BCCI: ಬಿಸಿಸಿಐನಲ್ಲಿನ ವಿವಾದದ ನಡುವೆಯೇ ಹಿರಿಯ ಅಧಿಕಾರಿ ರಾಜೀನಾಮೆ; 10 ವರ್ಷಗಳ ಸೇವೆಗೆ ಗುಡ್ ಬೈ
BCCI: ಕೋವಿಡ್ -19 ರ ಕಷ್ಟದ ಸಮಯದಲ್ಲಿ, ಜೈವಿಕ-ಸುರಕ್ಷಿತ ವಾತಾವರಣ ಮತ್ತು ಆಟಗಾರರ ಆಗಾಗ್ಗೆ ಸ್ಕ್ರೀನಿಂಗ್‌ನಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪಾತ್ರವು ಬಹಳ ಮಹತ್ವದ್ದಾಗಿತ್ತು. ಸಾಲ್ವಿ ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್‌ನ ಭಾಗವಾಗಿದ್ದರು.
ಸದ್ಯ ಟೀಂ ಇಂಡಿಯಾದಲ್ಲಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷರ ನಡುವೆ ವಿವಾದವಿದೆ. ಎಲ್ಲರ ನಾಲಿಗೆಯಲ್ಲೂ ಇದೇ ಮಾತು. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಾಯಕ ವಿರಾಟ್ ಕೊಹ್ಲಿಯನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಿದ್ದರೆ, ಕೆಲವರು ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದೆಲ್ಲದರ ನಡುವೆ ಬಿಸಿಸಿಐ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ವಿವಾದದ ಕಾರಣದಿಂದ ಈ ರಾಜೀನಾಮೆ ನಡೆದಿದೆ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಆ ವಿಚಾರಕ್ಕೂ, ಅಧಿಕಾರಿಯ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಬಿಸಿಸಿಐನ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಆಗಿದ್ದ ಅಭಿಜಿತ್ ಸಾಲ್ವಿ ರಾಜೀನಾಮೆ ನೀಡಿದ ಅಧಿಕಾರಿಯಾಗಿದ್ದಾರೆ. ಸಾಲ್ವಿ ಕಳೆದ ದಶಕದಿಂದ ಬಿಸಿಸಿಐನ ಭಾಗವಾಗಿದ್ದರು, ಆದರೆ ಇದೀಗ ಅವರು ಭಾರತೀಯ ಕ್ರಿಕೆಟ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಬಿಸಿಸಿಐ ಸಿಎಂಒ ಸಾಲ್ವಿ ವೈಯಕ್ತಿಕ ಕಾರಣಗಳಿಂದ ಹುದ್ದೆ ತೊರೆದಿದ್ದಾರೆ. ವರದಿಯ ಪ್ರಕಾರ, ಕೊರೊನಾ ವೈರಸ್ ಸೋಂಕಿನ ಸಮಯದಲ್ಲಿ ಹೆಚ್ಚಿದ ಕೆಲಸದ ಹೊರೆ ಕಡಿಮೆ ಮಾಡಲು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಸಾಲ್ವಿ, ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ. ಈ ಸಂಸ್ಥೆಗೆ 10 ವರ್ಷಗಳ ಸೇವೆ ಸಲ್ಲಿಸಿದ ನಂತರ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಈಗ ನಾನು ನನಗೆ ಮತ್ತು ಕುಟುಂಬಕ್ಕೆ ಸಮಯವನ್ನು ನೀಡಲು ಬಯಸುತ್ತೇನೆ ಎಂದಿದ್ದಾರೆ.
