Big Bash League 2023: ಬಿಬಿಎಲ್​ ಫೈನಲ್​ ಫೈಟ್​ನಲ್ಲಿ ಗೆದ್ದು ಬೀಗಿದ ಪರ್ತ್ ಸ್ಕಾಚರ್ಸ್

| Updated By: ಝಾಹಿರ್ ಯೂಸುಫ್

Updated on: Feb 04, 2023 | 6:31 PM

Perth Scorchers vs Brisbane Heat: ಕೊನೆಯ ಓವರ್​ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೂಪರ್ ಕೊನೊಲಿ (25) ಹಾಗೂ ನಿಕ್ ಹಾಬ್ಸನ್ (18) 41 ರನ್​ಗಳ ಜೊತೆಯಾಟವಾಡಿದರು.

Big Bash League 2023: ಬಿಬಿಎಲ್​ ಫೈನಲ್​ ಫೈಟ್​ನಲ್ಲಿ ಗೆದ್ದು ಬೀಗಿದ ಪರ್ತ್ ಸ್ಕಾಚರ್ಸ್
Perth Scorchers
Follow us on

Big Bash League 2023: ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್​ ಬ್ಯಾಷ್ ಲೀಗ್​ ಸೀಸನ್​ 12 ನಲ್ಲಿ ಪರ್ತ್​ ಸ್ಕಾಚರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್​ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಪರ್ತ್ ತಂಡವು ಟ್ರೋಫಿ ಎತ್ತಿ ಹಿಡಿಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಬ್ರಿಸ್ಬೇನ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಜೋಶ್ ಬ್ರೌನ್ (25) ಹಾಗೂ ಸ್ಯಾಮ್ ಹೀಝ್​ಲೆಟ್ (34) ಉತ್ತಮ ಆರಂಭ ಒದಗಿಸಿದ್ದರು.

ಆ ಬಳಿಕ ಬಂದ ಮೆಕ್​ಸ್ವೀನಿ 41 ರನ್ ಬಾರಿಸಿ 12ನೇ ಓವರ್​ನಲ್ಲಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು.
ಅಂತಿಮ ಹಂತದಲ್ಲಿ ಮ್ಯಾಕ್ಸ್ ಬ್ರ್ಯಾಂಟ್ 14 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 31 ರನ್ ಚಚ್ಚಿದರು. ಪರಿಣಾಮ ಬ್ರಿಸ್ಬೇನ್ ಹೀಟ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್​ ಕಲೆಹಾಕಿತು.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

176 ರನ್​ಗಳ ಕಠಿಣ ಗುರಿ ಪಡೆದ ಪರ್ತ್​ ಸ್ಕಾಚರ್ಸ್ ತಂಡಕ್ಕೆ ಸ್ಟೀಫನ್ ಎಸ್ಕಿನಾಜಿ (21) ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ (15) ಬಿರುಸಿನ ಆರಂಭ ಒದಗಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೋಶ್ ಇಂಗ್ಲಿಸ್ 26 ರನ್​ಗಳ ಅಮೂಲ್ಯ ಕಾಣಿಕೆ ನೀಡಿದರು.
ಆ ಬಳಿಕ ಬಂದ ನಾಯಕ ಆಷ್ಟನ್ ಟರ್ನರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಬ್ರಿಸ್ಬೇನ್ ಬೌಲರ್​ಗಳ ಬೆಂಡೆತ್ತಿದ ಟರ್ನರ್ 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 52 ರನ್​ ಚಚ್ಚಿದರು.

ಇದನ್ನೂ ಓದಿ: Shubman Gill: 1 ಶತಕದೊಂದಿಗೆ 10 ದಾಖಲೆಗಳನ್ನು ನಿರ್ಮಿಸಿದ ಶುಭ್​ಮನ್ ಗಿಲ್

ಇನ್ನು ಕೊನೆಯ ಓವರ್​ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೂಪರ್ ಕೊನೊಲಿ (25) ಹಾಗೂ ನಿಕ್ ಹಾಬ್ಸನ್ (18) 41 ರನ್​ಗಳ ಜೊತೆಯಾಟವಾಡಿದರು. ಇದರೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು 19.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್​ಗಳೊಂದಿಗೆ ಗುರಿ ಮುಟ್ಟಿತು. ಈ ಮೂಲಕ ಬಿಬಿಎಲ್ ಸೀಸನ್​ 12 ನ ಚಾಂಪಿಯನ್ ತಂಡವಾಗಿ ಪರ್ತ್ ಸ್ಕಾಚರ್ಸ್ ತಂಡವು ಹೊರಹೊಮ್ಮಿದೆ.

ಪರ್ತ್​ ಸ್ಕಾಚರ್ಸ್ ಪ್ಲೇಯಿಂಗ್ 11: ಸ್ಟೀಫನ್ ಎಸ್ಕಿನಾಜಿ , ಕ್ಯಾಮರೂನ್ ಬ್ಯಾಂಕ್ರಾಫ್ಟ್ , ಆರನ್ ಹಾರ್ಡಿ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಆಷ್ಟನ್ ಟರ್ನರ್ (ನಾಯಕ) , ನಿಕ್ ಹಾಬ್ಸನ್ , ಕೂಪರ್ ಕೊನೊಲಿ , ಆಂಡ್ರ್ಯೂ ಟೈ , ಡೇವಿಡ್ ಪೇನ್ , ಜೇಸನ್ ಬೆಹ್ರೆಂಡಾರ್ಫ್ , ಮ್ಯಾಥ್ಯೂ ಕೆಲ್ಲಿ.

ಬ್ರಿಸ್ಬೇನ್ ಹೀಟ್ ಪ್ಲೇಯಿಂಗ್ 11: ಸ್ಯಾಮ್ ಹೀಝ್​ಲೆಟ್ , ಜೋಶ್ ಬ್ರೌನ್ , ನಾಥನ್ ಮೆಕ್‌ಸ್ವೀನಿ , ಸ್ಯಾಮ್ ಹೈನ್ , ಜಿಮ್ಮಿ ಪೀರ್ಸನ್ (ನಾಯಕ) , ಮ್ಯಾಕ್ಸ್ ಬ್ರ್ಯಾಂಟ್ , ಮೈಕೆಲ್ ನೆಸರ್ , ಜೇಮ್ಸ್ ಬಾಜ್ಲಿ , ಕ್ಸೇವಿಯರ್ ಬಾರ್ಟ್ಲೆಟ್ , ಸ್ಪೆನ್ಸರ್ ಜಾನ್ಸನ್ , ಮ್ಯಾಥ್ಯೂ ಕುಹ್ನೆಮನ್.

 

 

Published On - 6:30 pm, Sat, 4 February 23