ಅವಕಾಶ ಕೊಟ್ಟಿದ್ದು ಸಾಕು, ಪಂತ್​ನನ್ನು ಕೂರಿಸಿ ಎಂದ ಟೀಮ್ ಇಂಡಿಯಾ ಮಾಜಿ ಆಟಗಾರ

ಅವಕಾಶ ಕೊಟ್ಟಿದ್ದು ಸಾಕು, ಪಂತ್​ನನ್ನು ಕೂರಿಸಿ ಎಂದ ಟೀಮ್ ಇಂಡಿಯಾ ಮಾಜಿ ಆಟಗಾರ
rishabh pant

India vs South Africa: ಭಾರತ-ದಕ್ಷಿಣ ಆ ಸರಣಿಯ ಮೂರನೇ ಪಂದ್ಯ ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ವಶಪಡಿಸಿಕೊಳ್ಳಲಿದೆ.

TV9kannada Web Team

| Edited By: Zahir PY

Jan 09, 2022 | 9:19 PM

ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲೂ ತಮ್ಮ ಕಳಪೆ ಬ್ಯಾಟಿಂಗ್ ಫಾರ್ಮ್​ ಮುಂದುವರೆಸಿದ್ದಾರೆ. ಇದೀಗ ಭಾರತ-ದಕ್ಷಿಣ ಆಫ್ರಿಕಾ ನಡುವಣ ನಿರ್ಣಾಯಕ ಪಂದ್ಯವು ಕೇಪ್​ಟೌನ್​​ನಲ್ಲಿ ನಡೆಯಲಿದ್ದು, ಈ ಪಂದ್ಯದಿಂದ ಪಂತ್ ಅವರನ್ನು ಕೈ ಬಿಡಬೇಕೆಂದು ಭಾರತದ ಮಾಜಿ ಆಟಗಾರ ಮದನ್ ಲಾಲ್ ಹೇಳಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ಪಂತ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯಲು ಅರ್ಹನಲ್ಲ. ಇದಾಗ್ಯೂ ಮತ್ತೆ ಮತ್ತೆ ಅವಕಾಶ ನೀಡಬಾರದು ಎಂದು ಲಾಲ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ರಿಷಭ್ ಪಂತ್ ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು ಕೇವಲ 59 ರನ್ ಮಾತ್ರ. ಮೊದಲ ಪಂದ್ಯದಲ್ಲಿ 8 ಮತ್ತು 34 ರನ್​ಗಳಿಸಿದರೆ, ಎರಡನೇ ಟೆಸ್ಟ್‌ನಲ್ಲಿ 17 ಮತ್ತು 0 ಗಳಿಸಿ ವಿಕೆಟ್​ ಒಪ್ಪಿಸಿದ್ದರು. ಇದೀಗ ಮೂರನೇ ಟೆಸ್ಟ್​ನಲ್ಲೂ ಅವಕಾಶ ನೀಡುವುದರಿಂದ ಇತರೆ ಆಟಗಾರರಿಗೆ ಚಾನ್ಸ್ ತಪ್ಪಿಸಿದಂತಾಗುತ್ತದೆ ಎಂದು ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.

ಪಂತ್ ಅವರ ಕಳಪೆ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಬೇಕು. ಅವರ ಸ್ಥಾನದಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಸಹಾ ಕೂಡ ಉತ್ತಮ ಬ್ಯಾಟರ್ ಹಾಗೂ ವಿಕೆಟ್ ಕೀಪರ್. ಹೀಗಾಗಿ ಸಾಹಗೆ ಅವಕಾಶ ನೀಡಬೇಕು. ಇನ್ನು ರಿಷಬ್ ಪಂತ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಹೇಗೆ ಆಡಬೇಕೆಂದು ನಿರ್ಧರಿಸಬೇಕು ಎಂದಿರುವ ಮದನ್ ಲಾಲ್, ಪಂತ್​ಗೆ ಬ್ಯಾಟಿಂಗ್ ಮಾಡುವ ಬಗ್ಗೆ ಸಂದೇಹವಿದ್ದರೆ ವಿಶ್ರಾಂತಿ ನೀಡುವುದು ಉತ್ತಮ ಎಂದು ತಿಳಿಸಿದ್ದಾರೆ.

ರಿಷಭ್ ಪಂತ್ ಅವರು ಮ್ಯಾಚ್ ವಿನ್ನರ್ ಆಟಗಾರ ಆಗಿರಬಹುದು. ಆದರೆ ಯಾವಾಗಲೂ ಒಂದೇ ರೀತಿಯಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ನೀವು ತಂಡಕ್ಕಾಗಿ ಬ್ಯಾಟ್ ಮಾಡಬೇಕು. ಜವಾಬ್ದಾರಿಯುತವಾಗಿ ತಂಡದಲ್ಲಿರಬೇಕಾಗುತ್ತದೆ ಎಂದು ಮದನ್ ಲಾಲ್ ತಿಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್​ ಪಂದ್ಯದಲ್ಲಿ ರಿಷಭ್ ಪಂತ್ ಮುನ್ನುಗ್ಗಿ ಹೊಡೆಯಲು ಮುಂದಾಗಿ ವಿಕೆಟ್ ಕೈಚೆಲ್ಲಿದ್ದರು. ಈ ಬಗ್ಗೆ ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಆಟಗಾರರು ಪಂತ್ ಬ್ಯಾಟಿಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮದನ್ ಲಾಲ್ ಕೂಡ ರಿಷಬ್ ಪಂತ್ ಅವರು ಜವಾಬ್ದಾರಿಯುತವಾಗಿ ಆಡಬೇಕೆಂದು ತಿಳಿಸಿದ್ದಾರೆ.

ಭಾರತ-ದಕ್ಷಿಣ ಆ ಸರಣಿಯ ಮೂರನೇ ಪಂದ್ಯ ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ಅಂತಿಮ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕವಾಗಿ ಪರಿಣಮಿಸಿದೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(rishabh pant should be dropped in 3rd test says former indian cricketer)

Follow us on

Related Stories

Most Read Stories

Click on your DTH Provider to Add TV9 Kannada