Breaking News: ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ್ದ ಪತ್ರಕರ್ತನಿಗೆ 2 ವರ್ಷ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ..!

Wriddhiman Saha: ಬೋರಿಯಾ ಮಜುಂದಾರ್ ಅವರು ಭಾರತದಲ್ಲಿ ಅಥವಾ ದೇಶದಲ್ಲಿ ಯಾವುದೇ ಪಂದ್ಯಕ್ಕೆ ಮಾನ್ಯತೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಬೋರಿಯಾ ಮಜುಂದಾರ್ ಯಾವುದೇ ಬಿಸಿಸಿಐ ಸದಸ್ಯ ಅಥವಾ ರಾಜ್ಯ ಸಂಘಗಳ ಅಧಿಕಾರಿಗಳೊಂದಿಗೆ ಎರಡು ವರ್ಷಗಳವರೆಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ.

Breaking News: ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ್ದ ಪತ್ರಕರ್ತನಿಗೆ 2 ವರ್ಷ ನಿಷೇಧದ ಶಿಕ್ಷೆ ವಿಧಿಸಿದ ಬಿಸಿಸಿಐ..!
wriddhiman saha
Follow us
| Updated By: ಪೃಥ್ವಿಶಂಕರ

Updated on:May 04, 2022 | 4:33 PM

ಟೀಂ ಇಂಡಿಯಾದ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ (Wriddhiman Saha) ಅವರಿಗೆ ಬೆದರಿಕೆ ಹಾಕಿದ ಪತ್ರಕರ್ತ ಬೋರಿಯಾ ಮಜುಂದಾರ್ ( Boria Majumdar) ವಿರುದ್ಧ ಬಿಸಿಸಿಐ (BCCI) ಕಠಿಣ ಕ್ರಮ ಕೈಗೊಂಡಿದೆ. ಬೋರಿಯಾ ಮಜುಂದಾರ್ ಅವರನ್ನು 2 ವರ್ಷಗಳ ಕಾಲ ನಿಷೇಧಿಸಲಾಗಿದೆ. ಬಿಸಿಸಿಐ ರಚಿಸಿದ್ದ ತ್ರಿಸದಸ್ಯ ಸಮಿತಿಯು ಮಜುಂದಾರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಸಂದರ್ಶನ ನೀಡದಿದ್ದಕ್ಕೆ ಸಹಾಗೆ ಮಜುಂದಾರ್ ಬೆದರಿಕೆ ಹಾಕಿದ್ದರು. ಇದನ್ನು ಸಹಾ ಕೂಡ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. ಆ ಟ್ವೀಟ್‌ನಲ್ಲಿ ಸಹಾ ಪತ್ರಕರ್ತನ ಹೆಸರನ್ನು ಉಲ್ಲೇಖಿಸದಿದ್ದರೂ, ಬಿಸಿಸಿಐ ಈ ವಿಷಯದ ಕುರಿತು ಸಹಾ ಜೊತೆಗೆ ಚರ್ಚೆ ನಡೆಸಿತ್ತು. ಈ ವಿಚಾರಣೆಯ ನಂತರ ಬೋರಿಯಾ ಮಜುಂದಾರ್ ಹೆಸರು ಹೊರಬಿದ್ದಿತ್ತು. ಈ ಬಗ್ಗೆ ತನಿಖೆ ನಡೆಸಲು ಬಿಸಿಸಿಐ ಸಮಿತಿಯೊಂದನ್ನು ರಚಿಸಿದ್ದು, ತಪ್ಪಿತಸ್ಥರೆಂದು ಸಾಬೀತಾದ ನಂತರ, ಈ ಪ್ರಸಿದ್ಧ ಕ್ರೀಡಾ ಪತ್ರಕರ್ತನನ್ನು 2 ವರ್ಷಗಳ ಕಾಲ ಕ್ರಿಕೆಟ್ ವರದಿಗಾರಿಕೆಯಿಂದ ನಿಷೇಧಿಸಲಾಗಿದೆ.

ಬೋರಿಯಾ ಮಜುಂದಾರ್ ವಿರುದ್ಧ ಕ್ರಮ ಬಿಸಿಸಿಐನ ಆದೇಶದ ಪ್ರಕಾರ ಬೋರಿಯಾ ಮಜುಂದಾರ್ ಅವರು 2 ವರ್ಷಗಳ ಕಾಲ ಯಾವುದೇ ಭಾರತೀಯ ಕ್ರಿಕೆಟಿಗರನ್ನು ಸಂದರ್ಶನ ಮಾಡಲು ಸಾಧ್ಯವಿಲ್ಲ. ಬೋರಿಯಾ ಮಜುಂದಾರ್ ಅವರು ಭಾರತದಲ್ಲಿ ಅಥವಾ ದೇಶದಲ್ಲಿ ಯಾವುದೇ ಪಂದ್ಯಕ್ಕೆ ಮಾನ್ಯತೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಬೋರಿಯಾ ಮಜುಂದಾರ್ ಯಾವುದೇ ಬಿಸಿಸಿಐ ಸದಸ್ಯ ಅಥವಾ ರಾಜ್ಯ ಸಂಘಗಳ ಅಧಿಕಾರಿಗಳೊಂದಿಗೆ ಎರಡು ವರ್ಷಗಳವರೆಗೆ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ
Image
DC vs SRH IPL 2022 Head To Head: ಎರಡು ತಂಡಗಳಿಗೂ ಗೆಲುವು ಅಗತ್ಯ; ಇಬ್ಬರ ಮುಖಾಮುಖಿ ವರದಿ ಹೀಗಿದೆ
Image
Wriddhiman Saha: ಬಿಸಿಸಿಐ ಕೇಳಿದರೆ ನಾನು ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ: ಸಾಹಾರಿಂದ ಮತ್ತೊಂದು ಬಾಂಬ್
Image
Wriddhiman Saha: ನಿವೃತ್ತಿ ನೀಡು ಎಂದು ದ್ರಾವಿಡ್ ಸೂಚಿಸಿದರು: ತಂಡದಿಂದ ಕೈಬಿಟ್ಟ ಬೆನ್ನಲ್ಲೇ ಸಾಹ ಶಾಕಿಂಗ್ ಹೇಳಿಕೆ

