Virat Kohli vs Rohit Sharma: ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಟೀಮ್ ಇಂಡಿಯಾದಲ್ಲಿತ್ತು 2 ಗುಂಪು..!

Virat Kohli vs Rohit Sharma: ಟೀಮ್ ಇಂಡಿಯಾದಲ್ಲಿ ಇಬ್ಬರು ಗುಂಪು ಕಟ್ಟಿಕೊಂಡಿದ್ದರು ಎಂಬುದಂತು ನಿಜ. ಒಂದಷ್ಟು ಮಂದಿ ವಿರಾಟ್ ಕೊಹ್ಲಿಯ ಕ್ಯಾಂಪ್​ನಲ್ಲಿದ್ದರೆ, ಮತ್ತೊಂದಷ್ಟು ಮಂದಿ ರೋಹಿತ್ ಶರ್ಮಾ ಜೊತೆಯಿದ್ದರು.

Virat Kohli vs Rohit Sharma: ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಟೀಮ್ ಇಂಡಿಯಾದಲ್ಲಿತ್ತು 2 ಗುಂಪು..!
Virat Kohli - Rohit Sharma
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 04, 2023 | 10:24 PM

2021 ರ​ ಟಿ20 ವಿಶ್ವಕಪ್​ನ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ (Team India) ಎಲ್ಲವೂ ಸರಿಯಿಲ್ಲ ಎಂಬ ವಿಚಾರವೊಂದು ಬೆಳಕಿಗೆ ಬಂದಿತ್ತು. ಅದರಲ್ಲೂ ಅಂದು ನಾಯಕರಾಗಿದ್ದ ವಿರಾಟ್ ಕೊಹ್ಲಿ (Virat Kohli) ಹಾಗೂ ಉಪನಾಯಕ ರೋಹಿತ್ ಶರ್ಮಾ (Rohit Sharma) ನಡುವೆ ವೈಮನಸ್ಸಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಎಲ್ಲಾ ಸುದ್ದಿಗಳು ನಿಜ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್​. ಶ್ರೀಧರ್. ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಬರೆದಿರುವ ‘ಕೋಚಿಂಗ್ ಬಿಯಾಂಡ್’ ಹೆಸರಿನ ಹೊಸ ಪುಸ್ತಕದಲ್ಲಿ ಟೀಮ್ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನ ಹಲವು​ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಹಿಟ್​ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ನಡುವಣ ಒಡಕಿನ ವಿಚಾರವನ್ನೂ ಕೂಡ ಉಲ್ಲೇಖಿಸಿದ್ದಾರೆ.

2019ರ ಏಕದಿನ ವಿಶ್ವಕಪ್​ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಒಡಕುಂಟಾಗಿತ್ತು. ಇದು ಹಾಗೆಯೇ ಮುಂದುವರೆದು 2021 ರ ಟಿ20 ವಿಶ್ವಕಪ್​ ತನಕ ಬಂದಿತ್ತು. 2021 ರ ಕೊನೆಯಲ್ಲಿ ಕೊಹ್ಲಿಯನ್ನು ಭಾರತದ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿದಾಗ ಇಬ್ಬರ ನಡುವಣ ವೈಮನಸ್ಸು ಉತ್ತುಂಗಕ್ಕೇರಿತು ಎಂದು ಶ್ರೀಧರ್ ಬಹಿರಂಗಪಡಿಸಿದ್ದಾರೆ.

ತಂಡದಲ್ಲಿದ್ದ ಇಬ್ಬರು ಪ್ರಮುಖ ಆಟಗಾರರು ನಡುವಣ ಸಂಬಂಧ ಹಳಸಿತ್ತು. ಈ ವೈಯುಕ್ತಿಕ ದ್ವೇಷವು ಮತ್ತೊಂದು ಹಂತಕ್ಕೆ ಹೋಗುವುದನ್ನು ಅಂದು ನಿಯಂತ್ರಿಸಿದ್ದು ಕೋಚ್ ರವಿಶಾಸ್ತ್ರಿ. ಲೌಡರ್‌ಹಿಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಮುಗಿಸಿ ನಾವು ವಿಶ್ವಕಪ್​ಗಾಗಿ ಯುಎಇಗೆ ಬಂದಿಳಿದೆವು. ಈ ವೇಳೆ ಕೋಚ್ ರವಿಶಾಸ್ತ್ರಿ ಮಾಡಿದ ಮೊದಲ ಕೆಲಸವೆಂದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್‌ ಶರ್ಮಾರನ್ನು ತನ್ನ ಕೋಣೆಗೆ ಕರೆದರು.

