AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes: ಆಶಸ್​ ಗೆದ್ದರೂ ಸಂಭ್ರಮಾಚರಣೆಗೆ ಬ್ರೇಕ್! ಆಸೀಸ್ ಕ್ಯಾಪ್ಟನ್ ಕೆಲಸಕ್ಕೆ ಶಹಬ್ಬಾಸ್ ಎಂದ ಕ್ರೀಡಾ ಜಗತ್ತು

Ashes: ವಾಸ್ತವವಾಗಿ, ಆಶಸ್ ಟ್ರೋಫಿಯನ್ನು ಸ್ವೀಕರಿಸಿದ ತಕ್ಷಣ, ಆಸ್ಟ್ರೇಲಿಯಾ ತಂಡವು ವೇದಿಕೆಯಲ್ಲಿ ಸಂಭ್ರಮಿಸಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಶಾಂಪೇನ್‌ನ ಸುರಿಮಳೆಯೂ ಆಯಿತು. ಆಸ್ಟ್ರೇಲಿಯ ತಂಡದ ಪ್ರತಿಯೊಬ್ಬ ಆಟಗಾರರು ವೇದಿಕೆಯಲ್ಲಿದ್ದರು ಆದರೆ ಉಸ್ಮಾನ್ ಖವಾಜಾ ಮಾತ್ರ ಇರಲಿಲ್ಲ.

Ashes: ಆಶಸ್​ ಗೆದ್ದರೂ ಸಂಭ್ರಮಾಚರಣೆಗೆ ಬ್ರೇಕ್! ಆಸೀಸ್ ಕ್ಯಾಪ್ಟನ್ ಕೆಲಸಕ್ಕೆ ಶಹಬ್ಬಾಸ್ ಎಂದ ಕ್ರೀಡಾ ಜಗತ್ತು
ಆಸ್ಟ್ರೇಲಿಯಾ ತಂಡ
TV9 Web
| Updated By: ಪೃಥ್ವಿಶಂಕರ|

Updated on: Jan 16, 2022 | 8:08 PM

Share

ಆಶಸ್‌ನಲ್ಲಿ (Ashes 2021-22), ಆಸ್ಟ್ರೇಲಿಯನ್ ತಂಡವು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ಅನ್ನು 4-0 ಅಂತರದಿಂದ ಸೋಲಿಸಿತು. ಹೋಬರ್ಟ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲೂ ಆತಿಥೇಯರು 146 ರನ್‌ಗಳ ಭರ್ಜರಿ ಜಯ ಸಾಧಿಸಿದ್ದರು. 271 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 124 ರನ್‌ಗಳಿಗೆ ಆಲೌಟ್ ಆಯಿತು. ಆಶಸ್ ಸರಣಿಯನ್ನು ಗೆದ್ದ ನಂತರ, ಆಸ್ಟ್ರೇಲಿಯನ್ ತಂಡವು ಟ್ರೋಫಿಯನ್ನು ಪಡೆದ ತಕ್ಷಣ ಬಹಳ ಸಂಭ್ರಮಿಸಲು ಆರಂಭಿಸಿತು. ಆದರೆ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಮಾಡಿದ ಕೆಲಸಕ್ಕೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಅವರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ.ಹಾಗಾದರೆ ಆಸಿಸ್ ನಾಯಕ ಮಾಡಿದ್ದೇನು ಗೊತ್ತಾ?

