AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಒಬ್ಬರಿಗೆ ನ್ಯಾಯ, ಇನ್ನೊಬ್ಬರಿಗೆ ಅನ್ಯಾಯ: ಇದು ಬಿಸಿಸಿಐ ದ್ವಂದ್ವ ನಿಲುವು

ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ತೊರೆದ ಕಾರಣ ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಏಕೆಂದರೆ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ತಂಡಕ್ಕೆ ಒಬ್ಬರೇ ನಾಯಕ ಇರಬೇಕೆಂಬುದು ಬಿಸಿಸಿಐ ನಿಲುವು.

Team India: ಒಬ್ಬರಿಗೆ ನ್ಯಾಯ, ಇನ್ನೊಬ್ಬರಿಗೆ ಅನ್ಯಾಯ: ಇದು ಬಿಸಿಸಿಐ ದ್ವಂದ್ವ ನಿಲುವು
Virat-Mithali
TV9 Web
| Edited By: |

Updated on: Dec 18, 2021 | 7:36 PM

Share

ಭಾರತೀಯ ಕ್ರಿಕೆಟ್ ಬೋರ್ಡ್​ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದೆ. ಹೀಗೆ ಏಕಾಏಕಿ ಕ್ಯಾಪ್ಟನ್ಸಿಯಿಂದ ಕೆಳಗಿಸಲು ನೀಡಿರುವ ಕಾರಣ ಸೀಮಿತ ಓವರ್​ಗಳಲ್ಲಿ ಒಬ್ಬನೇ ನಾಯಕರಾಗಿರಬೇಕೆಂಬುದು. ಇದನ್ನು ಮಾಧ್ಯಮದ ಮುಂದೆ ಸ್ಪಷ್ಟವಾಗಿ ತಿಳಿಸಿದ್ದು ಮತ್ಯಾರೂ ಅಲ್ಲ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಂಬುದು ವಿಶೇಷ. ಹೌದು, ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನು ತೊರೆದ ಕಾರಣ ಅವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಏಕೆಂದರೆ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ತಂಡಕ್ಕೆ ಒಬ್ಬರೇ ನಾಯಕ ಇರಬೇಕೆಂಬುದು ಬಿಸಿಸಿಐ ನಿಲುವು. ಹೀಗಾಗಿ ಆಯ್ಕೆ ಸಮಿತಿ ಏಕದಿನ ತಂಡದ ನಾಯಕನ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸಿದೆ ಎಂದು ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದರು.

ಸೌರವ್ ಗಂಗೂಲಿ ಅವರ ಈ ಸಮರ್ಥನೆ ಒಪ್ಪುವಂತದ್ದೇ. ಏಕೆಂದರೆ ಬಹುತೇಕ ತಂಡಗಳಿಗೆ ಏಕದಿನ-ಟಿ20 ತಂಡಗಳಿಗೆ ಒಬ್ಬರೇ ನಾಯಕರಾಗಿದ್ದಾರೆ. ಇನ್ನು ಟೆಸ್ಟ್​ ತಂಡಕ್ಕೆ ಮತ್ತೋರ್ವ ನಾಯಕನಿಗೆ ಅವಕಾಶ ನೀಡಲಾಗಿದೆ. ಆದರೆ ಬಿಸಿಸಿಐ ನಿಲುವು ಎಂಬುದು ಪ್ರಶ್ನಾರ್ಥಕವಾಗುವುದು, ಟೀಮ್ ಇಂಡಿಯಾ ಮಹಿಳಾ ತಂಡದ ವಿಚಾರದಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಏಕೆಂದರೆ, ಟೀಮ್ ಇಂಡಿಯಾ ಮಹಿಳಾ ತಂಡದ ನಾಯಕಿಯಾಗಿ ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಹರ್ಮನ್​ಪ್ರೀತ್ ಕೌರ್ ಅವರು ಕೇವಲ ಟಿ20 ತಂಡದ ನಾಯಕಿಯಾದರೆ, ಮಿಥಾಲಿ ರಾಜ್ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಇಲ್ಲಿ ಪುರುಷರ ಕ್ರಿಕೆಟ್​ನಲ್ಲಿ ಸೀಮಿತ ಓವರ್​ಗಳಿಗೆ ನಾಯಕನ ಆಯ್ಕೆಯಲ್ಲಿ ಅನುಸರಿಸಿದ ನಿಯಮವನ್ನು ಬಿಸಿಸಿಐ ಮಹಿಳಾ ತಂಡದ ವಿಷಯದಲ್ಲಿ ಪಾಲಿಸಿಲ್ಲ ಎಂಬುದು ಸ್ಪಷ್ಟ.

ಸೌರವ್ ಗಂಗೂಲಿ ಅವರೇ ಹೇಳಿದಂತೆ ಸೀಮಿತ ಓವರ್​ಗಳಿಗೆ ಒಬ್ಬರೇ ನಾಯಕರಾಗಬೇಕೆಂಬುದು ಮಹಿಳಾ ತಂಡಗಳ ನಾಯಕಿಯರ ವಿಷಯದಲ್ಲಿ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಯೊಂದು ಮೂಡುತ್ತೆ. ಒಟ್ಟಿನಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ ಬಳಿಕ ನೀಡಿರುವ ಹೇಳಿಕೆಗಳು ಇದೀಗ ಬಿಸಿಸಿಐಗೆ ತಿರುಮಂತ್ರವಾಗುತ್ತಿದೆ.

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!

ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್​ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!

(BCCI Double Standard On Captaincy Issue)