AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: ವಾರದ ಹಿಂದೆ ಜನಿಸಿದ ಮಗಳ ಸಾವಿನ ನೋವಲ್ಲು ಶತಕ ಸಿಡಿಸಿ ತಂಡಕ್ಕೆ ನೆರವಾದ ವಿಷ್ಣು ಸೋಲಂಕಿ

Ranji Trophy: ವಿಷ್ಣು ಸೋಲಂಕಿ ಕೆಲ ದಿನಗಳ ಹಿಂದೆಯಷ್ಟೇ ತಂದೆಯಾದರು. ಅವರ ಮನೆಯ ಅಂಗಳದಲ್ಲಿ ಹೆಣ್ಣು ಮಗು ಜನಿಸಿತು. ಆದರೆ ಅನಾರೋಗ್ಯದ ಕಾರಣದಿಂದ ಆ ಮಗು ಸಾವನ್ನಪ್ಪಿತು.

Ranji Trophy: ವಾರದ ಹಿಂದೆ ಜನಿಸಿದ ಮಗಳ ಸಾವಿನ ನೋವಲ್ಲು ಶತಕ ಸಿಡಿಸಿ ತಂಡಕ್ಕೆ ನೆರವಾದ ವಿಷ್ಣು ಸೋಲಂಕಿ
ವಿಷ್ಣು ಸೋಲಂಕಿ
TV9 Web
| Edited By: |

Updated on: Feb 26, 2022 | 3:15 PM

Share

ಈ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಅಥವಾ ರಿಷಬ್ ಪಂತ್ (Rishabh Pant) ಅಂತಹ ಪ್ರಸಿದ್ಧ ಆಟಗಾರನಲ್ಲ. ಆದರೆ ಆತ ಆಟದ ಮೇಲೆ ತೋರಿದ ಉತ್ಸಾಹ ಅವರಿಗಿಂತ ಕಡಿಮೆಯಿಲ್ಲ. ತಂದೆಗೆ ತನ್ನ ಮಗುವಿನ ಮರಣದ ನೋವನ್ನು ಅರಗಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಕ್ರಿಕೆಟ್‌ನ ವಿಷಯಕ್ಕೆ ಬಂದಾಗ, ತಂಡ ಸಂಕಷ್ಟದಲ್ಲಿದ್ದಾಗ ನೆರವಾಗಿ ಆ ಕ್ರಿಕೆಟರ್​ ಉತ್ಸಾಹಕ್ಕೆ ವಿಶಿಷ್ಟ ಉದಾಹರಣೆಯನ್ನು ನೀಡಿದರು. ನಾವು ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ( Ranji Trophy) ಪಂದ್ಯದಲ್ಲಿ ಶತಕ ಸಿಡಿಸಿರುವ ವಿಷ್ಣು ಸೋಲಂಕಿ (Vishnu Solanki) ಬಗ್ಗೆ ಮಾತನಾಡುತ್ತಿದ್ದೇವೆ. ವಿಷ್ಣು ಸೋಲಂಕಿ ಕೆಲ ದಿನಗಳ ಹಿಂದೆಯಷ್ಟೇ ತಂದೆಯಾದರು. ಅವರ ಮನೆಯ ಅಂಗಳದಲ್ಲಿ ಹೆಣ್ಣು ಮಗು ಜನಿಸಿತು. ಆದರೆ ಅನಾರೋಗ್ಯದ ಕಾರಣದಿಂದ ಆ ಮಗು ಸಾವನ್ನಪ್ಪಿತು. ಮಗಳ ಸಾವು ವಿಷ್ಣುವನ್ನು ಬೆಚ್ಚಿಬೀಳಿಸಿತ್ತು. ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿತ್ತು. ಆದರೆ, ಬರೋಡಾ ಪರ ಕ್ರಿಕೆಟ್ ಆಡುವ ವಿಷ್ಣು ನೋವನ್ನು ಬದಿಗಿಟ್ಟು ರಣಜಿ ಟ್ರೋಫಿಯಲ್ಲಿ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ.

ವಿಷ್ಣು ಚಂಡೀಗಢದ ವಿರುದ್ಧ ಬರೋಡಾ ಪರ ಉತ್ತಮ ಆಟ ಪ್ರದರ್ಶಿಸಿಸಿ ಅದ್ಭುತ ಶತಕಕ್ಕೆ ಸ್ಕ್ರಿಪ್ಟ್ ಬರೆದರು. ಕಷ್ಟಗಳನ್ನು ದಾಟಿ ವಿಷ್ಣು ಸೋಲಂಕಿ ಈ ಶತಕ ಬಾರಿಸಿದ್ದನ್ನು ನೋಡಿದ ಬರೋಡಾ ಕ್ರಿಕೆಟ್ ಸಂಸ್ಥೆಯ ಸಿಇಒ ಅವರನ್ನು ರಿಯಲ್ ಹೀರೋ ಎಂದು ಬಣ್ಣಿಸಿದ್ದಾರೆ. ಇಷ್ಟೇ ಅಲ್ಲ, ವಿಷ್ಣು ಸೋಲಂಕಿ ಅವರ ಈ ದಿಟ್ಟ ಇನ್ನಿಂಗ್ಸ್‌ಗೆ ಎದುರಾಳಿ ತಂಡದ ಆಟಗಾರರು ಸಹ ಸೆಲ್ಯೂಟ್ ಹೊಡೆದಿದೆ.

ಸೋಲಂಕಿ ಆಟಕ್ಕೆ ಎದುರಾಳಿ ಸಲಾಂ

ರಣಜಿ ಟ್ರೋಫಿ ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಚಂಡೀಗಢ ವಿರುದ್ಧ ವಿಷ್ಣು ಸೋಲಂಕಿ 12 ಬೌಂಡರಿಗಳ ಸಹಾಯದಿಂದ 104 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ ಈ ಶತಕದ ಇನ್ನಿಂಗ್ಸ್‌ನಿಂದಾಗಿ ತಂಡವು ಚಂಡೀಗಢ ವಿರುದ್ಧ ಪ್ರಾಬಲ್ಯ ಮೆರೆದಿದೆ. ಈಗ ಸೌರಾಷ್ಟ್ರ ಪರ ರಣಜಿ ಟ್ರೋಫಿ ಆಡುತ್ತಿರುವ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ಸೋಶೀಯಲ್ ಮೀಡಿಯಾದಲ್ಲಿ ಸೋಲುಂಕಿ ಶತಕಕ್ಕೆ ಅಭಿನಂದನೆ ತಿಳಿಸಿದ್ದಾರೆ.ಜೊತೆಗೆ ವಿಷ್ಣು ಮತ್ತು ಅವರ ಕುಟುಂಬಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಬ್ಯಾಟ್‌ನಿಂದ ಇನ್ನೂ ಹೆಚ್ಚಿನ ಶತಕಗಳು ಬರಲಿ ಎಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:IND vs SL: ಧರ್ಮಶಾಲಾದಲ್ಲಿ ಅಂಕಿಅಂಶಗಳೇ ಭಾರತಕ್ಕೆ ವಿಲನ್; ಶ್ರೀಲಂಕಾಗೆ ಗೆಲುವಿನ ಅವಕಾಶ!

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