Team India New Jersey: ಟಿ20 ವಿಶ್ವಕಪ್​ಗೆ​ ಟೀಮ್ ಇಂಡಿಯಾ ಹೊಸ ಜೆರ್ಸಿ: ಬಿಸಿಸಿಐಯಿಂದ ಬಂತು ಅಧಿಕೃತ ಮಾಹಿತಿ

T20 World Cup: ಬಿಸಿಸಿಐ ಟಿ-20 ವಿಶ್ವಕಪ್​ಗೆ ಭಾರತೀಯ ಆಟಗಾರರು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದೆ. ನೂತನ ಜೆರ್ಸಿಯನ್ನು ಇದೇ ಅಕ್ಟೋಬರ್ 13 ರಂದು ರಿವೀಲ್ ಮಾಡುವುದಾಗಿ ಟ್ವೀಟ್ ಮಾಡಿದೆ.

Team India New Jersey: ಟಿ20 ವಿಶ್ವಕಪ್​ಗೆ​ ಟೀಮ್ ಇಂಡಿಯಾ ಹೊಸ ಜೆರ್ಸಿ: ಬಿಸಿಸಿಐಯಿಂದ ಬಂತು ಅಧಿಕೃತ ಮಾಹಿತಿ
ನವೆಂಬರ್‌ 5: ಇಂಡಿಯಾ vs ಅರ್ಹತಾ ಗುಂಪಿನಿಂದ ಆಯ್ಕೆಯಾಗುವ ತಂಡ ( ಈ ಪಂದ್ಯ ರಾತ್ರಿ: 7:30ಕ್ಕೆ, ದುಬೈನಲ್ಲಿ ನಡೆಯಲಿದೆ)
Follow us
TV9 Web
| Updated By: Vinay Bhat

Updated on: Oct 08, 2021 | 1:23 PM

ಐಸಿಸಿ ಟಿ-20 ವಿಶ್ವಕಪ್ 2021 (ICC T20 World Cup 2021) ಮಹಾ ಸಮರಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸದ್ಯ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಮುಗಿದ ಬೆನ್ನಲ್ಲೇ ಯುಎಇ ಹಾಗೂ ಒಮನ್‌ನಲ್ಲಿ ಅಕ್ಟೋಬರ್‌ 17ರಿಂದ ಚುಟುಕು ಸಮಯ ಶುರುವಾಗಲಿದ್ದು, ನವೆಂಬರ್‌ 14 ರಂದು ದುಬೈನಲ್ಲಿ ಫೈನಲ್‌ ಹಣಾಹಣಿಯ ಮೂಲಕ ಅಂತ್ಯವಾಗಲಿದೆ. ಅಕ್ಟೋಬರ್‌ 24 ರಂದು ಪಾಕಿಸ್ತಾನ (India vs Pakistan) ವಿರುದ್ಧ ಕಾದಾಟ ನಡೆಸುವ ಮೂಲಕ ಭಾರತ ತಂಡ ಚುಟುಕು ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ. ಈ ಬಾರಿಯ ಟೀಮ್ ಇಂಡಿಯಾ ಟಿ-20 ವಿಶ್ವಕಪ್​ಗೆ ನೂತನ ಜೆರ್ಸಿಯೊಂದಿಗೆ (Team India New Jersey) ಕಣಕ್ಕಿಳಿಯಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯ ಇದು ಖಚಿತವಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟಿ-20 ವಿಶ್ವಕಪ್​ಗೆ ಭಾರತೀಯ ಆಟಗಾರರು ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದೆ. ಆದರೆ, ಹೊಸ ಜೆರ್ಸಿಯ ಫೋಟೋವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ನೂತನ ಜೆರ್ಸಿಯನ್ನು ಇದೇ ಅಕ್ಟೋಬರ್ 13 ರಂದು ರಿವೀಲ್ ಮಾಡುವುದಾಗಿ ಬಿಸಿಸಿಐ ಟ್ವೀಟ್ ಮಾಡಿದೆ. ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿ ಪಡೆ ಯಾವರೀತಿಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ.

