯು ಮತ್ತೊಂದು ಪ್ರಮುಖ ಆದಾಯದ ಅವಕಾಶವನ್ನು ಕಳೆದುಕೊಳ್ಳುತ್ತದೆ.
ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದು 240 ಕೋಟಿ ಗೂ. ಅಧಿಕ ನಷ್ಟ ಅನುಭವಿಸಿದ ಬಾಂಗ್ಲಾದೇಶ
ಕೋಟಿಗಟ್ಟಲೆ ನಷ್ಟ
ಬಾಂಗ್ಲಾದೇಶವು ವಿಶ್ವಕಪ್‌ನಲ್ಲಿ ಭಾಗವಹಿಸಲು ನಿರಾಕರಿಸಿದರೆ, ಐಸಿಸಿಯಿಂದ ಬರುವ ವಾರ್ಷಿಕ ಆದಾಯಕ್ಕೆ (ಸುಮಾರು 3.25 ಬಿಲಿಯನ್ ಬಾಂಗ್ಲಾದೇಶಿ ಟಕಾ) ಕತ್ತರಿ ಬಿದ್ದಿದೆ. ಸಂಪೂರ್ಣವಾಗಿ ಅಲ್ಲದಿದ್ದರೂ, ಅದನ್ನು ಗಣನೀಯ ದಂಡವಾಗಿ ಕಡಿತಗೊಳಿಸಬಹುದು. ಇದಲ್ಲದೆ, ಪಂದ್ಯಾವಳಿಯಲ್ಲಿ ಭಾಗವಹಿಸಲು ಮತ್ತು ಪ್ರತಿ ಪಂದ್ಯವನ್ನು ಗೆದ್ದಿದ್ದಕ್ಕಾಗಿ ಅದು ಪಡೆಯುವ ಬಹುಮಾನದ ಹಣವನ್ನು ಸಹ ಕಳೆದುಕೊಳ್ಳುತ್ತದೆ. ಇದಲ್ಲದೆ, ಇದು ಬಾಂಗ್ಲಾದೇಶ ಮಹಿಳಾ ತಂಡ ಮತ್ತು ಅಂಡರ್-19 ತಂಡದ ಮೇಲೆ ಪರಿಣಾಮ ಬೀರಬಹುದು, ಅವರನ್ನು ಮುಂದಿನ ಕೆಲವು ವರ್ಷಗಳ ಕಾಲ ಐಸಿಸಿ ಪಂದ್ಯಾವಳಿಗಳಿಂದ ನಿಷೇಧಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Fri, 23 January 26
