AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2021: ಆಶಸ್ ಸರಣಿಯಲ್ಲಿ ಆಸೀಸ್ ವಿರುದ್ಧ ಯಾರೂ ಮಾಡದ ದಾಖಲೆ ಬರೆದ ಜೇಮ್ಸ್ ಆಂಡರ್ಸನ್! ಏನದು ಗೊತ್ತಾ?

Ashes 2021: ಟೆಸ್ಟ್‌ನಲ್ಲಿ 100 ಇನ್ನಿಂಗ್ಸ್‌ಗಳಲ್ಲಿ ನಾಟೌಟ್ ಆಗಿ ಉಳಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಆಂಡರ್ಸನ್ ಪಾತ್ರರಾಗಿದ್ದಾರೆ. ದೀರ್ಘಕಾಲದವರೆಗೆ ಟೆಸ್ಟ್‌ನಲ್ಲಿ ಔಟಾಗದೆ ಉಳಿದಿರುವ ದಾಖಲೆ ಆಂಡರ್ಸನ್ ಅವರ ಹೆಸರಿನಲ್ಲಿದೆ.

Ashes 2021: ಆಶಸ್ ಸರಣಿಯಲ್ಲಿ ಆಸೀಸ್ ವಿರುದ್ಧ ಯಾರೂ ಮಾಡದ ದಾಖಲೆ ಬರೆದ ಜೇಮ್ಸ್ ಆಂಡರ್ಸನ್! ಏನದು ಗೊತ್ತಾ?
ಜೇಮ್ಸ್ ಆಂಡರ್ಸನ್
TV9 Web
| Edited By: |

Updated on: Dec 18, 2021 | 6:30 PM

Share

ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ತಮ್ಮ ದೇಶದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆಂಡರ್ಸನ್ ಅವರ ವೃತ್ತಿಜೀವನವನ್ನು ಗಮನಿಸಿದರೆ, ಅವರು ತಮ್ಮ ಬೌಲಿಂಗ್‌ನಿಂದ ಅನೇಕ ಶ್ರೇಷ್ಠ ದಾಖಲೆಗಳನ್ನು ಮಾಡಿದ್ದಾರೆ. ಅವರು ಟೆಸ್ಟ್‌ನಲ್ಲಿ ವಿಶ್ವದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಪ್ರಸ್ತುತ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ, ಈ ವೇಗದ ಬೌಲರ್ ತನ್ನ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ. ಆದರೆ ಈ ಬಾರಿ ಚೆಂಡಿನಿಂದಲ್ಲ, ಬದಲಿಗೆ ಬ್ಯಾಟ್‌ನಿಂದ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 236 ರನ್‌ಗಳಿಗೆ ಆಲೌಟ್ ಆಗಿತ್ತು. ಕೊನೆಯದಾಗಿ ಆಂಡರ್ಸನ್ ಐದು ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ವಿಶಿಷ್ಠ ದಾಖಲೆಯನ್ನು ಬರೆದರು.

ಟೆಸ್ಟ್‌ನಲ್ಲಿ 100 ಇನ್ನಿಂಗ್ಸ್‌ಗಳಲ್ಲಿ ನಾಟೌಟ್ ಆಗಿ ಉಳಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಆಂಡರ್ಸನ್ ಪಾತ್ರರಾಗಿದ್ದಾರೆ. ದೀರ್ಘಕಾಲದವರೆಗೆ ಟೆಸ್ಟ್‌ನಲ್ಲಿ ಔಟಾಗದೆ ಉಳಿದಿರುವ ದಾಖಲೆ ಆಂಡರ್ಸನ್ ಅವರ ಹೆಸರಿನಲ್ಲಿದೆ. ಆದರೆ ಇದೀಗ ಈ ವಿಚಾರದಲ್ಲಿ ಶತಕ ಪೂರೈಸಿದ್ದಾರೆ. ಅವರ ನಂತರ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ನಾಟೌಟ್ ಆದ ದಾಖಲೆ ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ ಹೆಸರಿನಲ್ಲಿದೆ. ವಾಲ್ಷ್ ತಮ್ಮ ವೃತ್ತಿಜೀವನದಲ್ಲಿ 61 ಟೆಸ್ಟ್ ಪಂದ್ಯಗಳಲ್ಲಿ ಔಟಾಗದೆ ಮರಳಿದ್ದಾರೆ. ಇವರ ನಂತರ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್‌ನಲ್ಲಿ 56 ಬಾರಿ ಔಟಾಗದೆ ಉಳಿದಿದ್ದಾರೆ.

