AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025-26 ರ ದೇಶೀಯ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

BCCI Announces 2025-26 Domestic Cricket Schedule: ಬಿಸಿಸಿಐ 2025-26ರ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ದುಲೀಪ್ ಟ್ರೋಫಿಯಿಂದ ಆರಂಭವಾಗುವ ಈ ವೇಳಾಪಟ್ಟಿಯಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ಹಾಗೂ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳೂ ಸೇರಿವೆ. ಪುರುಷರ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿನ ಎಲ್ಲಾ ಪಂದ್ಯಗಳ ದಿನಾಂಕಗಳು ಮತ್ತು ವೇಳಾಪಟ್ಟಿ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

2025-26 ರ ದೇಶೀಯ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
Bcci
ಪೃಥ್ವಿಶಂಕರ
|

Updated on: Aug 08, 2025 | 6:17 PM

Share

ಭಾರತ ಕ್ರಿಕೆಟ್​ನ ಜೀವಾಳ ಎನಿಸಿಕೊಂಡಿರುವ 2025- 26 ರ ದೇಶೀಯ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಇಂದು ಬಿಡುಗಡೆ ಮಾಡಿದೆ. ದುಲೀಪ್ ಟ್ರೋಫಿಯೊಂದಿಗೆ (Duleep Trophy) ಈ ಆವೃತ್ತಿಯ ದೇಶೀಯ ಪಂದ್ಯಾವಳಿಗಳಿಗೆ ಚಾಲನೆ ಸಿಗಲಿದೆ. ಇದರಲ್ಲಿ ದುಲೀಪ್ ಟ್ರೋಫಿಯ ಹೊರತಾಗಿ, ಇರಾನಿ ಕಪ್, ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ಹಿರಿಯ ಮಹಿಳಾ ಟಿ20 ಟ್ರೋಫಿ ಮತ್ತು ಹಿರಿಯ ಮಹಿಳಾ ಏಕದಿನ ಕಪ್ ವೇಳಾಪಟ್ಟಿಗಳು ಕೂಡ ಸೇರಿವೆ.

ಮೇಲೆ ಹೇಳಿದಂತೆ 2025-26ರ ದೇಶೀಯ ಕ್ರಿಕೆಟ್ ಆವೃತ್ತಿ ಆಗಸ್ಟ್ 28 ರಂದು ಆರಂಭವಾಗಿ ಸೆಪ್ಟೆಂಬರ್ 15 ರವರೆಗೆ ನಡೆಯಲಿರುವ ದುಲೀಪ್ ಟ್ರೋಫಿಯೊಂದಿಗೆ ಆರಂಭವಾಗಲಿದೆ. ರಣಜಿ ಟ್ರೋಫಿಯನ್ನು ಮತ್ತೊಮ್ಮೆ ಎರಡು ಹಂತಗಳಲ್ಲಿ ನಡೆಸಲಾಗುವುದು. ಅದರಂತೆ ಮೊದಲನೆಯ ಹಂತ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆದರೆ ಎರಡನೆಯ ಹಂತ ಜನವರಿಯಿಂದ ಫೆಬ್ರವರಿ 2026 ರವರೆಗೆ ನಡೆಯಲಿದೆ. ಈ ಆವೃತ್ತಿಯ ಅಂತಿಮ ಕ್ರಿಕೆಟ್ ಪಂದ್ಯವು ಏಪ್ರಿಲ್ 3, 2026 ರಂದು ಮುಕ್ತಾಯಗೊಳ್ಳಲಿರುವ ಹಿರಿಯ ಮಹಿಳಾ ಅಂತರ ವಲಯ ಬಹು-ದಿನದ ಪಂದ್ಯಾವಳಿಯೊಂದಿಗೆ ಕೊನೆಯಾಗಲಿದೆ.

