Ranji Trophy: ರಣಜಿ ಟ್ರೋಫಿ ಆರಂಭಕ್ಕೆ ದಿನಾಂಕ ಖಚಿತಪಡಿಸಿದ ಬಿಸಿಸಿಐ ಬಿಗ್​ಬಾಸ್ ಸೌರವ್ ಗಂಗೂಲಿ

| Updated By: ಪೃಥ್ವಿಶಂಕರ

Updated on: Jan 29, 2022 | 2:55 PM

Ranji Trophy:ಫೆಬ್ರವರಿ 13 ರಿಂದ ಪಂದ್ಯಾವಳಿಯನ್ನು ಪ್ರಾರಂಭಿಸಲು ಬಿಸಿಸಿಐ ಯೋಜಿಸುತ್ತಿದೆ. ಇದರೊಂದಿಗೆ ಪಂದ್ಯಾವಳಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

Ranji Trophy: ರಣಜಿ ಟ್ರೋಫಿ ಆರಂಭಕ್ಕೆ ದಿನಾಂಕ ಖಚಿತಪಡಿಸಿದ ಬಿಸಿಸಿಐ ಬಿಗ್​ಬಾಸ್ ಸೌರವ್ ಗಂಗೂಲಿ
ಸೌರವ್ ಗಂಗೂಲಿ
Follow us on

ರಣಜಿ ಟ್ರೋಫಿ ಆಯೋಜನೆಯಾಗಲಿದೆ ಎಂಬ ಸುದ್ದಿ ಖಚಿತವಾಗಿದೆ. ಇದು ಎರಡು ಹಂತದಲ್ಲಿ ನಡೆಯಲಿದ್ದು, ಯಾವ ದಿನಾಂಕದಿಂದ ಟೂರ್ನಿ ಆರಂಭವಾಗಲಿದೆ ಎಂಬುದನ್ನು ಸೌರವ್ ಗಂಗೂಲಿ (Sourav Ganguly ) ಕೂಡ ಖಚಿತಪಡಿಸಿದ್ದಾರೆ. ಅವರ ಪ್ರಕಾರ, ಫೆಬ್ರವರಿ 13 ರಿಂದ ಪಂದ್ಯಾವಳಿಯನ್ನು ಪ್ರಾರಂಭಿಸಲು ಬಿಸಿಸಿಐ (BCCI) ಯೋಜಿಸುತ್ತಿದೆ. ಇದರೊಂದಿಗೆ ಪಂದ್ಯಾವಳಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಗಂಗೂಲಿ ಹೇಳಿದ್ದಾರೆ. ಎಲ್ಲಾ ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನಲ್ಲಿ 6 ತಂಡಗಳು ಇರುತ್ತವೆ. ಪ್ಲೇಟ್ ಗುಂಪಿನಲ್ಲಿ 8 ತಂಡಗಳು ಇರುತ್ತವೆ ಎಂದಿದ್ದಾರೆ. ಜೊತೆಗೆ ಸ್ಪೋರ್ಟ್ಸ್ ಸ್ಟಾರ್ ಜೊತೆಗಿನ ಸಂಭಾಷಣೆಯಲ್ಲಿ ಸೌರವ್ ಗಂಗೂಲಿ ಪಂದ್ಯಾವಳಿಯ ಪ್ರಾರಂಭದ ದಿನಾಂಕವನ್ನು ದೃಢಪಡಿಸಿದರು.

