Virat Kohli: ದ. ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್​ಗೆ ಕೊಹ್ಲಿ ಫಿಟ್: ಕೇಪ್​ಟೌನ್​ನಲ್ಲಿ ಭರ್ಜರಿ ಅಭ್ಯಾಸ

South Africa vs India: ಜೋಹಾನ್ಸ್‌ಬರ್ಗ್‌ನಲ್ಲಿನ ಸೋಲಿನಿಂದ ಚೇತರಿಸಿಕೊಳ್ಳಲು ಮತ್ತು ಸರಣಿ ಗೆಲುವನ್ನು ಪಡೆಯುವ ಆಶಯದೊಂದಿಗೆ ಭಾರತ ತಂಡವು ಮೂರನೇ ಮತ್ತು ಅಂತಿಮ ಟೆಸ್ಟ್‌ಗಾಗಿ ತರಬೇತಿಯನ್ನು ಪ್ರಾರಂಭಿಸಿತು. ನಾಯಕ ವಿರಾಟ್ ಕೊಹ್ಲಿ ಕೂಡ ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.

Virat Kohli: ದ. ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್​ಗೆ ಕೊಹ್ಲಿ ಫಿಟ್: ಕೇಪ್​ಟೌನ್​ನಲ್ಲಿ ಭರ್ಜರಿ ಅಭ್ಯಾಸ
Virat Kohli IND vs SA
Follow us
TV9 Web
| Updated By: Vinay Bhat

Updated on: Jan 10, 2022 | 7:25 AM

ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa vs India) ನಡುವಣ ಟೆಸ್ಟ್ ಸರಣಿಯ ಅಂತಿಮ ನಿರ್ಣಾಯಕ ಕದನ ಮಂಗಳವಾರದಿಂದ ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಶುರುವಾಗಲಿದೆ. ಈಗಾಗಲೇ ಜೋಹಾನ್ಸ್​ಬರ್ಗ್​​ನಿಂದ ಕೇಪ್​ಟೌನ್​ಗೆ (Capetown) ಬಂದಿಳಿದಿರುವ ಟೀಮ್ ಇಂಡಿಯಾ (Team India) ಅಭ್ಯಾಸ ಶುರು ಮಾಡಿಕೊಂಡಿದೆ. ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಇದರೊಂದಿಗೆ ಅವರು ದಕ್ಷಿಣ ಅಫ್ರಿಕಾ ಎದುರಿನ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬೆನ್ನುನೋವು ಇದ್ದ ಕಾರಣಕ್ಕೆ ಕೊಹ್ಲಿ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಸರಣಿಯ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಕೆ.ಎಲ್. ರಾಹುಲ್ (KL Rahul) ನಾಯಕತ್ವ ವಹಿಸಿದ್ದರು. ಇದೀಗ ಕೊಹ್ಲಿ ಚೇತರಿಸಿಕೊಂಡಿದ್ದು, ಅಭ್ಯಾಸ ನಡೆಸುತ್ತಿರುವ ಕಾರಣ ಮೂರನೇ ಟೆಸ್ಟ್​ನಲ್ಲಿ (3rd Test) ಆಡುವುದು ಖಚಿತವಾಗಿದೆ.

ಜೋಹಾನ್ಸ್‌ಬರ್ಗ್‌ನಲ್ಲಿನ ಸೋಲಿನಿಂದ ಚೇತರಿಸಿಕೊಳ್ಳಲು ಮತ್ತು ಸರಣಿ ಗೆಲುವನ್ನು ಪಡೆಯುವ ಆಶಯದೊಂದಿಗೆ ಭಾರತ ತಂಡವು ಮೂರನೇ ಮತ್ತು ಅಂತಿಮ ಟೆಸ್ಟ್‌ಗಾಗಿ ತರಬೇತಿಯನ್ನು ಭಾನುವಾರ ಪ್ರಾರಂಭಿಸಿತು. ನಾವು ಇಲ್ಲಿ ಸುಂದರವಾದ ಕೇಪ್ ಟೌನ್‌ನಲ್ಲಿದ್ದೇವೆ. ಟೀಮ್ ಇಂಡಿಯಾ 3ನೇ ಟೆಸ್ಟ್‌ಗೆ ತಯಾರಿಯನ್ನು ಪ್ರಾರಂಭಿಸಿದೆ ಎಂದು ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ ಕೇಪ್​ಟೌನ್​ಗೆ ಬಂದಿಳಿದ ಭಾರತಕ್ಕೆ ಊಹಿಸಲಾಗದ ರೀತಿಯಲ್ಲಿ ಅಭೂತಪೂರ್ವ ಸ್ವಾಗತಿ ಸಿಕ್ಕಿತು. ಆಫ್ರಿಕಾದವರು ತಮ್ಮದೆ ಶೈಲಿಯ ಸಂಗೀತ, ನೃತ್ಯದ ಮೂಲಕ ಭಾರತೀಯ ಆಟಗಾರರನ್ನು ವೆಲ್​ಕಮ್ ಮಾಡಿದರು. ಅಲ್ಲದೆ ಕೇಪ್​ಟೌನ್​ಗೆ ಸ್ವಾಗತ ಎಂದು ಬರೆದಿರುವ ಕೇಕ್ ಕೂಡ ತಯಾರು ಮಾಡಿದ್ದರು.

3ನೇ ಟೆಸ್ಟ್ ಪಂದ್ಯ ನಡೆಯಲಿರುವ ಕೇಪ್ ಟೌನ್ ಭಾರತಕ್ಕೆ ಇದುವರೆಗೆ ಅದೃಷ್ಟವಾಗಿ ಪರಿಣಮಿಸಿಲ್ಲ. ಈ ಗ್ರೌಂಡ್ ನಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಸೋಲು ಕಂಡಿದೆ. ಉಳಿದ ಎರಡು ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಕಂಡಿದೆ. ಹೌದು, ಕೇಪ್ ಟೌನ್​ನ ನ್ಯೂಲ್ಯಾಂಡ್ಸ್ ಮೈದಾನಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆಡಿದ ಎಲ್ಲ ಪಂದ್ಯ ಡ್ರಾ ಮತ್ತು ಸೋಲು ಕಂಡಿದೆ. ಹೀಗಾಗಿ ಮೂರನೇ ಟೆಸ್ಟ್​ನಲ್ಲಿ ಭಾರತಕ್ಕೆ ಕಮ್​ಬ್ಯಾಕ್ ಮಾಡಲು ತುಂಬಾನೆ ಕಷ್ಟವಿದೆ.

ಸೆಂಚೂರಿಯನ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್​ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಜೋಹಾನ್ಸ್​ಬರ್ಗ್​​ನಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್​ಗಳ ಗೆಲುವು ಕಂಡಿತು. ಹೀಗಾಗಿ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಸದ್ಯ ಮೂರನೇ ಟೆಸ್ಟ್​ ಪಂದ್ಯದ ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ.

ಸಾಯಿ ಪ್ರಣೀತ್​ಗೆ ಕೊರೊನಾ ಪಾಸಿಟಿವ್; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ಬ್ಯಾಡ್ಮಿಂಟನ್ ಸ್ಟಾರ್

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