AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Glenn Maxwell: ಆರ್​ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್​ಗೆ ಕೊರೊನಾ ಪಾಸಿಟಿವ್..!

Glenn Maxwell: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮ್ಯಾಕ್ಸ್‌ವೆಲ್ ಪ್ರಸ್ತುತ ಬಿಬಿಎಲ್ (ಬಿಗ್ ಬ್ಯಾಷ್ ಲೀಗ್) ನಲ್ಲಿ ಆಡುತ್ತಿದ್ದಾರೆ.

Glenn Maxwell: ಆರ್​ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್​ಗೆ ಕೊರೊನಾ ಪಾಸಿಟಿವ್..!
ಗ್ಲೆನ್ ಮ್ಯಾಕ್ಸ್​ವೆಲ್
TV9 Web
| Updated By: ಪೃಥ್ವಿಶಂಕರ|

Updated on: Jan 05, 2022 | 1:03 PM

Share

ಓಮಿಕ್ರಾನ್‌ನಿಂದ ವಿಶ್ವದ ರಾಷ್ಟ್ರಗಳು ತಲ್ಲಣಗೊಂಡಿವೆ. ಇದು ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದೆ. ಬಿಸಿಸಿಐ ಈಗಾಗಲೇ ಎಲ್ಲಾ ದೇಶೀಯ ಲೀಗ್‌ಗಳನ್ನು ಮುಂದೂಡಿದೆ ಎಂದು ತಿಳಿದುಬಂದಿದೆ. ರಣಜಿಯಲ್ಲಿ ಕೊರೊನಾ ಪ್ರಕರಣಗಳು ಬಹಿರಂಗವಾದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚೆಗಷ್ಟೇ, ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮ್ಯಾಕ್ಸ್‌ವೆಲ್ ಪ್ರಸ್ತುತ ಬಿಬಿಎಲ್ (ಬಿಗ್ ಬ್ಯಾಷ್ ಲೀಗ್) ನಲ್ಲಿ ಆಡುತ್ತಿದ್ದಾರೆ. ಅಲ್ಲಿ ಅವರು ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿದ್ದರು. ಮೆಲ್ಬೋರ್ನ್ ಸ್ಟಾರ್ಸ್ ತಂಡ ಈ ಕುರಿತು ಮಾಹಿತಿ ನೀಡಿದ್ದು, ಸೋಮವಾರ ರಾತ್ರಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದ ನಂತರ ಮ್ಯಾಕ್ಸ್‌ವೆಲ್ ಪ್ರತಿಜನಕ ಪರೀಕ್ಷೆಗೆ ಒಳಗಾಗಿದ್ದರು. ಅದರ ವರದಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಮ್ಯಾಕ್ಸ್‌ವೆಲ್ ಈಗ ಐಸೋಲೇಶನ್‌ನಲ್ಲಿದ್ದಾರೆ. RTPCR ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.

ಕ್ಲಬ್ ಹೇಳಿಕೆಯಲ್ಲಿ, ಮ್ಯಾಕ್ಸ್‌ವೆಲ್ ಪ್ರತಿಜನಕ ಪರೀಕ್ಷೆಯು ಮಂಗಳವಾರ ನಡೆಯಿತು. ಫಲಿತಾಂಶವು ಪಾಸಿಟಿವ್ ಬಂದಿದೆ. RTPCR ಪರೀಕ್ಷೆಯನ್ನೂ ನಡೆಸಿದ್ದು ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ನಾವು ಮ್ಯಾಕ್ಸ್‌ವೆಲ್‌ನನ್ನು ಪ್ರತ್ಯೇಕವಾಗಿ ಇರಿಸಿದ್ದೇವೆ. ಕೊರೊನಾ ಸೋಂಕಿತ ಮೆಲ್ಬೋರ್ನ್ ಸ್ಟಾರ್ಸ್‌ನ 13 ನೇ ಆಟಗಾರ ಮ್ಯಾಕ್ಸ್‌ವೆಲ್. ತಂಡದ ಎಂಟು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ.

ಈ ಹಿಂದೆ, ಬ್ರಿಸ್ಬೇನ್ ಹೀಟ್ ಆಟಗಾರರಿಗೆ ರಾಪಿಡ್ ಆಂಟಿಜೆನ್ ಟೆಸ್ಟ್​ನಲ್ಲಿ ಕೊರೊನಾ ಇರುವುದು ಪತ್ತೆಯಾಗಿತ್ತು. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಬಿಬಿಎಲ್ ತನ್ನ ಮೂರು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾಯಿಸಬೇಕಾಯಿತು. ಬಿಬಿಎಲ್ ತಂಡಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಕಳವಳಕಾರಿಯಾಗಿದೆ.

ಕೊರೊನಾ ಭೀತಿಯಿಂದಾಗಿ, ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ECB) ಆಸ್ಟ್ರೇಲಿಯಾದಿಂದ ಬಿಗ್ ಬ್ಯಾಷ್‌ನಲ್ಲಿ ಆಡುತ್ತಿರುವ ಆರು ಆಟಗಾರರು ವಾಪಸ್ಸ್ ಬರುವಂತೆ ಆದೇಶಿಸಿದೆ. ವೆಸ್ಟ್ ಇಂಡೀಸ್‌ನ ರಾಷ್ಟ್ರೀಯ ತಂಡದ ಪ್ರವಾಸದ ಮೊದಲು ಕ್ವಾರಂಟೈನ್‌ನಲ್ಲಿ ಉಳಿಯಲು ಬಿಬಿಎಲ್‌ನಲ್ಲಿ ಆಡುತ್ತಿರುವ ಆರು ಇಂಗ್ಲೆಂಡ್ ಆಟಗಾರರನ್ನು ತ್ವರಿತವಾಗಿ ಮನೆಗೆ ಮರಳಲು ಹೇಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:BBL 2021-22: ಔಟ್ ನೀಡಿ ಆ ಬಳಿಕ ನಾಟೌಟ್ ಎಂದ ಅಂಪೈರ್: ಸಿಟ್ಟು ನೆತ್ತಿಗೇರಿಸಿಕೊಂಡ ಮ್ಯಾಕ್ಸ್​ವೆಲ್