2025-26 ದೇಶೀಯ ಕ್ಯಾಲೆಂಡರ್

ಪುರುಷರ ಪಂದ್ಯಗಳು:

  • ದುಲೀಪ್ ಟ್ರೋಫಿ – ಆಗಸ್ಟ್ 28 ರಿಂದ ಸೆಪ್ಟೆಂಬರ್ 15 ರವರೆಗೆ
  • ಇರಾನಿ ಕಪ್ – ಅಕ್ಟೋಬರ್ 1 ರಿಂದ 5 ರವರೆಗೆ
  • ರಣಜಿ ಟ್ರೋಫಿ (ಎಲೈಟ್) ಹಂತ 1 – ಅಕ್ಟೋಬರ್ 15 ರಿಂದ ನವೆಂಬರ್ 19 ರವರೆಗೆ
  • ರಣಜಿ ಟ್ರೋಫಿ (ಎಲೈಟ್) ಹಂತ 2 – ಜನವರಿ 22, 2026 ರಿಂದ ಫೆಬ್ರವರಿ 1 ರವರೆಗೆ
  • ರಣಜಿ ಟ್ರೋಫಿ ನಾಕೌಟ್‌ ಸುತ್ತು- ಫೆಬ್ರವರಿ 6 ರಿಂದ ಫೆಬ್ರವರಿ 29 ರವರೆಗೆ
  • ರಣಜಿ ಟ್ರೋಫಿ (ಪ್ಲೇಟ್ ಲೀಗ್) – ಅಕ್ಟೋಬರ್ 15 ರಿಂದ ನವೆಂಬರ್ 19 ರವರೆಗೆ
  • ರಣಜಿ ಟ್ರೋಫಿ (ಪ್ಲೇಟ್ ಫೈನಲ್) – ಜನವರಿ 22, 2026 ರಿಂದ ಜನವರಿ 26 ರವರೆಗೆ
  • ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಲೈಟ್) – ನವೆಂಬರ್ 26 ರಿಂದ ಡಿಸೆಂಬರ್ 18 ರವರೆಗೆ
  • ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಪ್ಲೇಟ್) – ನವೆಂಬರ್ 26 ರಿಂದ ಡಿಸೆಂಬರ್ 6 ರವರೆಗೆ
  • ವಿಜಯ್ ಹಜಾರೆ ಟ್ರೋಫಿ (ಎಲೈಟ್) – ಡಿಸೆಂಬರ್ 24 ರಿಂದ ಜನವರಿ 18 ರವರೆಗೆ
  • ವಿಜಯ್ ಹಜಾರೆ ಟ್ರೋಫಿ (ಪ್ಲೇಟ್) – ಡಿಸೆಂಬರ್ 24 ರಿಂದ ಜನವರಿ 6 ರವರೆಗೆ
  • ವಿನೂ ಮಂಕಡ್ ಟ್ರೋಫಿ – ಅಕ್ಟೋಬರ್ 9 ರಿಂದ ನವೆಂಬರ್ 1 (ಎಲೈಟ್), ಅಕ್ಟೋಬರ್ 9 ರಿಂದ ಅಕ್ಟೋಬರ್ 19 (ಪ್ಲೇಟ್)
  • ಕರ್ನಲ್ ಸಿಕೆ ನಾಯುಡು ಟ್ರೋಫಿ (ಎಲೈಟ್) – ಅಕ್ಟೋಬರ್ 16 ರಿಂದ ನವೆಂಬರ್ 5 (ಹಂತ 1), ಜನವರಿ 23 ರಿಂದ ಫೆಬ್ರವರಿ 2 (ಹಂತ 2), ಫೆಬ್ರವರಿ 21 ರಿಂದ ಮಾರ್ಚ್ 12 (ನಾಕೌಟ್)
  • ಕರ್ನಲ್ ಸಿಕೆ ನಾಯುಡು ಟ್ರೋಫಿ (ಪ್ಲೇಟ್) – ಅಕ್ಟೋಬರ್ 16 ರಿಂದ ನವೆಂಬರ್ 5 (ಹಂತ 1), ಜನವರಿ 23 ರಿಂದ ಫೆಬ್ರವರಿ 2 (ಹಂತ 2), ಫೆಬ್ರವರಿ 6 ರಿಂದ 9 (ಫೈನಲ್)
  • ಪುರುಷರ U19 ಏಕದಿನ ಚಾಲೆಂಜರ್ ಟ್ರೋಫಿ – ನವೆಂಬರ್ 5 ರಿಂದ 11 ರವರೆಗೆ
  • ಪುರುಷರ U23 ರಾಜ್ಯ A ಟ್ರೋಫಿ – ನವೆಂಬರ್ 9 ರಿಂದ ಡಿಸೆಂಬರ್ 1 (ಎಲೈಟ್), ನವೆಂಬರ್ ನವೆಂಬರ್ 9 ರಿಂದ ನವೆಂಬರ್ 19 (ಪ್ಲೇಟ್)
  • ಕೂಚ್ ಬೆಹಾರ್ ಟ್ರೋಫಿ – ನವೆಂಬರ್ 16 ರಿಂದ ಜನವರಿ 20 (ಎಲೈಟ್), ನವೆಂಬರ್ 16 ರಿಂದ ಡಿಸೆಂಬರ್ 27 (ಪ್ಲೇಟ್)
  • ವಿಜಯ್ ಮರ್ಚೆಂಟ್ ಟ್ರೋಫಿ – ಡಿಸೆಂಬರ್ 7 ರಿಂದ ಜನವರಿ 28 (ಎಲೈಟ್), ಡಿಸೆಂಬರ್ 7 ರಿಂದ ಜನವರಿ 7 (ಪ್ಲೇಟ್)