ನಾವು ಫೆಬ್ರವರಿ ಮಧ್ಯದಿಂದ ರಣಜಿ ಟ್ರೋಫಿಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ. ಈ ದಿನಾಂಕ ಫೆಬ್ರವರಿ 13 ಆಗಿರಬಹುದು. ಪ್ರಸ್ತುತ, ರಣಜಿ ಟ್ರೋಫಿಯ ಸ್ವರೂಪವು ಒಂದೇ ಆಗಿರುತ್ತದೆ. ಟೂರ್ನಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಐಪಿಎಲ್ 2022 ಕ್ಕಿಂತ ಮೊದಲು ಒಂದು ತಿಂಗಳ ಕಾಲ ನಡೆಯಲಿದೆ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ಸೋಮವಾರದೊಳಗೆ ಪಂದ್ಯಾವಳಿ ನಡೆಯುವ ಸ್ಥಳದ ಬಗ್ಗೆ ನಿರ್ಧಾರ
ಐಪಿಎಲ್ 2022 ಅನ್ನು ಮಾರ್ಚ್ 27 ರಿಂದ ಆಯೋಜಿಸಲಾಗುವುದು. ಅಂತಹ ಪರಿಸ್ಥಿತಿಯಲ್ಲಿ, ರಣಜಿ ಟ್ರೋಫಿಯ ನಾಕೌಟ್ ಹಂತವನ್ನು ಜೂನ್-ಜುಲೈನಲ್ಲಿ ಆಯೋಜಿಸಲಾಗುವುದು. ಪಂದ್ಯಾವಳಿಯ ಸ್ವರೂಪವು ಒಂದೇ ಆಗಿರುತ್ತದೆ, ಅಲ್ಲಿಯವರೆಗೆ ಅದೇ ರೀತಿ ಇರುತ್ತದೆ. ಅದರಲ್ಲಿ ಕೊರೊನಾ ಯಾವುದೇ ಅಡೆತಡೆಗಳನ್ನು ಸೃಷ್ಟಿಸುವುದಿಲ್ಲ.ಕೊರೊನಾ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ನಾವು ಪಂದ್ಯಾವಳಿಯ ಸ್ಥಳವನ್ನು ಹುಡುಕುತ್ತಿದ್ದೇವೆ.ಬೆಂಗಳೂರು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ನಾವು ಸದ್ಯಕ್ಕೆ ಎಲ್ಲದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಕೆಲವು ವಿಚಾರಗಳ ಬಗ್ಗೆ ಸೋಮವಾರದೊಳಗೆ ಸ್ಪಷ್ಟನೆ ನೀಡುತ್ತೇವೆ ಎಂದಿದ್ದಾರೆ.

ನಾಕೌಟ್ ಕೋಲ್ಕತ್ತಾದಿಂದ ಬೆಂಗಳೂರಿಗೆ ಬದಲಾಗಬಹುದು
ಈ ಹಿಂದೆ ಮುಂಬೈ, ಬೆಂಗಳೂರು, ಅಹಮದಾಬಾದ್, ಕೋಲ್ಕತ್ತಾ, ತಿರುವನಂತಪುರಂ ಮತ್ತು ಚೆನ್ನೈ ಸೇರಿದಂತೆ 6 ನಗರಗಳಲ್ಲಿ ರಣಜಿ ಟ್ರೋಫಿ ನಡೆಯಬೇಕಿತ್ತು. ಕೋಲ್ಕತ್ತಾದಲ್ಲಿ ನಾಕೌಟ್ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು. ನಾಕೌಟ್ ಪಂದ್ಯಗಳಲ್ಲಿ ಎದುರಿಸಿದ ಸವಾಲುಗಳ ಬಗ್ಗೆಯೂ ಗಂಗೂಲಿ ಮಾತನಾಡಿದರು. ಏಕೆಂದರೆ ಆ ಸಮಯದಲ್ಲಿ ಭಾರತದಲ್ಲಿ ಮಾನ್ಸೂನ್ ಸೀಸನ್ ಇರುತ್ತದೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ನಾಕೌಟ್ ಪಂದ್ಯಗಳನ್ನು ಆಯೋಜಿಸಲು ಪ್ರಯತ್ನಿಸುತ್ತೇವೆ ಎಂದು ಗಂಗೂಲಿ ಹೇಳಿದ್ದಾರೆ. ಆದರೆ ಇನ್ನೇನು 3ರಿಂದ 4 ದಿನಗಳಲ್ಲಿ ಎಲ್ಲವೂ ಕ್ಲಿಯರ್ ಆಗುವುದು ಖಚಿತ ಎಂದಿದ್ದಾರೆ.

ಜನವರಿ 13ರಿಂದಲೇ ರಣಜಿ ಟ್ರೋಫಿ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣ ಬಿಸಿಸಿಐ ಜನವರಿ 4ಕ್ಕೆ ಮುಂದೂಡಲು ನಿರ್ಧರಿಸಿತು. ಇದರೊಂದಿಗೆ ಕೂಚ್ ವಿಹಾರ್ ಮತ್ತು ಮಹಿಳೆಯರ ಪಂದ್ಯಾವಳಿಯನ್ನೂ ಮುಂದೂಡಲಾಗಿದೆ. ಆದರೆ ಆ ಎಲ್ಲಾ ಟೂರ್ನಿಗಳು ಶೀಘ್ರದಲ್ಲೇ ಆಯೋಜನೆಯಾಗಲಿವೆ ಎಂದು ಗಂಗೂಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:India vs West Indies: ನಿಮ್ಮದೇ ವಾಹನದಲ್ಲಿ ಬನ್ನಿ: ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಶಾಕ್ ನೀಡಿದ ಬಿಸಿಸಿಐ