ಇದನ್ನೂ ಓದಿ
Image
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
Image
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Image
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
Image
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಭಾರತೀಯ ತಂಡದ ಪರಿಸ್ಥಿತಿ ಆರೋಗ್ಯಕರವಾಗಿರಲು ಇಬ್ಬರು ಚೆನ್ನಾಗಿರಬೇಕೆಂದು ಮನವರಿಕೆ ಮಾಡಿಕೊಟ್ಟರು. ಅಲ್ಲದೆ ನಿಮ್ಮಿಬ್ಬರ ವೈಮನಸ್ಸು ತಂಡದ ಮೇಲೆ ಪ್ರಭಾವ ಬೀರುತ್ತಿದೆ ಎಂದು ತಿಳಿ ಹೇಳಿದರು. ಸೋಷಿಯಲ್ ಮೀಡಿಯಾದಲ್ಲಿ ಏನಾಯಿತು ಎಂಬುದನ್ನು ಬಿಟ್ಟು ಬಿಡಿ. ಆದರೆ ನೀವಿಬ್ಬರು ಅತ್ಯಂತ ಹಿರಿಯ ಕ್ರಿಕೆಟಿಗರು. ಆದ್ದರಿಂದ ಇಂತಹ ಕಿತ್ತಾಟವನ್ನು ನಿಲ್ಲಿಸಬೇಕೆಂದು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ತಾಕೀತು ಮಾಡಿದರು. ಅಂದು ರವಿಶಾಸ್ತ್ರಿ ಅವರ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ಬದಲಾಯಿತು. ಹಾಗೆಯೇ ಕೊಹ್ಲಿ ಮತ್ತು ರೋಹಿತ್ ನಡುವಿನ ಸಂಬಂಧವು ಗಮನಾರ್ಹವಾಗಿ ಸುಧಾರಿಸಿತು ಎಂದು ಆರ್​ ಶ್ರೀಧರ್ ತಿಳಿಸಿದ್ದಾರೆ.

ಈಗ ಎಲ್ಲವೂ ಸರಿಯಾಗಿದೆ ಎಂಬುದಕ್ಕೆ ಇಬ್ಬರ ನಡುವಣ ಆತ್ಮೀಯತೆಯೇ ಸಾಕ್ಷಿ. ಒಬ್ಬರು ಫಾರ್ಮ್‌ನಲ್ಲಿ ಇಲ್ಲದಿದ್ದಾಗ, ಮತ್ತೊಬ್ಬರಿಗೆ ಬೆಂಬಲ ಸೂಚಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದದ್ದನ್ನು ಇಬ್ಬರು ಸೇರಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಪಾಕಿಸ್ತಾನದ ವಿರಾಟ್ ಕೊಹ್ಲಿ ಪಂದ್ಯವನ್ನು ಗೆಲ್ಲಿಸಿದಾಗ ರೋಹಿತ್ ಶರ್ಮಾ ಎತ್ತಿ ಸಂಭ್ರಮಿಸಿರುವುದು ಇದಕ್ಕೆಲ್ಲಾ ಸಾಕ್ಷಿಯಾಗಿದೆ.

ಆದರೆ ಅಂದು ಟೀಮ್ ಇಂಡಿಯಾದಲ್ಲಿ ಇಬ್ಬರು ಗುಂಪು ಕಟ್ಟಿಕೊಂಡಿದ್ದರು ಎಂಬುದಂತು ನಿಜ. ಒಂದಷ್ಟು ಮಂದಿ ವಿರಾಟ್ ಕೊಹ್ಲಿಯ ಕ್ಯಾಂಪ್​ನಲ್ಲಿದ್ದರೆ, ಮತ್ತೊಂದಷ್ಟು ಮಂದಿ ರೋಹಿತ್ ಶರ್ಮಾ ಜೊತೆಯಿದ್ದರು. ಆದರೆ ಇವರೆಲ್ಲರನ್ನೂ ಒಂದುಗೂಡಿಸುವ ಕೆಲವನ್ನು ರವಿಶಾಸ್ತ್ರಿ ಮಾಡಿದ್ದರು ಎಂದು ಆರ್ ಶ್ರೀಧರ್ ಕೋಚಿಂಗ್ ಬಿಯಾಂಡ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಇಬ್ಬರು ದಿಗ್ಗಜ ಆಟಗಾರರ ನಡುವಣ ವೈಮನಸ್ಸಿನಿಂದಾಗಿ ಭಾರತ ತಂಡವು 2019 ರ ಹಾಗೂ 2021 ವಿಶ್ವಕಪ್​ಗಳನ್ನು ಕಳೆದುಕೊಂಡಿತೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ 2019ರ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಸೋತರೆ, 2021 ಟಿ20 ವಿಶ್ವಕಪ್​​ನಲ್ಲಿ ಅತ್ಯಂತ ಹೀನಾಯವಾಗಿ ಭಾರತ ತಂಡವು ಮೊದಲ ಸುತ್ತಿನಿಂದಲೇ ನಿರ್ಗಮಿಸಿತು.

ಇದೀಗ ಇಬ್ಬರು ಸ್ಟಾರ್ ಕ್ರಿಕೆಟಿಗರು ಜೊತೆಯಾಗಿದ್ದಾರೆ. ಮುಂದಿರುವ ಏಕೈಕ ಗುರಿ 2023ರ ಏಕದಿನ ವಿಶ್ವಕಪ್. ಭಾರತದಲ್ಲಿ ನಡೆಯಲಿರುವ ಈ ವಿಶ್ವಕಪ್​ ಅನ್ನು ಗೆಲ್ಲುವ ಮೂಲಕ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೊತೆಗೂಡಿ ಹೊಸ ಇತಿಹಾಸ ಬರೆಯಲಿದ್ದಾರಾ ಕಾದು ನೋಡಬೇಕಿದೆ.

Published On - 4:00 pm, Sat, 4 February 23

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!