AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 58 ರನ್‌ಗಳಿಗೆ ಶ್ರೀಲಂಕಾ ಆಲೌಟ್; 9 ವಿಕೆಟ್​ಗಳಿಂದ ಗೆದ್ದ ಆಸ್ಟ್ರೇಲಿಯಾ

ICC U19 World Cup 2026: 2026ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾದ ವೇಗಿ ವಿಲ್ ಬೈರಾಮ್ ಮಾರಕ ಬೌಲಿಂಗ್‌ ನಡೆಸಿ, ಕೇವಲ 14 ರನ್‌ಗಳಿಗೆ 5 ವಿಕೆಟ್ ಪಡೆದು ಲಂಕಾವನ್ನು 58 ರನ್‌ಗಳಿಗೆ ಆಲೌಟ್ ಮಾಡಿದರು. ಸುಲಭ ಗುರಿ ಬೆನ್ನತ್ತಿದ ಆಸೀಸ್, ಕೇವಲ 12 ಓವರ್‌ಗಳಲ್ಲಿ ಗೆದ್ದು, ಗುಂಪು ಹಂತದಲ್ಲಿ ತನ್ನ ಪ್ರಾಬಲ್ಯ ಮೆರೆಯಿತು.

ಕೇವಲ 58 ರನ್‌ಗಳಿಗೆ ಶ್ರೀಲಂಕಾ ಆಲೌಟ್; 9 ವಿಕೆಟ್​ಗಳಿಂದ ಗೆದ್ದ ಆಸ್ಟ್ರೇಲಿಯಾ
Aus Vs Sl
ಪೃಥ್ವಿಶಂಕರ
|

Updated on:Jan 23, 2026 | 6:07 PM

Share

2026 ರ ಐಸಿಸಿ ಅಂಡರ್-19 ವಿಶ್ವಕಪ್​ನ (ICC U19 World Cup 2026) ಗುಂಪು ಹಂತ ಮುಗಿಯುವ ಹಂತಕ್ಕೆ ಬಂದಿದೆ. ಈ ಸುತ್ತಿನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ (Australia U19 vs Sri Lanka U19) ಮುಖಾಮುಖಿಯಾಗಿದ್ದವು. ಎರಡೂ ತಂಡಗಳ ಬಲಿಷ್ಠವಾಗಿ ಕಾಣಿಸುತ್ತಿದ್ದರಿಂದ ಕಠಿಣ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಗೋಚರಿಸಿತು. ಉಭಯ ತಂಡಗಳ ನಡುವಿನ ಈ ಪಂದ್ಯವು ಕೇವಲ 31 ಓವರ್‌ಗಳಲ್ಲಿ, ಒಟ್ಟು 119 ರನ್‌ಗಳಿಗೆ ಅಂತ್ಯವಾಯಿತು. ಇದಕ್ಕೆ ಕಾರಣ ಆಸ್ಟ್ರೇಲಿಯಾದ ವೇಗಿ ವಿಲ್ ಬೈರೋಮ್. ಶ್ರೀಲಂಕಾದ ಬ್ಯಾಟಿಂಗ್ ಬೆನ್ನೇಲುಬು ಮುರಿದ ಆಸೀಸ್ ವೇಗಿಗಳು ಇಡೀ ಲಂಕಾ ತಂಡವನ್ನು ಕೇವಲ 58 ರನ್‌ಗಳಿಗೆ ಆಲೌಟ್ ಮಾಡಿದರು.

ಆಸೀಸ್ ಮಾರಕ ದಾಳಿ

ಜನವರಿ 23 ರಂದು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆದ ಈ ಗ್ರೂಪ್ ಎ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ಶ್ರೀಲಂಕಾದ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇನ್ನಿಂಗ್ಸ್‌ನ ಮೂರನೇ ಓವರ್‌ನ ವೇಳೆಗೆ ತಂಡವು ಕೇವಲ 3 ರನ್‌ಗಳನ್ನು ಗಳಿಸಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಚಾರ್ಲ್ಸ್ ಲೆಚ್ಮಂಡ್ ಎರಡೂ ವಿಕೆಟ್‌ಗಳನ್ನು ಪಡೆದರು. ಆ ನಂತರ ದಾಳಿಗಿಳಿದ ವಿಲ್ ಬೈರಾಮ್ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರನ್ನಾಗಿ ಪೆವಿಲಿಯನ್​ಗೆ ಕಳುಹಿಸಲು ಪ್ರಾರಂಭಿಸಿದರು. ಹೀಗಾಗಿ ಇಡೀ ಲಂಕಾ ತಂಡವು ಕೇವಲ 58 ರನ್‌ಗಳಿಗೆ ಆಲೌಟ್ ಆಯಿತು.

ಆಸೀಸ್ ಪರ ಮಾರಕ ದಾಳಿ ನಡೆಸಿದ ವಿಲ್ ಬೈರೋಮ್ 6.5 ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 14 ರನ್‌ಗಳನ್ನು ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಪಡೆದರು. ಇದರ ಪರಿಣಾಮವಾಗಿ ಶ್ರೀಲಂಕಾ ತಂಡದ 11 ಬ್ಯಾಟ್ಸ್‌ಮನ್‌ಗಳಲ್ಲಿ 9 ಮಂದಿ ಒಂದೇ ಅಂಕಿಯ ಸ್ಕೋರ್‌ಗೆ ಔಟಾದರು. ಕವಿಜಾ ಗಮಗೆ (10) ಮತ್ತು ಚಾಮಿಕಾ ಹೀನಾಟಿಗಲ (14) ಮಾತ್ರ ಎರಡಂಕಿಯ ರನ್‌ ತಲುಪುವಲ್ಲಿ ಯಶಸ್ವಿಯಾದರು.

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ

ಆಸ್ಟ್ರೇಲಿಯಾಗೆ ಸುಲಭ ಜಯ

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಮೊದಲ ಓವರ್‌ನಲ್ಲಿಯೇ ವಿಲ್ ಮಲಾಜುಕ್ ಅವರ ವಿಕೆಟ್ ಕಳೆದುಕೊಂಡಿತು. ಕೆಲವೇ ದಿನಗಳ ಹಿಂದೆ ಅಂಡರ್-19 ವಿಶ್ವಕಪ್‌ನಲ್ಲಿ ವೇಗದ ಶತಕದ ದಾಖಲೆ ನಿರ್ಮಿಸಿದ್ದ ವಿಲ್ ಮಲಾಜುಕ್ ವಿಕೆಟ್ ಪತನ ಆಸೀಸ್​ಗೆ ಆರಂಭಿಕ ಆಘಾತ ನೀಡಿತ್ತು. ಆದರೆ ಆ ನಂತರ ಜೊತೆಯಾದ ನಿತೇಶ್ ಸ್ಯಾಮ್ಯುಯೆಲ್ ಮತ್ತು ಸ್ಟೀವನ್ ಹೊಗನ್ ತಂಡವನ್ನು 12 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿಸಿರು. ಅಂತಿಮವಾಗಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Fri, 23 January 26