IPL 2024: ಈ ಬಾರಿ ಇರಲ್ಲ ಟಾಟಾ ಐಪಿಎಲ್: ಶೀರ್ಷಿಕೆ ಪ್ರಾಯೋಜಕರ ಹಕ್ಕು ಹರಾಜಿಗೆ ಮುಂದಾದ ಬಿಸಿಸಿಐ

IPL 2024 Title Sponsor Rights: ಪ್ರಸ್ತುತ, ಐಪಿಎಲ್ ಶೀರ್ಷಿಕೆ ಪ್ರಾಯೋಜಕರು ಟಾಟಾ. ಈ ಬಾರಿ ಟಾಟಾ ಮತ್ತು ಬಿಸಿಸಿಐ ನಡುವೆ ಎರಡು ವರ್ಷಗಳ ಒಪ್ಪಂದ ಕೊನೆಗೊಳ್ಳಲಿದೆ. ಹೀಗಾಗಿ ಶೀರ್ಷಿಕೆ ಪ್ರಾಯೋಜಕರ ಹಕ್ಕು ಹರಾಜಿಗೆ ಬಿಸಿಸಿಐ ಮುಂದಾಗಿದೆ. 2008 ರಲ್ಲಿ ಐಪಿಎಲ್ ಅನ್ನು DLF IPL ಎಂದು ಕರೆಯಲಾಯಿತು. ಇದನ್ನು ಶೀರ್ಷಿಕೆ ಪ್ರಾಯೋಜಕತ್ವ ಎಂದು ಕರೆಯಲಾಗುತ್ತದೆ.

IPL 2024: ಈ ಬಾರಿ ಇರಲ್ಲ ಟಾಟಾ ಐಪಿಎಲ್: ಶೀರ್ಷಿಕೆ ಪ್ರಾಯೋಜಕರ ಹಕ್ಕು ಹರಾಜಿಗೆ ಮುಂದಾದ ಬಿಸಿಸಿಐ
IPL 2024
Follow us
Vinay Bhat
|

Updated on:Dec 14, 2023 | 9:06 AM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಶೀರ್ಷಿಕೆ ಪ್ರಾಯೋಜಕರ ಹಕ್ಕುಗಳನ್ನು ಮಾರಾಟ ಮಾಡಲು ಟೆಂಡರ್‌ ಆಹ್ವಾನಿಸಿದೆ. ಮಂಡಳಿಯು ಮುಂದಿನ ಐದು ಸೀಸನ್‌ಗಳಿಗೆ ಅಂದರೆ 2024 ರಿಂದ 2028 ರವರೆಗೆ ಪ್ರಾಯೋಜಕತ್ವದ ಹಕ್ಕುಗಳನ್ನು ಹರಾಜು ಮಾಡುತ್ತದೆ. 2022 ರಲ್ಲಿ ಐಪಿಎಲ್ ಟೈಟಲ್ ಪ್ರಾಯೋಜಕ ಟಾಟಾ, ಬಿಸಿಸಿಐ ಜೊತೆಗಿನ ಎರಡು ವರ್ಷಗಳ ಒಪ್ಪಂದದ ಹಕ್ಕನ್ನು 600 ಕೋಟಿ ರೂ. ಗೆ ಖರೀದಿಸಿತ್ತು.

ಮಂಡಳಿಯು ನೀಡಿದ ಮಾಹಿತಿಯ ಪ್ರಕಾರ, ಮೊದಲಿಗೆ ಪ್ರಾಯೋಜಕತ್ವದ ಹಕ್ಕುಗಳನ್ನು ಖರೀದಿಸಲು ಬಯಸುವ ಕಂಪನಿಗಳು ಟೆಂಡರ್ ದಾಖಲೆಗಳನ್ನು ಖರೀದಿಸಬೇಕಾಗುತ್ತದೆ. ಈ ದಾಖಲೆಗಾಗಿ ಕಂಪನಿಗಳು 5 ಲಕ್ಷ ರೂ. ಗಳ ಮೊತ್ತವನ್ನು ಪಾವತಿಸಬೇಕು. ಡಾಕ್ಯುಮೆಂಟ್ ಅನ್ನು ಖರೀದಿಸಲು ಕೊನೆಯ ದಿನಾಂಕ ಜನವರಿ 8, 2024 ಆಗಿದೆ. ಡಾಕ್ಯುಮೆಂಟ್ ಅನ್ನು ಖರೀದಿಸಿದ ನಂತರ, ಕಂಪನಿಗಳು ಪಾವತಿ ವಿವರಗಳನ್ನು ipltitlesponsor2023.itt@bcci.tv ಗೆ ಕಳುಹಿಸಬೇಕಾಗುತ್ತದೆ.

ಟೆಂಡರ್ ದಾಖಲೆಯನ್ನು ಖರೀದಿಸಿದರೂ ಅದರ ಆಧಾರದ ಮೇಲೆ ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಮಂಡಳಿಯು ಮೊದಲು ಎಲ್ಲಾ ಕಂಪನಿಗಳ ಅರ್ಹತೆಯನ್ನು ನಿರ್ಣಯಿಸುತ್ತದೆ. ಆ ಬಳಿಕವಷ್ಟೇ ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.