ಚುಟುಕು ವಿಶ್ವಕಪ್‌ ಟೂರ್ನಿಯು ಎರಡು ಹಂತದಲ್ಲಿ ನಡೆಯಲಿದ್ದು, ಮೊದಲನೇ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆದರೆ, ಎರಡನೇ ಸುತ್ತಿನಲ್ಲಿ ಸೂಪರ್‌ 12ರ ಹಂತದ ಪಂದ್ಯಗಳು ಜರುಗಲಿವೆ. ಅಂದಹಾಗೆ ಮೊದಲನೇ ಸುತ್ತಿನ ಗ್ರೂಪ್‌ ‘ಬಿ’ ಪಂದ್ಯದಲ್ಲಿ ಆತಿಥೇಯ ಒಮನ್‌ ಹಾಗೂ ಪಪುವಾ ನ್ಯೂಗಿನಿ ತಂಡಗಳು ಅ.17 ರಂದು ಸೆಣಸಲಿವೆ.

ಗ್ರೂಪ್‌ ‘ಬಿ’ ನಲ್ಲಿ ಸ್ಥಾನ ಪಡೆದಿರುವ ಐರ್ಲೆಂಡ್‌, ಶ್ರೀಲಂಕಾ, ನೇದರ್ಲೆಂಡ್‌ ಹಾಗೂ ನಮೀಬಿಯಾ ತಂಡಗಳು ಅ.18 ರಿಂದ 22ರವರೆಗೆ ಮೊದಲನೇ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ಕಾದಾಟ ನಡೆಸಲಿವೆ. ಈ ಎರಡೂ ಗುಂಪುಗಳಲ್ಲಿನ ಅಗ್ರ ಎರಡು ತಂಡಗಳು ಮಾತ್ರ ಅಕ್ಟೋಬರ್‌ 23 ರಿಂದ ಆರಂಭವಾಗುವ ಸೂಪರ್‌ 12ರ ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿವೆ.

ಅಕ್ಟೋಬರ್‌ 23 ರಂದು ಅಬುಧಾಬಿಯಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟೂರ್ನಿಯ ಎರಡನೇ ಸುತ್ತಿನ ಸೂಪರ್‌ 12 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದೇ ದಿನ ಸಂಜೆ ದುಬೈನಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್ ಇಂಡೀಸ್‌ ತಂಡಗಳ ಕಾದಾಟ ನಡೆಸಲಿವೆ.

ಮತ್ತೊಂದೆಡೆ ಅಕ್ಟೋಬರ್‌ 24 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಕಾದಾಟ ನಡೆಸಲಿವೆ. ಅ.31 ರಂದು ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ನ.3 ಮತ್ತು ನ.5 ರಂದು ಕ್ರಮವಾಗಿ ಕೊಹ್ಲಿ ಪಡೆ, ಅಫ್ಗಾನಿಸ್ತಾನ ಮತ್ತು ಮೊದಲ ಸುತ್ತಿನ ‘ಬಿ’ ಗುಂಪಿನ ವಿಜೇತ ತಂಡದೊಂದಿಗೆ ಸೆಣಸಲಿದೆ. ಅಂತಿಮವಾಗಿ ನವೆಂಬರ್‌ 8 ರಂದು ಮೊದಲ ಸುತ್ತಿನ ಗುಂಪು ‘ಎ’ ವಿಜೇತ ತಂಡದೊಂದಿಗೆ ಭಾರತ ಕಾದಾಟ ನಡೆಸುವ ಮೂಲಕ ಸೂಪರ್‌ 12 ಹಂತದ ಪಂದ್ಯಗಳು ಮುಕ್ತಾಯವಾಗಲಿವೆ.

Jaya Bhardwaj: ದೀಪಕ್ ಚಹರ್ ಪ್ರೊಪೋಸ್ ಮಾಡಿದ ಜಯಾ ಭಾರದ್ವಜ್‌ ಯಾರು ಗೊತ್ತಾ?, ಕೇಳಿದ್ರೆ ಶಾಕ್ ಅಗ್ತೀರಾ

Mumbai Indians: ಮುಂಬೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಹೀಗೆ ಮಾಡಬೇಕು

RCB Predicted XI: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದಿಂದ ಇಬ್ಬರು ಆಟಗಾರರು ಔಟ್: 2 ಬದಲಾವಣೆ ಖಚಿತ

(BCCI confirms Indian cricket team new T20 World Cup jersey launch date on October 13)

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