ಇದು ಇಲ್ಲಿಯವರೆಗಿನ ಪಂದ್ಯ ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಥಿತಿ ಉತ್ತಮವಾಗಿಲ್ಲ. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 473 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದಾದ ಬಳಿಕ ಇಂಗ್ಲೆಂಡ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ಅವಕಾಶ ಸಿಗಲಿಲ್ಲ. ಜೋ ರೂಟ್ ಮತ್ತು ಡೇವಿಡ್ ಮಲಾನ್ ಕ್ರೀಸ್ ನಲ್ಲಿದ್ದವರೆಗೂ ಇಂಗ್ಲೆಂಡ್ ತಂಡ ಬಲಿಷ್ಠವಾಗಿ ಕಂಡರೂ ಈ ಇಬ್ಬರು ಔಟಾದ ತಕ್ಷಣ ಆಸ್ಟ್ರೇಲಿಯಾ ಬೌಲರ್​ಗಳು ಮೇಲುಗೈ ಸಾಧಿಸಿದರು. ಮಲಾನ್ ಅವರು 157 ಎಸೆತಗಳನ್ನು ಎದುರಿಸಿ 10 ಬೌಂಡರಿಗಳನ್ನು ಬಾರಿಸಿ ತಂಡದ ಪರ ಗರಿಷ್ಠ 80 ರನ್ ಗಳಿಸಿದರು. ಅದೇ ಸಮಯದಲ್ಲಿ ರೂಟ್ 116 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರು. ರೂಟ್ ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಬೆನ್ ಸ್ಟೋಕ್ಸ್ 34 ರನ್ ಗಳಿಸಿದರು. 98 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ ಮೂರು ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ಕ್ರಿಸ್ ವೋಕ್ಸ್ 24 ರನ್​ಗಳ ಇನಿಂಗ್ಸ್ ಆಡಿದರು. ಈ ನಾಲ್ವರು ಬ್ಯಾಟ್ಸ್‌ಮನ್‌ಗಳ ಹೊರತಾಗಿ ಯಾವುದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ನಾಲ್ಕು ವಿಕೆಟ್ ಪಡೆದರು. ನಾಥನ್ ಲಿಯಾನ್ ಮೂರು ವಿಕೆಟ್ ಪಡೆದರು. ಕ್ಯಾಮರೂನ್ ಗ್ರೀನ್ ಎರಡು ವಿಕೆಟ್ ಕಬಳಿಸಿದರು. ಚೊಚ್ಚಲ ಪಂದ್ಯವನ್ನು ಆಡಿದ ಮೈಕಲ್ ನಾಸರ್ ಅವರ ಹೆಸರಿನಲ್ಲಿ ಒಂದು ವಿಕೆಟ್ ಇತ್ತು. ಆಸ್ಟ್ರೇಲಿಯಕ್ಕೆ ಇಂಗ್ಲೆಂಡ್ ಅನ್ನು ಫಾಲೋ-ಆನ್ ಮಾಡಲು ಅವಕಾಶವಿತ್ತು ಆದರೆ ತನ್ನ ಎರಡನೇ ಇನ್ನಿಂಗ್ಸ್ ಆಡಲು ನಿರ್ಧರಿಸಿತು.