87 ವರ್ಷಗಳಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಗೆ ಬ್ರೇಕ್ ಹಾಕಿದ BCCI​.. ವಿಜಯ್ ಹಜಾರೆ ಟ್ರೋಫಿಗೆ ಗ್ರೀನ್​ ಸಿಗ್ನಲ್​..!

ರಣಜಿ ಟ್ರೋಫಿಯನ್ನು ಮೊದಲ ಬಾರಿಗೆ 1934 ರಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ರಣಜಿ ಟ್ರೋಫಿಯ ಬದಲಿಗೆ ವಿಜಯ್ ಹಜಾರೆ ಟ್ರೋಫಿ ಮತ್ತು ಹಿರಿಯ ಮಹಿಳಾ ಏಕದಿನ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

87 ವರ್ಷಗಳಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಗೆ ಬ್ರೇಕ್ ಹಾಕಿದ BCCI​.. ವಿಜಯ್ ಹಜಾರೆ ಟ್ರೋಫಿಗೆ ಗ್ರೀನ್​ ಸಿಗ್ನಲ್​..!
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on:Jan 30, 2021 | 1:29 PM

ದೆಹಲಿ: ಬಿಸಿಸಿಐ ತನ್ನ ಪ್ರಥಮ ದರ್ಜೆ ದೇಶೀಯ ಪಂದ್ಯಾವಳಿ ರಣಜಿ ಟ್ರೋಫಿಯನ್ನು ನಡೆಸದಿರಲು ತೀರ್ಮಾನಿಸಿದ್ದು, 87 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ನಿರ್ಧಾರಕ್ಕೆ ಬರಲಾಗಿದೆ.

ರಣಜಿ ಟ್ರೋಫಿಯನ್ನು ಮೊದಲ ಬಾರಿಗೆ 1934 ರಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ರಣಜಿ ಟ್ರೋಫಿಯ ಬದಲಿಗೆ ವಿಜಯ್ ಹಜಾರೆ ಟ್ರೋಫಿ ಮತ್ತು ಹಿರಿಯ ಮಹಿಳಾ ಏಕದಿನ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಈ ಮಾಹಿತಿಯನ್ನು ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜೈ ಶಾ, ರಾಜ್ಯ ಸಂಘಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ರಣಜಿ ಟ್ರೋಫಿಯ ಸಂದರ್ಭದಲ್ಲಿ ಪಂದ್ಯದ ಶುಲ್ಕವಾಗಿ ಪ್ರತಿದಿನ ಸುಮಾರು 45000 ರೂಪಾಯಿಗಳನ್ನು ಗಳಿಸುವ ದೇಶೀಯ ಆಟಗಾರರಿಗೆ ಪರಿಹಾರ ನೀಡಲು ಬಿಸಿಸಿಐ ನಿರ್ಧರಿಸಿದೆ. ರಣಜಿ ಟ್ರೋಫಿಯಲ್ಲಿ ನಾಲ್ಕು ದಿನಗಳ ಕ್ರಿಕೆಟ್ ಆಡಿದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಏಕದಿನ ಪಂದ್ಯಗಳನ್ನು ಆಡಿಸಲಾಗುತ್ತದೆ.

ವಿಜಯ್ ಹಜಾರೆ ಟ್ರೋಫಿ 6 ನಗರಗಳಲ್ಲಿ ಆಯೋಜನೆ.. ಈ ಬಾರಿ ವಿಜಯ್ ಹಜಾರೆ ಟ್ರೋಫಿಯನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮಾದರಿಯಲ್ಲಿ 6 ನಗರಗಳಲ್ಲಿ ಆಯೋಜಿಸಲಾಗುವುದು. ಆದಾಗ್ಯೂ, ಆ 6 ನಗರಗಳು ಯಾವು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಸುಮಾರು 1 ತಿಂಗಳ ಕಾಲ ನಡೆಯುವ ವಿಜಯ್ ಹಜಾರೆ ಟ್ರೋಫಿಗೆ ಫೆಬ್ರವರಿ ಮೊದಲ ವಾರದಲ್ಲಿ ತಂಡಗಳು ಬಯೋ ಬಬಲ್ ಪ್ರವೇಶಿಸಲಿವೆ.

ಸಮಯದ ಅಭಾವದಿಂದಾಗಿ ಬಿಸಿಸಿಐನ ಈ ನಡೆ.. ಸಮಯದ ಅನುಪಸ್ಥಿತಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಮಾದರಿಯಲ್ಲಿ ವಿಜಯ್ ಹಜಾರೆ ಟ್ರೋಫಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ವಾಸ್ತವವಾಗಿ, ಈ ಪಂದ್ಯಾವಳಿ ಮಾರ್ಚ್ ಅಂತ್ಯದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಮೊದಲು ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗಳಲ್ಲಿ ಯಾವುದನ್ನು ಆಯೋಜಿಸಬೇಕು ಎಂಬ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ರಾಜ್ಯ ಸಂಘಗಳಿಂದ ಅಭಿಪ್ರಾಯ ಕೇಳಿತ್ತು. ಹೀಗಾಗಿ ಎಲ್ಲರೂ ವಿಜಯ್ ಹಜಾರೆಗೆ ಪ್ರಾಮುಖ್ಯತೆ ನೀಡಿದರು.

ಯೋ-ಯೋ 2.0? ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಆಟಗಾರರಿಗಾಗಿ ಹೊಸ ಫಿಟ್‌ನೆಸ್ ಪರೀಕ್ಷೆ ಪರಿಚಯಿಸಿದ BCCI

Published On - 1:28 pm, Sat, 30 January 21