U19 World Cup: ಅಂಡರ್-19 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡ ಪ್ರಕಟ
India U19 World Cup Squad Announced: ಮುಂಬರುವ ಐಸಿಸಿ ಅಂಡರ್-19 ವಿಶ್ವಕಪ್‌ಗಾಗಿ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಬಿಸಿಸಿಐ ಡಿಸೆಂಬರ್ 27 ರಂದು 15 ಸದಸ್ಯರ ತಂಡವನ್ನು ಘೋಷಿಸಿದ್ದು, ಆಯುಷ್ ಮ್ಹಾತ್ರೆ ನಾಯಕತ್ವ ವಹಿಸಲಿದ್ದಾರೆ. 14 ವರ್ಷದ ಪ್ರತಿಭಾವಂತ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜನವರಿ 15 ರಂದು ಅಮೆರಿಕ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಮುಂದಿನ ವರ್ಷ ಅಂದರೆ 2026 ರಂದು ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ( T20 World Cup 2026) ಬಿಸಿಸಿಐ (BCCI) ಕೆಲವೇ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ ಅದಕ್ಕೂ ಮುನ್ನ ಐಸಿಸಿ ಅಂಡರ್-19 ವಿಶ್ವಕಪ್ ( U19 World Cup 2026) ನಡೆಯಲಿದ್ದು, ಈ ವಿಶ್ವಕಪ್‌ಗಾಗಿ ಭಾರತ ಯುವ ತಂಡವನ್ನು ಈಗ ಪ್ರಕಟಿಸಲಾಗಿದೆ. ಡಿಸೆಂಬರ್ 27 ರ ಶನಿವಾರದಂದು ಬಿಸಿಸಿಐ, ಈ ಟೂರ್ನಮೆಂಟ್‌ಗಾಗಿ 15 ಸದಸ್ಯರ ಭಾರತೀಯ ತಂಡವನ್ನು ಘೋಷಿಸಿದೆ. ಇದರಲ್ಲಿ 14 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸೇರಿದ್ದು, ಎಂದಿನಂತೆ ಆಯುಷ್ ಮ್ಹಾತ್ರೆ ಅವರಿಗೆ ಮತ್ತೊಮ್ಮೆ ತಂಡದ ನಾಯಕತ್ವ ನೀಡಲಾಗಿದೆ. ಜನವರಿ 15 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಗುಂಪು ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ಬಿ ಗುಂಪಿನಲ್ಲಿ ಭಾರತ ತಂಡ
ಅಂಡರ್-19 ವಿಶ್ವಕಪ್ ಜನವರಿ 15 ರಿಂದ ಫೆಬ್ರವರಿ 6 ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಐದು ಬಾರಿ ಅಂಡರ್-19 ವಿಶ್ವಕಪ್ ವಿಜೇತ ಭಾರತವನ್ನು ನ್ಯೂಜಿಲೆಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಬಾಂಗ್ಲಾದೇಶದೊಂದಿಗೆ ಗ್ರೂಪ್ ಬಿಯಲ್ಲಿ ಇರಿಸಲಾಗಿದೆ. ಭಾರತ ಜನವರಿ 15 ರಂದು ಅಮೆರಿಕ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ತಂಡವು ಜನವರಿ 17 ರಂದು ಬಾಂಗ್ಲಾದೇಶ ಮತ್ತು ಜನವರಿ 24 ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಟೂರ್ನಿಯ ಫೈನಲ್ ಪಂದ್ಯ ಹರಾರೆಯಲ್ಲಿ ನಡೆಯಲಿದೆ.
🚨 News 🚨
India’s U19 squad for South Africa tour and ICC Men’s U19 World Cup announced.
Details▶️https://t.co/z21VRlpvjg#U19WorldCup pic.twitter.com/bL8pkT5Ca2
— BCCI (@BCCI) December 27, 2025
ಭಾರತ ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು, ಹರ್ವಂಶ್ ಸಿಂಗ್, ಆರ್‌ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಡಿ.ದೀಪೇಶ್, ಕಿಶನ್ ಕುಮಾರ್ ಸಿಂಗ್, ಉದ್ಧವ್ ಮೋಹನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Sat, 27 December 25
