ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಭರ್ಜರಿ ಪೈಪೋಟಿ ಮುಂದುವರೆದಿದೆ. ಅದರಲ್ಲೂ ಕೆಲ ತಂಡಗಳು ಅತ್ಯುತ್ತಮ ಫೀಲ್ಡಿಂಗ್ ಮೂಲಕ ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತಿರುವುದು ವಿಶೇಷ. ಈ ಪಟ್ಟಿಗೆ ಹೊಸ ಸೇರ್ಪಡೆ ಗ್ಲೆನ್ ಮ್ಯಾಕ್ಸ್ವೆಲ್ ಹಿಡಿದ ಅತ್ಯಾಧ್ಭುತ ಕ್ಯಾಚ್. ಬಿಬಿಎಲ್ನ 51ನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಬಿಸ್ಬೇನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಬ್ರಿಸ್ಬೇನ್ಗೆ ಕ್ರಿಸ್ ಲಿನ್ ಉತ್ತಮ ಆರಂಭ ಒದಗಿಸಿದ್ದರು.
ಬಿರುಸಿನ ಆರಂಭ ಪಡೆದ ಬ್ರಿಸ್ಬೇನ್ ಹೀಟ್ ತಂಡ ಮೊತ್ತ ಪವರ್ಪ್ಲೇನಲ್ಲಿ 50 ರ ಗಡಿ ಮುಟ್ಟಿತು. ಈ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಮೇಲುಗೈ ಸಾಧಿಸಿದ ಮೆಲ್ಬೋರ್ನ್ ತಂಡಕ್ಕೆ ಸ್ಯಾಮ್ ಹೆಜ್ಲೆಟ್ ವಿಕೆಟ್ ಅನಿವಾರ್ಯವಾಗಿತ್ತು. ಏಕೆಂದರೆ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಪಂದ್ಯದ ಗತಿ ಬದಲಿಸಬಲ್ಲ ಆಟಗಾರನಾಗಿದ್ದ ಹೆಜ್ಲೆಟ್ ವಿಕೆಟ್ ಪಡೆಯಲು ನಾಯಕ ಗ್ಲೆನ್ ಮ್ಯಾಕ್ಸ್ವೆಲ್ ಫೀಲ್ಡಿಂಗ್ನಲ್ಲಿ ಬದಲಾವಣೆ ಮಾಡಿಕೊಂಡಿದ್ದರು.
ಅದರಂತೆ 16ನೇ ಓವರ್‌ನ 5ನೇ ಎಸೆತದಲ್ಲಿ ಸ್ಯಾಮ್ ಹೆಜ್ಲೆಟ್ ನಾಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಲಾಂಗ್ ಶಾಟ್ ಹೊಡೆದರು. ಆದರೆ 30 ಯಾರ್ಡ್ ಸರ್ಕಲ್ ಒಳಗೆ ನಿಂತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಹಿಮ್ಮುಖವಾಗಿ ಓಡಲಾರಂಭಿಸಿದರು. ಅಷ್ಟೇ ಅಲ್ಲದೆ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದರು. ಹೀಗೆ ನಂಬಲಾಸಾಧ್ಯವಾದ ಕ್ಯಾಚ್ ಹಿಡಿದು ಮ್ಯಾಕ್ಸ್ವೆಲ್ ಕೂಡ ಅಚ್ಚರಿ ವ್ಯಕ್ತಪಡಿಸಿದರು. ಇದೀಗ ಅತ್ಯಾಧ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“Degree of difficulty = 10” – Andrew Symonds
Extraordinary grab from Glenn Maxwell! One of the catches of the summer #BBL11 | BKT Golden Moment pic.twitter.com/01HmBs9VPK
— cricket.com.au (@cricketcomau) January 16, 2022
ಇನ್ನು ಈ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. 150 ರನ್ಗಳ ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ಪರ ಜೋ ಕ್ಲಾರ್ಕ್ ಕೇವಲ 36 ಎಸೆತಗಳಲ್ಲಿ 62 ರನ್ ಬಾರಿಸುವ ಮೂಲಕ 13.5 ಓವರ್ನಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
ಇದನ್ನೂ ಓದಿ: ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Big Bash League: Glenn Maxwell caught astonishing catch)