ಮಹಿಳಾ ಪಂದ್ಯಗಳು:

  • ಸೀನಿಯರ್ ಮಹಿಳಾ ಟಿ20 ಟ್ರೋಫಿ – ಅಕ್ಟೋಬರ್ 8 ರಿಂದ ಅಕ್ಟೋಬರ್ 31 (ಎಲೈಟ್), ಅಕ್ಟೋಬರ್ 8 ರಿಂದ 17 (ಪ್ಲೇಟ್)
  • ಸೀನಿಯರ್ ಮಹಿಳಾ ಏಕದಿನ ಟ್ರೋಫಿ – ಫೆಬ್ರವರಿ 6 ರಿಂದ ಫೆಬ್ರವರಿ 28 (ಎಲೈಟ್), ಫೆಬ್ರವರಿ 6 ರಿಂದ 16 (ಪ್ಲೇಟ್)
  • ಮಹಿಳಾ U19 T20 ಟ್ರೋಫಿ – ಅಕ್ಟೋಬರ್ 26 ರಿಂದ ನವೆಂಬರ್ 12 (ಎಲೈಟ್), ಅಕ್ಟೋಬರ್ 26 ರಿಂದ ನವೆಂಬರ್ 4 (ಪ್ಲೇಟ್)
  • ಸೀನಿಯರ್ ಮಹಿಳಾ ಇಂಟರ್‌ಜೋನಲ್ T20 ಟ್ರೋಫಿ – ನವೆಂಬರ್ 4 ರಿಂದ 14 ರವರೆಗೆ
  • ಮಹಿಳಾ U23 T20 ಟ್ರೋಫಿ – ನವೆಂಬರ್ 24 ರಿಂದ ಡಿಸೆಂಬರ್ 11 (ಎಲೈಟ್), ನವೆಂಬರ್ 24 ರಿಂದ ಡಿಸೆಂಬರ್ 3 (ಪ್ಲೇಟ್)
  • ಮಹಿಳಾ U19 ಏಕದಿನ ಟ್ರೋಫಿ – ಡಿಸೆಂಬರ್ 13 ರಿಂದ ಜನವರಿ 1 (ಎಲೈಟ್), ಡಿಸೆಂಬರ್ 13 ರಿಂದ ಡಿಸೆಂಬರ್ 23 (ಪ್ಲೇಟ್)
  • ಮಹಿಳಾ U15 ಏಕದಿನ ಟ್ರೋಫಿ – ಜನವರಿ 2 ರಿಂದ 21 (ಎಲೈಟ್), ಜನವರಿ 2 ರಿಂದ 12 (ಪ್ಲೇಟ್)
  • ಮಹಿಳಾ U23 ಏಕದಿನ ಟ್ರೋಫಿ – ಮಾರ್ಚ್ 3 ರಿಂದ 22 (ಎಲೈಟ್), ಮಾರ್ಚ್ 3 ರಿಂದ 13 (ಪ್ಲೇಟ್)
  • ಹಿರಿಯ ಮಹಿಳೆಯರ ಅಂತರವಲಯದ ಏಕದಿನ ಟ್ರೋಫಿ – ಮಾರ್ಚ್ 5 ರಿಂದ 15 ರವರೆಗೆ
  • ಹಿರಿಯ ಮಹಿಳೆಯರ ಅಂತರವಲಯದ ಬಹುದಿನ ಟ್ರೋಫಿ – ಮಾರ್ಚ್ 20 ರಿಂದ ಏಪ್ರಿಲ್ 3 ರವರೆಗೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