
ಬೆಂಗಳೂರು (ಸೆ. 22): ಏಷ್ಯಾ ಕಪ್ 2025ರ ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ತಮ್ಮ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತು. ಸೈಮ್ ಅಯೂಬ್ ಬದಲಿಗೆ ಸಾಹಿಬ್‌ಜಾದಾ ಫರ್ಹಾನ್ ಅವರೊಂದಿಗೆ ಫಖರ್ ಜಮಾನ್ ಅವರನ್ನು ಓಪನರ್ ಆಗಿ ಕಳುಹಿಸಿತು. ಆರಂಭದಲ್ಲೇ ಪಾಕ್ ಬ್ಯಾಟರ್ಗಳು ಎಡವಿದ್ದರೂ ಭಾರತೀಯ ಫೀಲ್ಡರ್‌ಗಳ ಕಳಪೆ ಪ್ರದರ್ಶನದಿಂದ ಬಚಾವ್ ಆದರು. ಈ ಪೈಕಿ ಫರ್ಹಾನ್ ತಮಗೆ ಸಿಕ್ಕ ಲೈಫ್‌ಲೈನ್‌ಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡರು.
ಸಾಹಿಬ್‌ಜಾದಾ ಫರ್ಹಾನ್ 45 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 58 ರನ್ ಗಳಿಸಿದರು. ಇದೀಗ ಇವರು ಅರ್ಧಶತಕ ಗಳಿಸಿದ ನಂತರ ಸಂಭ್ರಮಾಚರಣೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿವಾದ ಹುಟ್ಟುಹಾಕಿದೆ. ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿದ ತಕ್ಷ ತಮ್ಮ ಬ್ಯಾಟ್ ಅನ್ನು ರೈಫಲ್ ರೀತಿ ಹಿಡಿದು ಫೈಯರ್ ಮಾಡುವಂತೆ ಅರ್ಧಶತಕವನ್ನು ಆಚರಿಸಿದರು.
Bumrah is a very potent bowler but not against Sahibzada FARHAN pic.twitter.com/rdaILNBR7C
— A. (@Ahmadridismo) September 21, 2025
ಸಾಹಿಬ್‌ಜಾದಾ ಫರ್ಹಾನ್ ಈ ರೀತಿ ಸಂಭ್ರಮಾಚರಣೆ ಮಾಡಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಓರ್ವ ಎಕ್ಸ್ ಬಳಕೆದಾರ, ‘‘ಈ ಫೋಟೋದಲ್ಲಿ ಪಾಕಿಸ್ತಾನಿ ಮನಸ್ಥಿತಿಯನ್ನು ಪಾಕಿಸ್ತಾನಿ ಕ್ರಿಕೆಟಿಗರು ತೋರಿಸಿದ್ದಾರೆ. ಇವರು ಹುಟ್ಟು ಭಯೋತ್ಪಾದಕರು. ಜೀವನದಲ್ಲಿ ಒಂದೇ ಒಂದು ಗುರಿ. ಭಾರತೀಯರ ಮೇಲೆ ಗುಂಡು ಹಾರಿಸುವುದು. ಬ್ಲಡಿ ಈಡಿಯಟ್ಸ್ – ಇದೇ ರೀತಿಯ ದ್ವೇಷಪೂರಿತ ಮನಸ್ಥಿತಿ, ಪ್ರಚೋದಿಸಿದರೆ – ಯಾರೂ ಅವರಿಗೆ ಕರುಣೆ ತೋರಿಸುವುದಿಲ್ಲ.’’ ಎಂದು ಬರೆದುಕೊಂಡಿದ್ದಾರೆ.
Pakistani mindset demonstrated in this picture by PAK cricketers.
Born terrorists. Only One Aim in life. To shoot at Indians.
Bloody Idiots- a similar hateful mindset, if triggered- None will show them any mercy. pic.twitter.com/y5EvTJgXc1— Col Ajit Singh Bhinder🇮🇳 (@ajitbhinder) September 22, 2025
ಫರ್ಹಾನ್ ಈ ಹಿಂದೆ ಭಾರತದ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದರು ಎಂಬುದನ್ನು ಗಮನಿಸಬೇಕು. ಅಲ್ಲಿ ಅವರು 44 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 40 ರನ್ ಗಳಿಸಿದರು.
IND vs PAK: ಭಾರತದ ತೂಫಾನ್ಗೆ ತತ್ತರಿಸಿದ ಪಾಕಿಸ್ತಾನ್
ಈ ಪಂದ್ಯದಲ್ಲಿ ಸಾಹಿಬ್‌ಜಾದಾ ಫರ್ಹಾನ್‌ಗೆ ಎರಡು ಜೀವದಾನ ನೀಡಲಾಯಿತು. ಅವರ ಎರಡೂ ಕ್ಯಾಚ್‌ಗಳನ್ನು ಭಾರತದ ಅಭಿಷೇಕ್ ಶರ್ಮಾ ಕೈಬಿಟ್ಟರು. ಅವರು ಈ ಜೀವಗಳನ್ನು ಸದುಪಯೋಗಪಡಿಸಿಕೊಂಡರು. ಅವರು 45 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 58 ರನ್ ಗಳಿಸಿದರು. 15 ನೇ ಓವರ್‌ನ ಮೊದಲ ಎಸೆತದಲ್ಲಿ ಅವರು ಔಟಾ ಆದರು. ಶಿವಂ ದುಬೆ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಕ್ಯಾಚ್ ಪಡೆದರು.
ಟೀಮ್ ಇಂಡಿಯಾ ಪಾಕಿಸ್ತಾನವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಜಯಗಳಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಭಾರತಕ್ಕೆ 172 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಟೀಮ್ ಇಂಡಿಯಾ 18.5 ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು. ಅಭಿಷೇಕ್ ಶರ್ಮಾ (74) ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 am, Mon, 22 September 25