15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೂ ಕೊರೊನಾ ವಕ್ಕರಿಸಿದೆ. ಟೂರ್ನಿ ಆರಂಭಕ್ಕೂ ಮುನ್ನ ನಡೆಯಬೇಕಿರುವ ಮೆಗಾ ಹರಾಜು (Mega Auction) ಕಾರ್ಯಕ್ರಮಕ್ಕೇ ಅಡೆತಡೆಗಳು ಆಗುತ್ತಿದೆ. ಹೀಗಾಗಿ ಇದನ್ನು ಭಾರತದಲ್ಲಿ ನಡೆಸಲು ಸಾಧ್ಯವೇ ಅಥವಾ ಮತ್ತೆ ವಿದೇಶದತ್ತ ಮುಖ ಮಾಡಲಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಕೋವಿಡ್-19 (Covid 19) ಸೋಂಕಿನ ಹಾವಳಿ ಕಾರಣ ಬಿಸಿಸಿಐ (BCCI) ಈಗಾಗಲೇ ಪ್ರತಿಷ್ಠ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿ ಆಗಿದೆ. ಈ ನಿಟ್ಟಿನಲ್ಲಿ ಐಪಿಎಲ್ 2022 ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಮತ್ತೆ ಯುಎಇ ಆಯ್ಕೆ ಮಾಡಿಕೊಂಡರೆ ಅಚ್ಚರಿ ಪಡುವಹಾಗಿಲ್ಲ. ಇದಕ್ಕೆ ಪುಷ್ಠಿ ಎಂಬಂತೆ ಎರಡು ದಿನಗಳಿಂದ ವಿದೇಶದಲ್ಲಿ ಐಪಿಎಲ್ 2022 (IPL 2022) ಆಯೋಜಿಸಲು ಬಿಸಿಸಿಐ ಆಲೋಚನೆ ನಡೆಸಿದೆ ಎಂದು ಹೇಳಲಾಗಿತ್ತು. ಆದರೀಗ ಬಿಸಿಸಿಐ ಮೂಲಗಳಿಂದ ಅಧಿಕೃತ ಹೇಳಿಕೆಯೊಂದು ಬಂದಿದೆ.
ಇನ್ಸೈಡ್ ಸ್ಫೋರ್ಟ್ಸ್ ಮಾಡಿರುವ ವರದಿಯ ಪ್ರಕಾರ, ಐಪಿಎಲ್ 2022 ಎಲ್ಲಿ ಆಯೋಜಿಸಬೇಕು ಮತ್ತು ವೇಳಾಪಟ್ಟಿಯ ಬಗ್ಗೆ ಚರ್ಚೆ ಏನಿದ್ದರೂ ಹರಾಜು ಪ್ರಕ್ರಿಯೆ ಮುಗಿದ ನಂತರ ಎಂದು ಬಿಸಿಸಿಐ ಹೇಳಿದೆಯಂತೆ. ಸದ್ಯಕ್ಕೆ ನಮ್ಮ ಮೊದಲ ಆದ್ಯತೆ ಮೆಗಾ ಹರಾಜಿನ ಮೇಲೆ ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರಂತೆ.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಮತ್ತೆ ಶುರುವಾಗಿದೆ. ಇತ್ತೀಚಿನ ದಾಖಲೆಗಳ ಪ್ರಕಾರ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಜೊತೆಗೆ ಓಮಿಕ್ರಾನ್ ಸೋಂಕು ಕೂಡ ಹೆಚ್ಚಾಗುವ ಭೀತಿ ಇದೆ. ಈ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲು ಆಲೋಚನೆ ನಡೆಸಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಹರಾಜು ಪ್ರಕ್ರಿಯೆ ಯಾವಾಗ?:
ಮೊನ್ನೆಯಷ್ಟೆ ಬಿಸಿಸಿಐ ಮುಂದಿನ ತಿಂಗಳು ಫೆಬ್ರವರಿ 12-13ರಂದು ಆಟಗಾರರ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಿತ್ತು. ಆದರೀಗ ಮೆಗಾ ಆಕ್ಷನ್ ಕೂಡ ಬೆಂಗಳೂರಿನಿಂದ ಸ್ಥಳಾಂತರ ಮತ್ತು ದಿನಾಂಕ ಬದಲಾವಣೆಯ ಆಗುವುದು ಖಚಿತವಾಗಿದೆ. ಬೆಂಗಳೂರು ಸಹಿತ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿಢೀರ್ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ಹೊಸ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರನ್ವಯ ನೈಟ್ ಕಫ್ರ್ಯೂ ವೀಕೆಂಡ್ ಲಾಕ್‌ಡೌನ್ ಸಹಿತ ಹಲವು ನಿರ್ಬಂಧಗಳು ಜಾರಿಯಾಗಿದ್ದು, ಹೆಚ್ಚಿನ ಜನರನ್ನು ಸೇರಿಸಿ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲು ಸಾಧ್ಯವಿಲ್ಲದ ಕಾರಣ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.
ಐಪಿಎಲ್ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಈಗಾಗಲೆ ಕೋಲ್ಕತ್ತಾ, ಕೊಚ್ಚಿ ಮತ್ತು ಮುಂಬೈಯನ್ನು ಮೀಸಲು ತಾಣಗಳಾಗಿ ಹೆಸರಿಸಿದೆ. ಜೊತೆಗೆ ಮೆಗಾ ಹರಾಜು ಪ್ರಕ್ರಿಯೆಯನ್ನು ಇನ್ನೊಂದಿಷ್ಟು ಸಮಯ ಮುಂದಕ್ಕೆ ಹಾಕಲು ನಿರ್ಧಾರ ಮಾಡಿದೆಯಂತೆ. ಐಪಿಎಲ್ 2022ರ ಸಂಪೂರ್ಣ ಎಲ್ಲ ಪಂದ್ಯಗಳನ್ನು ಮುಂಬೈನಲ್ಲಿ ಆಯೋಜಿಸಲಿದೆ ಎಂಬ ಮಾತುಗಳು ಕೂಡ ಇದೆ.
Virat Kohli: ದ. ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ಗೆ ಕೊಹ್ಲಿ ಫಿಟ್: ಕೇಪ್ಟೌನ್ನಲ್ಲಿ ಭರ್ಜರಿ ಅಭ್ಯಾಸ