ಮುಂಬೈ ಟೆಸ್ಟ್ ಬಳಿಕ ಈ ನಿರ್ಧಾರ ಕೋವಿಡ್ -19 ರ ಕಷ್ಟದ ಸಮಯದಲ್ಲಿ, ಜೈವಿಕ-ಸುರಕ್ಷಿತ ವಾತಾವರಣ ಮತ್ತು ಆಟಗಾರರ ಆಗಾಗ್ಗೆ ಸ್ಕ್ರೀನಿಂಗ್‌ನಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪಾತ್ರವು ಬಹಳ ಮಹತ್ವದ್ದಾಗಿತ್ತು. ಸಾಲ್ವಿ ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್‌ನ ಭಾಗವಾಗಿದ್ದರು. ಅವರು ಟೀಮ್ ಇಂಡಿಯಾ ಮತ್ತು ಬಿಸಿಸಿಐನ ದೇಶೀಯ ಪಂದ್ಯಾವಳಿಗಳಲ್ಲಿ ವೈದ್ಯಕೀಯ ವಿಷಯಗಳನ್ನು ನಿಭಾಯಿಸುತ್ತಿದ್ದರು. ನವೆಂಬರ್ 30 ರಂದು ಅವರ ನೋಟೀಸ್ ಅವಧಿ ಮುಗಿದಿತ್ತು. ಆದರೆ ಡಿಸೆಂಬರ್ 3 ರಿಂದ ಮುಂಬೈನಲ್ಲಿ ಪ್ರಾರಂಭದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದವರೆಗೆ ಅವರು ಸೇವೆ ಸಲ್ಲಿಸಿದರು ಎಂದು ಸಾಲ್ವಿ ಹೇಳಿದರು.
ಐಪಿಎಲ್-ಟಿ20 ವಿಶ್ವಕಪ್‌ನಲ್ಲಿ ದೊಡ್ಡ ಜವಾಬ್ದಾರಿ ಇತ್ತು ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಲ್ವಿ ಕಳೆದ ವರ್ಷದ ಕೊನೆಯಲ್ಲಿ ಟೀಮ್ ಇಂಡಿಯಾದೊಂದಿಗೆ ಆಸ್ಟ್ರೇಲಿಯಾಕ್ಕೆ ಮತ್ತು ನಂತರ ಜುಲೈನಲ್ಲಿ ಶ್ರೀಲಂಕಾಕ್ಕೆ ಹೋಗಬೇಕಾಯಿತು. ಇದಲ್ಲದೆ, ಅವರು ಐಪಿಎಲ್ 2020 ಮತ್ತು ಐಪಿಎಲ್ 2021 ಮತ್ತು ಯುಎಇಯಲ್ಲಿ ಭಾರತ ಆಯೋಜಿಸಿದ್ದ ಟಿ 20 ವಿಶ್ವಕಪ್‌ಗೆ ವೈದ್ಯಕೀಯ ಅವಶ್ಯಕತೆಗಳನ್ನು ಸಹ ನೋಡಿಕೊಂಡರು. ಸದ್ಯ ಅವರಿಲ್ಲದೇ ಟೀಂ ಇಂಡಿಯಾ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದೆ.
ಅಂದಹಾಗೆ, ಸಾಲ್ವಿ ಪ್ರಾಥಮಿಕವಾಗಿ ಬಿಸಿಸಿಐನ ವಯೋಮಿತಿ ಪರಿಶೀಲನೆ, ಡೋಪಿಂಗ್ ವಿರೋಧಿ ವಿಭಾಗ ಮತ್ತು ವೈದ್ಯಕೀಯ ವಿಭಾಗದ ಉಸ್ತುವಾರಿ ವಹಿಸಿದ್ದರು. ಮುಂದಿನ ತಿಂಗಳು ನಡೆಯಲಿರುವ ಬಾಲಕರ ಅಂಡರ್-16 ರಾಷ್ಟ್ರೀಯ ಚಾಂಪಿಯನ್‌ಶಿಪ್ (ವಿಜಯ್ ಮರ್ಚೆಂಟ್ ಟ್ರೋಫಿ) ಗೂ ಮುನ್ನ ಅವರ ರಾಜೀನಾಮೆ ನೀಡಿದ್ದಾರೆ.