ಏನಿದೆ ಸ್ಕ್ರೀನ್ ಶಾಟ್​ನಲ್ಲಿ?: ಫೆಬ್ರವರಿ 19 ರಂದು ವೃದ್ಧಿಮಾನ್ ಸಹಾ ಅವರು ಟ್ವೀಟ್ ಮಾಡಿ, ಅದರಲ್ಲಿ ಬೋರಿಯಾ ಮಜುಂದಾರ್ ಅವರ ವಾಟ್ಸಾಪ್ ಸಂದೇಶದ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ನನ್ನ ಜೊತೆಗೆ ಒಂದು ಸಂದರ್ಶನ ಮಾಡಿ, ಒಳ್ಳೆಯದಾಗುತ್ತದೆ, ನೀವು ಎಲ್ಲರಿಗೂ ಸಂದರ್ಶನ ನೀಡಲು ಬಯಸಿದರೆ, ನಾನೇನು ಬಲವಂತ ಮಾಡುವುದಿಲ್ಲ. ಅವರು(ಆಯ್ಕೆ ಸಮಿತಿ) ಅತ್ಯುತ್ತಮವಾದ ಒಬ್ಬ ವಿಕೆಟ್ ಕೀಪರ್ ಆಯ್ಕೆ ಮಾಡಿದ್ದಾರೆ. ನೀವು ಅತ್ಯುತ್ತಮವಲ್ಲದ 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪ್ರಕಾರ ಉತ್ತಮ ನಿರ್ಧಾರವಲ್ಲ. ನೀವು ನಿಮಗೆ ಯಾರು ಸಹಾಯ ಮಾಡಬಲ್ಲರೋ ಅವರನ್ನು ಆಯ್ಕೆ ಮಾಡಿ” ಎಂದು ವಾಟ್ಸ್​ಆ್ಯಪ್​ ಮೂಲಕ ಸರಣಿ ಸಂದೇಶ ಕಳಹಿಸಿದ್ದರು.ಆದರೆ, ಅವರ ಕರೆಯನ್ನು ಸಹಾ ಸ್ವೀಕರಿಸದ್ದಕ್ಕೆ ಕೋಪಗೊಂಡಿರುವ ಆ ಪತ್ರಕರ್ತ, ನೀವು ನನಗೆ ಕರೆ ಮಾಡಿಲ್ಲ, ಇನ್ನು ಯಾವತ್ತೂ ನಾನು ನಿಮ್ಮ ಸಂದರ್ಶನ ಮಾಡುವುದಿಲ್ಲ. ಈ ಅವಮಾನವನ್ನು ನಾನು ಸಾಮಾನ್ಯ ಎಂದು ಪರಿಗಣಿಸುವುದಿಲ್ಲ. ನಾನು ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ. ಇದು ನೀವು ಮಾಡಬೇಕಾದ ಕೆಲಸವಾಗಿರಲಿಲ್ಲ,” ಎಂದು ಕೋಪದಿಂದ ಸಂದೇಶ ಕಳುಹಿಸಿದ್ದರು.

ಈ ಸಂದೇಶಗಳ ಸ್ಕ್ರೀನ್​ ಶಾಟ್​ ತೆಗೆದಿದ್ದ ವೃದ್ಧಿಮಾನ್ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಮಂಡಿದ್ದು “ಭಾರತೀಯ ಕ್ರಿಕೆಟ್​ಗೆ ನಾನು ಇಷ್ಟೆಲ್ಲಾ ಕೊಡುಗೆ ನೀಡಿದ್ದರೂ, ಗೌರವಾನ್ವಿತ ಪತ್ರಕರ್ತ ಎನಿಸಿಕೊಂಡಿರುವ ವ್ಯಕ್ತಿಯಿಂದ ಇದನ್ನು ಎದುರಿಸಿದ್ದೇನೆ. ಪತ್ರಿಕೋದ್ಯಮ ಎತ್ತ ಸಾಗುತ್ತಿದೆ,” ಎಂದು ಟ್ವೀಟ್​ ಮಾಡಿಕೊಂಡಿದ್ದರು.

Published On - 4:33 pm, Wed, 4 May 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