ಇದನ್ನೂ ಓದಿ
Image
IND vs SA: ನಿರ್ಣಾಯಕ ಪಂದ್ಯ: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ
Image
ಎಡ-ಬಲ ಕಾಂಬಿನೇಷನ್: ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್
Image
IND A vs SA A: ಸೌತ್ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಪ್ರದೋಶ್
Image
ಸರಣಿಗಳಲ್ಲಿ ಹೀರೋ-ಐಸಿಸಿ ಟೂರ್ನಿಯಲ್ಲಿ ಝೀರೋ: ಇದು ಟೀಮ್ ಇಂಡಿಯಾ

IND vs SA 2nd T20I: ರೋಹಿತ್-ರಹಾನೆಯ ಕೆಟ್ಟ ದಾಖಲೆ ಪಟ್ಟಿಗೆ ಗಿಲ್-ಜೈಸ್ವಾಲ್

ಪ್ರಸ್ತುತ, ಐಪಿಎಲ್ ಶೀರ್ಷಿಕೆ ಪ್ರಾಯೋಜಕರು ಟಾಟಾ. ಅಂದರೆ, ಇದನ್ನು ಟಾಟಾ ಐಪಿಎಲ್ ಎಂದು ಕರೆಯುತ್ತಿದೆ. ಲೀಗ್ ಹೆಸರಿವ ಮೊದಲು ಬ್ರಾಂಡ್ ನೇಮ್ ಬರಲಿದೆ. 2008 ರಲ್ಲಿ ಐಪಿಎಲ್ ಅನ್ನು DLF ಐಪಿಎಲ್ ಎಂದು ಕರೆಯಲಾಯಿತು. ಇದನ್ನು ಶೀರ್ಷಿಕೆ ಪ್ರಾಯೋಜಕತ್ವ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಕಂಪನಿಗಳು ಬಿಡ್ ಮಾಡಿ ಒಪ್ಪಂದವನ್ನು ಪಡೆದುಕೊಳ್ಳುತ್ತವೆ.

2008 ರಲ್ಲಿ, ಶೀರ್ಷಿಕೆ ಪ್ರಾಯೋಜಕತ್ವದ ವೆಚ್ಚ ರೂ. 50 ಕೋಟಿ ಇಡಲಾಗಿದೆ. ಆದಾಗ್ಯೂ, 2023 ರಲ್ಲಿ ಈ ಅಂಕಿ ಅಂಶವು ರೂ. 300 ಕೋಟಿಗೂ ಅಧಿಕವಾಗಿದೆ. ಟಾಟಾ ಮತ್ತು ಬಿಸಿಸಿಐ ನಡುವೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದಕ್ಕಾಗಿ ಟಾಟಾ ಒಟ್ಟು ಬರೋಬ್ಬರಿ 600 ಕೋಟಿ ರೂ. ಪಾವತಿಸಿತ್ತು.

ಡಿಸೆಂಬರ್ 19 ರಂದು ಆಟಗಾರರ ಹರಾಜು:

ಐಪಿಎಲ್ 2024 ರ ಹರಾಜು ಡಿಸೆಂಬರ್ 19 ರಂದು ಮಧ್ಯಾಹ್ನ 2:30 ರಿಂದ ದುಬೈನಲ್ಲಿ ನಡೆಯಲಿದೆ. ಬಿಸಿಸಿಐ ಸೋಮವಾರ 333 ಆಟಗಾರರ ಹೆಸರನ್ನು ಹಂಚಿಕೊಂಡಿದೆ. 10 ತಂಡಗಳಲ್ಲಿ 77 ಸ್ಲಾಟ್‌ಗಳು ಖಾಲಿ ಇವೆ. ಅಂದರೆ 333 ಆಟಗಾರರಲ್ಲಿ 77 ಆಟಗಾರರು ಹರಾಜಿನಲ್ಲಿರಲಿದ್ದಾರೆ. ಇದರಲ್ಲಿ 30 ವಿದೇಶಿಗರು ಇದ್ದಾರೆ. ವಿಶ್ವಕಪ್ 2023 ರಲ್ಲಿ, ಆಸ್ಟ್ರೇಲಿಯಾದ ಅಗ್ರ ಆಟಗಾರ ಟ್ರಾವಿಸ್ ಹೆಡ್ ಸೇರಿದಂತೆ ಎಲ್ಲಾ 23 ಆಟಗಾರರ ಮೂಲ ಬೆಲೆಯನ್ನು 2 ಕೋಟಿ ರೂ. ನಿಗದಿ ಮಾಡಲಾಗಿದೆ. 333 ಆಟಗಾರರ ಪೈಕಿ 214 ಭಾರತೀಯರು ಮತ್ತು 199 ವಿದೇಶಿ ಆಟಗಾರರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 am, Thu, 14 December 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