ಧೋನಿ ವಿರುದ್ದ KKR ಮಾಸ್ಟರ್ ಸ್ಟ್ರೋಕ್: ಬರೀ ಶೋಆಫ್ ಎಂದ ರವೀಂದ್ರ ಜಡೇಜಾ
Ravindra jadeja: ಪ್ಯಾಟ್ ಕಮಿನ್ಸ್ ನಿಲ್ಲಿಸಿದ ಫೀಲ್ಡಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋವನ್ನು ಮೀರಿಸುವಂತಹ ಮತ್ತೊಂದು ಚಿತ್ರವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಹಂಚಿಕೊಂಡಿದೆ.
ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್… ಸಿಡ್ನಿ ಮೈದಾನದಲ್ಲಿ ನಡೆದ ಅಂತಿಮ ಮೂರು ಓವರ್ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು ಕೇವಲ 1 ವಿಕೆಟ್ನ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ರಣ ರೋಚಕ ಪಂದ್ಯವು ಅಂತಿಮ ಓವರ್ನತ್ತ ಸಾಗಿತು. ಆಸ್ಟ್ರೇಲಿಯಾ ತಂಡದ ನಾಯಕಪ್ಯಾಟ್ ಕಮ್ಮಿನ್ಸ್ ಚೆಂಡನ್ನು ಸ್ಟೀವ್ ಸ್ಮಿತ್‌ಗೆ ಹಸ್ತಾಂತರಿಸಿದರು. ಅಷ್ಟೇ ಅಲ್ಲದೆ ಫೀಲ್ಡಿಂಗ್ ಸೆಟ್ಟಿಂಗ್ ಬದಲಿಸಿದರು. ಒಂದು ವಿಕೆಟ್ ಪಡೆಯಲು ಆಸ್ಟ್ರೇಲಿಯಾ ಆಟಗಾರರ ಪಿಚ್ ಭಾಗದಲ್ಲೇ ಫೀಲ್ಡಿಂಗ್ನಲ್ಲಿ ನಿಂತರು. ಇದಾಗ್ಯೂ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಪ್ಯಾಟ್ ಕಮಿನ್ಸ್ ನಿಲ್ಲಿಸಿದ ಫೀಲ್ಡಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋವನ್ನು ಮೀರಿಸುವಂತಹ ಮತ್ತೊಂದು ಚಿತ್ರವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಹಂಚಿಕೊಂಡಿದೆ. ಈ ಮೂಲಕ ನಾವು ಟಿ20 ಕ್ರಿಕೆಟ್ನಲ್ಲೇ ಇಂತಹ ಫೀಲ್ಡಿಂಗ್ ಸೆಟ್ ಮಾಡಿದ್ದೆವು ಎಂಬುದನ್ನು ಸಾರಿದ್ದಾರೆ.
ಈ ಫೋಟೋದಲ್ಲಿ ಪುಣೆ ಸೂಪರ್ ಜೈಂಟ್ಸ್ ನಡುವಣ ಪಂದ್ಯದಲ್ಲಿ KKR ಆಟಗಾರರು ಸ್ಟ್ರೈಕ್ನಲ್ಲಿದ್ದ ಧೋನಿ ಸುತ್ತಲೂ ನಿಂತಿದ್ದರು. ಪಿಯೂಷ್ ಚಾವ್ಲಾ ಅವರ ಬೌಲಿಂಗ್ ನಾಲ್ವರು ಆಟಗಾರರು ಕ್ರೀಸ್ ಪಕ್ಕದಲ್ಲೇ ಫೀಲ್ಡ್ ಮಾಡಿದ್ದರು. ಈ ಫೋಟೋವನ್ನು ಹಂಚಿಕೊಂಡಿರುವ ಕೆಕೆಆರ್ ಇದು ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ತಂತ್ರವಾಗಿದ್ದರೆ, ನಮ್ಮ T20 ಮಾಸ್ಟರ್ ಸ್ಟ್ರೋಕ್ ಅನ್ನು ನೆನಪಿಸುತ್ತಿದೆ’ ಎಂದು ಬರೆದುಕೊಂಡಿದ್ದರು.
That moment when a classic move in Test cricket actually reminds you of a T20 master stroke! #Ashes #KKR #AmiKKR #AUSvENG pic.twitter.com/D3XbMu83mf
— KolkataKnightRiders (@KKRiders) January 9, 2022
ಕೆಕೆಆರ್ ತಂಡ ಈ ಪೋಸ್ಟ್ ನೋಡಿರುವ ಸಿಎಸ್ಕೆ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಇದು ಮಾಸ್ಟರ್ ಸ್ಟ್ರೋಕ್ ಏನಲ್ಲ, ಸುಮ್ಮನೆ ಶೋಆಫ್ ಎಂದು ಜಡೇಜಾ ಕೆಕೆಆರ್ ಪೋಸ್ಟ್ ಅನ್ನು ಟ್ರೋಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿಎಸ್ಕೆ ಅಭಿಮಾನಿಗಳು ಕೂಡ ಕೆಕೆಆರ್ ಪೋಸ್ಟ್ ಅನ್ನು ಕಿಚಾಯಿಸಿದ್ದಾರೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಯೊಬ್ಬರು 2017 ರಲ್ಲಿ ಕೆಕೆಆರ್ ಮಾಲೀಕ ಶಾರೂಖ್ ಖಾನ್ ನೀಡಿರುವ ಹೇಳಿಕೆಯನ್ನೇ ಮುಂದಿಟ್ಟು ಟ್ರೋಲ್ ಮಾಡಿದ್ದಾರೆ. 2017 ರ ಹರಾಜಿನ ವೇಳೆ ಶಾರೂಖ್ ಖಾನ್ ನಾನು ನನ್ನ ಪೈಜಾಮಾವನ್ನು ಮಾರಾಟ ಮಾಡಿಯಾದರೂ ಧೋನಿಯನ್ನು ಖರೀದಿಸಲು ಬಯಸಿದ್ದೆ ಎಂಬ ಹೇಳಿಕೆ ನೀಡಿದ್ದರು. ಇದನ್ನೆ ಮುಂದಿಟ್ಟು ಇದೀಗ ಸಿಎಸ್ಕೆ ಅಭಿಮಾನಿಗಳ ಕೆಕೆಆರ್ ಪೋಸ್ಟ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Ravindra jadeja trolls kolkata knight riders ms dhoni tweet)
Published On - 7:27 pm, Sun, 9 January 22