BBL: ಬರೋಬ್ಬರಿ 55 ಸಿಕ್ಸ್​: ಇಲ್ಲಿದೆ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರದ ಝಲಕ್

| Updated By: ಝಾಹಿರ್ ಯೂಸುಫ್

Updated on: Jul 27, 2022 | 5:31 PM

BBL 2022: ಪ್ರಸ್ತುತ ಟಿ20 ಲೀಗ್​ನ ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ಇಂಗ್ಲೆಂಡ್​ನ ಸ್ಪೋಟಕ ಬ್ಯಾಟ್ಸ್​ಮನ್  ಲಿಯಾಮ್ ಲಿವಿಂಗ್​ಸ್ಟೋನ್ ಈ ಬಾರಿ ಕೂಡ ಬಿಗ್ ಬ್ಯಾಷ್ ಲೀಗ್ ಆಡಲಿದ್ದಾರೆ.

BBL: ಬರೋಬ್ಬರಿ 55 ಸಿಕ್ಸ್​: ಇಲ್ಲಿದೆ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರದ ಝಲಕ್
Liam Livingstone
Follow us on

ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ (BBL 2022) ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಆಟಗಾರರ ಡ್ರಾಫ್ಟ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ 8 ತಂಡಗಳು ಬಲಿಷ್ಠ ಪಡೆಯನ್ನೇ ರೂಪಿಸಿಕೊಳ್ಳಲು ಮುಂದಾಗಿದೆ. ಇದರ ನಡುವೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಈ ಬಾರಿ ಕೂಡ ಬಿಗ್ ಬ್ಯಾಷ್​ ಲೀಗ್​ನಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇದಾಗ್ಯೂ ಬಿಬಿಎಲ್​ನಲ್ಲಿ ಈ ಸಲ ಕೂಡ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಳ್ಳಲಿದೆ ಎಂದು ಬಿಗ್ ಬ್ಯಾಷ್ ಆಯೋಜಕರು ತಿಳಿಸಿದ್ದಾರೆ.

ಅದರಲ್ಲೂ ಪ್ರಸ್ತುತ ಟಿ20 ಲೀಗ್​ನ ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ಇಂಗ್ಲೆಂಡ್​ನ ಸ್ಪೋಟಕ ಬ್ಯಾಟ್ಸ್​ಮನ್  ಲಿಯಾಮ್ ಲಿವಿಂಗ್​ಸ್ಟೋನ್ ಈ ಬಾರಿ ಕೂಡ ಬಿಗ್ ಬ್ಯಾಷ್ ಲೀಗ್ ಆಡಲಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಅಮೋಘ ಪ್ರದರ್ಶನ ನೀಡಿದ್ದ ಲಿವಿಂಗ್​ಸ್ಟೋನ್ ಈ ಹಿಂದೆ ಬಿಬಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅಬ್ಬರಿಸುವ ಮೂಲಕ ಎಲ್ಲರನ್ನು ರಂಜಿಸಿದ್ದರು. ಇದೀಗ ಬಿಗ್ ಬ್ಯಾಷ್ ಲೀಗ್​ನಲ್ಲಿನ ಲಿಯಾಮ್ ಲಿವಿಂಗ್​​ಸ್ಟೋನ್ ಅವರ ಸಿಡಿಲಬ್ಬರದ ಝಲಕ್​ಅನ್ನು ಬಿಬಿಎಲ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

28 ವರ್ಷದ ಸ್ಫೋಟಕ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಈ ಹಿಂದೆ ಪರ್ತ್ ಸ್ಕಾಚರ್ಸ್ ಪರ ಆಡಿದ್ದರು. ಈ ವೇಳೆ 28 ಇನ್ನಿಂಗ್ಸ್‌ಗಳಲ್ಲಿ 30.39 ಸರಾಸರಿಯಲ್ಲಿ 7 ಅರ್ಧಶತಕಗಳೊಂದಿಗೆ 851 ರನ್ ಬಾರಿಸಿದ್ದಾರೆ. ವಿಶೇಷ ಎಂದರೆ ಲಿವಿಂಗ್​ಸ್ಟೋನ್ ಬ್ಯಾಟ್​ನಿಂದ ಈ ವೇಳೆ ಸಿಡಿದಿರುವುದು ಬರೋಬ್ಬರಿ 55 ಸಿಕ್ಸ್ ಹಾಗೂ 52 ಬೌಂಡರಿಗಳು. ಹೀಗಾಗಿಯೇ ಇದೀಗ ಲಿವಿಂಗ್​ಸ್ಟೋನ್ ಅವರ ಸಿಡಿಲಬ್ಬರದ ಸಿಕ್ಸ್​ಗಳ ವಿಡಿಯೋವನ್ನು ಬಿಬಿಎಲ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನು 12ನೇ ಸೀಸನ್​ ಬಿಬಿಎಲ್​ಗಾಗಿ ದ್ರಾಫ್ಟ್ ಮಾಡಲಾದ 70 ಆಟಗಾರರಲ್ಲಿ ಲಿವಿಂಗ್​ಸ್ಟೋನ್ ಹೆಸರು ಕೂಡ ಇದೆ. ಹೀಗಾಗಿ ಮುಂದಿನ ಬಿಬಿಎಲ್​ನಲ್ಲೂ ಲಿಯಾಮ್ ಲಿವಿಂಗ್​ಸ್ಟೋನ್ ಬ್ಯಾಟ್​ನಿಂದ ರಾಕೆಟ್​ ಸಿಕ್ಸ್​ಗಳನ್ನು ಎದುರು ನೋಡಬಹುದು.

ಬಿಬಿಎಲ್​ 2022-2023 ತಂಡಗಳು:

  • ಅಡಿಲೇಡ್ ಸ್ಟ್ರೈಕರ್ಸ್
  • ಬ್ರಿಸ್ಬೇನ್ ಹೀಟ್
  • ಹೋಬರ್ಟ್ ಹರಿಕೇನ್
  • ಮೆಲ್ಬೋರ್ನ್ ರೆನೆಗೇಡ್ಸ್
  • ಮೆಲ್ಬೋರ್ನ್ ಸ್ಟಾರ್ಸ್
  • ಪರ್ತ್ ಸ್ಕಾರ್ಚರ್ಸ್
  • ಸಿಡ್ನಿ ಸಿಕ್ಸರ್ಸ್
  • ಸಿಡ್ನಿ ಥಂಡರ್