Asia Cup 2026: ಮುಂಬರುವ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ
Women's Asia Cup Rising Stars 2026: ಬಿಸಿಸಿಐ 2026ರ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ಗೆ ಭಾರತ ಎ ತಂಡವನ್ನು ಪ್ರಕಟಿಸಿದೆ. ಫೆಬ್ರವರಿ 13 ರಿಂದ 22 ರವರೆಗೆ ನಡೆಯುವ ಈ ಟೂರ್ನಿಗೆ 15 ಸದಸ್ಯರ ತಂಡ ರಚನೆಯಾಗಿದ್ದು, ರಾಧಾ ಯಾದವ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೀನಿಯರ್ ಆಟಗಾರ್ತಿಯರಾದ ತೇಜಲ್ ಹಸಬ್ನಿಸ್, ಮಿನ್ನು ಮಣಿ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡವು ಯುಎಇ, ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಆಡಲಿದೆ.

ಫೆಬ್ರವರಿ 13 ರಿಂದ ಆರಂಭವಾಗಲಿರುವ2026 ರ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್ಗಾಗಿ (Women’s Asia Cup Rising Stars 2026) ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ. ಈ ಟೂರ್ನಮೆಂಟ್ಗಾಗಿ ಆಯ್ಕೆ ಸಮಿತಿಯು 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಭಾರತೀಯ ಸೀನಿಯರ್ ತಂಡದ ಆಟಗಾರರ್ತಿಯರಿಗೂ ಆಯ್ಕೆ ಸಮಿತಿ ಅವಕಾಶ ನೀಡಿದೆ. ಮುಂಬೈಕರ್ ರಾಧಾ ಯಾದವ್ (Radha Yadav) ಈ ಟೂರ್ನಮೆಂಟ್‌ನಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಇವರಲ್ಲದೆ, ತೇಜಲ್ ಹಸನ್ಬಿಸ್, ಮಿನ್ನು ಮಣಿ ಮತ್ತು ಸೈಮಾ ಠಾಕೋರ್ ಅವರಂತಹ ಸೀನಿಯರ್ ತಂಡದ ಆಟಗಾರರ್ತಿಯರು ಕೂಡ ಈ ತಂಡದಲ್ಲಿದ್ದಾರೆ.
ಏಷ್ಯಾಕಪ್ ಬಗ್ಗೆ ಪ್ರಮುಖ ಮಾಹಿತಿ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಮೆಂಟ್‌ನಲ್ಲಿ ಒಟ್ಟು 8 ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನಮೆಂಟ್ ಫೆಬ್ರವರಿ 13 ರಿಂದ 22 ರವರೆಗೆ ನಡೆಯಲಿದೆ. ಈ 8 ತಂಡಗಳನ್ನು ತಲಾ 4 ರ ಪ್ರಕಾರ ಎ ಮತ್ತು ಬಿ ಎಂಬ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಟೂರ್ನಮೆಂಟ್‌ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಅಲ್ಲದೆ, ಪ್ರತಿ ತಂಡಕ್ಕೆ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆ. ಭಾರತ ಎ ತಂಡವನ್ನು ಗುಂಪು ಎ ನಲ್ಲಿ ಸೇರಿಸಲಾಗಿದೆ. ಭಾರತದ ಜೊತೆಗೆ, ಈ ಗುಂಪಿನಲ್ಲಿ ಪಾಕಿಸ್ತಾನ ಮಹಿಳಾ ಎ, ಯುಎಇ ಮತ್ತು ನೇಪಾಳ ಮಹಿಳಾ ತಂಡಗಳು ಸೇರಿವೆ.
🚨 News 🚨#TeamIndia’s squad for Test against Australia Women & India A squad for ACC Rising Stars Asia Cup announced.
Details 🔽 | #AUSvIND https://t.co/F8AyqxIFhn
— BCCI Women (@BCCIWomen) January 24, 2026
ಭಾರತ ಎ ಮಹಿಳಾ ತಂಡದ ವೇಳಾಪಟ್ಟಿ
- ಫೆಬ್ರವರಿ 13, ಯುಎಇ vs ಭಾರತ
- ಫೆಬ್ರವರಿ 15, ಪಾಕಿಸ್ತಾನ vs ಭಾರತ
- ಫೆಬ್ರವರಿ 17, ನೇಪಾಳ vs ಭಾರತ
ಭಾರತ ಎ ತಂಡ: ಹುಮೈರಾ ಕಾಜಿ, ವೃಂದಾ ದಿನೇಶ್, ಅನುಷ್ಕಾ ಶರ್ಮಾ, ದೀಯಾ ಯಾದವ್*, ತೇಜಲ್ ಹಸಬ್ನಿಸ್, ನಂದನಿ ಕಶ್ಯಪ್ [ವಿಕೆಟ್ ಕೀಪರ್], ಮಮತಾ ಎಂ [ವಿಕೆಟ್ ಕೀಪರ್], ರಾಧಾ ಯಾದವ್ [ನಾಯಕಿ], ಸೋನಿಯಾ ಮೆಂಧಿಯಾ, ಮಿನ್ನು ಮಣಿ, ತನುಜಾ ಕನ್ವೆರ್, ಪ್ರೇಮಾ ರಾವತ್, ಸೈಮಾ ಠಾಕೋರ್, ಜಿಂತಾಮಣಿ ಕಲಿತಾ, ನಂದನಿ ಶರ್ಮಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Sat, 24 January 26
