9 ಸಿಕ್ಸ್, 15 ಫೋರ್: ಸ್ಪೋಟಕ ಶತಕ ಸಿಡಿಸಿ ದಾಖಲೆ ಬರೆದ ಬೆನ್ ಸ್ಟೋಕ್ಸ್
Ben Stokes: 2022 ರಲ್ಲಿ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದ ಬೆನ್ ಸ್ಟೋಕ್ಸ್ ಇದೀಗ ಏಕದಿನ ವಿಶ್ವಕಪ್ಗಾಗಿ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕಂಬ್ಯಾಕ್ ಬಳಿಕ ಆಡಿದ 3 ಪಂದ್ಯಗಳಲ್ಲಿ 1 ಅರ್ಧಶತಕ ಹಾಗೂ 1 ಶತಕದ ಮೂಲಕ ಅಬ್ಬರಿಸಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್ಗೂ ಮುನ್ನ ಹಾಲಿ ಚಾಂಪಿಯನ್ ತಂಡದ ಸ್ಟಾರ್ ಆಲ್ರೌಂಡರ್ ಎಚ್ಚರಿಕೆ ರವಾನಿಸಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ (Ben Stokes) ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಯಶಸ್ಸಿಯಾದರು.
ಪಂದ್ಯದ ಮೊದಲ ಎಸೆತದಲ್ಲೇ ಜಾನಿ ಬೈರ್‌ಸ್ಟೋವ್ (0) ರನ್ನು ಶೂನ್ಯಕ್ಕೆ ಔಟ್ ಮಾಡಿದ ಬೌಲ್ಟ್ ನ್ಯೂಝಿಲೆಂಡ್ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜೋ ರೂಟ್ (4) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಡೇವಿಡ್ ಮಲಾನ್ ಹಾಗೂ ಬೆನ್ ಸ್ಟೋಕ್ಸ್ 3ನೇ ವಿಕೆಟ್ಗೆ 199 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಈ ವೇಳೆ ಮತ್ತೆ ದಾಳಿಗಿಳಿದ ಬೌಲ್ಟ್ ಡೇವಿಡ್ ಮಲಾನ್ (96) ವಿಕೆಟ್ ಪಡೆದರು.
ಬೆನ್ ಸ್ಟೋಕ್ಸ್ ಭರ್ಜರಿ ಬ್ಯಾಟಿಂಗ್:
ಆರಂಭದಿಂದಲೇ ನ್ಯೂಝಿಲೆಂಡ್ ಬೌಲರ್ಗಳ ಬೆಂಡೆತ್ತಿದ ಬೆನ್ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 76 ಎಸೆತಗಳಲ್ಲಿ ಸ್ಟೋಕ್ಸ್ ಶತಕ ಪೂರೈಸಿದರು.
ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಸ್ಟೋಕ್ಸ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಪರಿಣಾಮ ಬೆನ್ ಸ್ಟೋಕ್ಸ್ ಬ್ಯಾಟ್ನಿಂದ 9 ಭರ್ಜರಿ ಸಿಕ್ಸ್ ಹಾಗೂ 15 ಫೋರ್ಗಳು ಮೂಡಿಬಂತು. ಅಷ್ಟೇ ಅಲ್ಲದೆ 124 ಎಸೆತಗಳಲ್ಲಿ 182 ರನ್ ಬಾರಿಸಿ ಬೆನ್ ಲಿಸ್ಟರ್ಗೆ ವಿಕೆಟ್ ಒಪ್ಪಿಸಿದರು.
Ridiculous.
Scorecard/clips: https://t.co/Pd380O21mn@IGCom | #EnglandCricket pic.twitter.com/6FGco9sV24
— England Cricket (@englandcricket) September 13, 2023
ಹೊಸ ದಾಖಲೆ ಬರೆದ ಸ್ಟೋಕ್ಸ್:
ಈ 182 ರನ್ಗಳೊಂದಿಗೆ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಬೆನ್ ಸ್ಟೋಕ್ಸ್ ಪಾಲಾಯಿತು. 2017 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಜೇಸನ್ ರಾಯ್ 180 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಕಂಬ್ಯಾಕ್ ಮಾಡಿದ ಮೂರನೇ ಪಂದ್ಯದಲ್ಲೇ ಬೆನ್ ಸ್ಟೋಕ್ಸ್ ಹೊಸ ದಾಖಲೆ ನಿರ್ಮಿಸಿರುವುದು ವಿಶೇಷ.
ಇತರೆ ತಂಡಗಳಿಗೆ ಎಚ್ಚರಿಕೆ:
2022 ರಲ್ಲಿ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದ ಬೆನ್ ಸ್ಟೋಕ್ಸ್ ಇದೀಗ ಏಕದಿನ ವಿಶ್ವಕಪ್ಗಾಗಿ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಕಂಬ್ಯಾಕ್ ಬಳಿಕ ಆಡಿದ 3 ಪಂದ್ಯಗಳಲ್ಲಿ 1 ಅರ್ಧಶತಕ ಹಾಗೂ 1 ಶತಕದ ಮೂಲಕ ಅಬ್ಬರಿಸಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್ಗೂ ಮುನ್ನ ಹಾಲಿ ಚಾಂಪಿಯನ್ ತಂಡದ ಸ್ಟಾರ್ ಆಲ್ರೌಂಡರ್ ಎಚ್ಚರಿಕೆ ರವಾನಿಸಿದ್ದಾರೆ.
ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್:
ಇನ್ನು ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅವರ ಭರ್ಜರಿ ಶತಕ ಹಾಗೂ ಡೇವಿಡ್ ಮಲಾನ್ (96) ಅವರ ಅರ್ಧಶತಕದೊಂದಿಗೆ ಇಂಗ್ಲೆಂಡ್ ತಂಡವು 48.1 ಓವರ್ಗಳಲ್ಲಿ 368 ರನ್ಗಳಿಸಿ ಆಲೌಟ್ ಆಗಿದೆ. ನ್ಯೂಝಿಲೆಂಡ್ ಪರ 9.1 ಓವರ್ಗಳಲ್ಲಿ 51 ರನ್ ನೀಡಿ ಟ್ರೆಂಟ್ ಬೌಲ್ಟ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಜಾನಿ ಬೈರ್‌ಸ್ಟೋವ್ , ಡೇವಿಡ್ ಮಲಾನ್ , ಜೋ ರೂಟ್ , ಬೆನ್ ಸ್ಟೋಕ್ಸ್ , ಜೋಸ್ ಬಟ್ಲರ್ (ನಾಯಕ) , ಮೊಯೀನ್ ಅಲಿ , ಲಿಯಾಮ್ ಲಿವಿಂಗ್‌ಸ್ಟೋನ್ , ಸ್ಯಾಮ್ ಕರನ್ , ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ರೀಸ್ ಟೋಪ್ಲಿ.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ನ್ಯೂಝಿಲೆಂಡ್ ಪ್ಲೇಯಿಂಗ್ 11: ವಿಲ್ ಯಂಗ್ , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಟಾಮ್ ಲ್ಯಾಥಮ್ (ನಾಯಕ) ಗ್ಲೆನ್ ಫಿಲಿಪ್ಸ್ , ರಚಿನ್ ರವೀಂದ್ರ , ಕೈಲ್ ಜೇಮಿಸನ್ , ಲಾಕಿ ಫರ್ಗುಸನ್ , ಬೆನ್ ಲಿಸ್ಟರ್ , ಟ್ರೆಂಟ್ ಬೌಲ್ಟ್.