ವಾಸ್ತವವಾಗಿ, ಆಶಸ್ ಟ್ರೋಫಿಯನ್ನು ಸ್ವೀಕರಿಸಿದ ತಕ್ಷಣ, ಆಸ್ಟ್ರೇಲಿಯಾ ತಂಡವು ವೇದಿಕೆಯಲ್ಲಿ ಸಂಭ್ರಮಿಸಲು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಶಾಂಪೇನ್‌ನ ಸುರಿಮಳೆಯೂ ಆಯಿತು. ಆಸ್ಟ್ರೇಲಿಯ ತಂಡದ ಪ್ರತಿಯೊಬ್ಬ ಆಟಗಾರರು ವೇದಿಕೆಯಲ್ಲಿದ್ದರು ಆದರೆ ಉಸ್ಮಾನ್ ಖವಾಜಾ ಮಾತ್ರ ಇರಲಿಲ್ಲ. ವಾಸ್ತವವಾಗಿ ಉಸ್ಮಾನ್ ಖವಾಜಾ ಒಬ್ಬ ಮುಸ್ಲಿಂ ಆಗಿದ್ದು ಅವರು ಶಾಂಪೇನ್ ಆಚರಣೆಯಿಂದ ದೂರವಿರುತ್ತಾರೆ. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಉಸ್ಮಾನ್ ಖವಾಜಾ ದೂರ ನಿಂತಿರುವುದನ್ನು ಕಂಡಾಗ, ಅವರು ತಮ್ಮ ಆಟಗಾರರನ್ನು ಶಾಂಪೇನ್ ಆಚರಣೆಯನ್ನು ನಿಲ್ಲಿಸುವಂತೆ ಹೇಳಿದರು. ನಂತರ ಉಸ್ಮಾನ್ ಖವಾಜಾ ಅವರನ್ನು ವೇದಿಕೆಗೆ ಕರೆದರು. ಪ್ಯಾಟ್ ಕಮಿನ್ಸ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿಡ್ನಿಯಲ್ಲಿ 2 ಶತಕ ಸಿಡಿಸಿದ ಉಸ್ಮಾನ್ ಖವಾಜಾ ಸಿಡ್ನಿ ಟೆಸ್ಟ್‌ನಲ್ಲಿ ಉಸ್ಮಾನ್ ಖವಾಜಾ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಆ ಟೆಸ್ಟ್ ಡ್ರಾ ಆಗಿತ್ತು ಆದರೆ ಆ ಪಂದ್ಯದಲ್ಲಿ ಉಸ್ಮಾನ್ ಖವಾಜಾ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಟೆಸ್ಟ್ ತಂಡಕ್ಕೆ ಮರಳಿದ ಎಡಗೈ ಬ್ಯಾಟ್ಸ್‌ಮನ್ ಮೊದಲ ಇನ್ನಿಂಗ್ಸ್‌ನಲ್ಲಿ 137 ರನ್ ಗಳಿಸಿದರು. ಇಲ್ಲಿಗೆ ನಿಲ್ಲದ ಖವಾಜಾ ಎರಡನೇ ಇನ್ನಿಂಗ್ಸ್​ನಲ್ಲೂ ಶತಕ ಬಾರಿಸಿದರು. ಖವಾಜಾ ಅಜೇಯ 101 ರನ್ ಗಳಿಸಿದರು.

ಪ್ಯಾಟ್ ಕಮಿನ್ಸ್ ಅತ್ಯುತ್ತಮ ಬೌಲರ್ ಆಶಸ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ಗರಿಷ್ಠ 21 ವಿಕೆಟ್​ ತೆಗೆದುಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್ 4 ಪಂದ್ಯಗಳಲ್ಲಿ ಕೇವಲ 18.04 ಸರಾಸರಿಯಲ್ಲಿ ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಸತತ ಮೂರನೇ ಬಾರಿಗೆ ಆಶಸ್‌ನಲ್ಲಿ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್ ಕಳೆದ 3 ಆಶಸ್ ಸರಣಿಯಲ್ಲಿ 73 ವಿಕೆಟ್ ಪಡೆದಿದ್ದಾರೆ. ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 5 ಪಂದ್ಯಗಳಲ್ಲಿ 19 ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಮೆಲ್ಬೋರ್ನ್‌ನಲ್ಲಿ ಪದಾರ್ಪಣೆ ಮಾಡಿದ ಸ್ಕಾಟ್ ಬೋಲ್ಯಾಂಡ್ ಕೇವಲ 3 ಟೆಸ್ಟ್‌ಗಳಲ್ಲಿ 18 ವಿಕೆಟ್‌ಗಳನ್ನು ಪಡೆದರು.

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