The Hundred Final: ಚೊಚ್ಚಲ ದಿ ಹಂಡ್ರೆಡ್ ಸೀಸನ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸೌಥರ್ನ್ ಬ್ರೇವ್ ತಂಡ
BPH vs SOB: ಅಂತಿಮ ಹಂತದಲ್ಲಿ ರಾಸ್ ವೈಟ್ಲೆ ಕೇವಲ 19 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 44 ರನ್ ಗಳಿಸಿದ ಪರಿಣಾಮ ಸೌಥರ್ನ್ ಬ್ರೇವ್ ತಂಡ ನಿಗದಿತ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು.
ದಿ ಹಂಡ್ರೆಡ್ (The Hundred) ಪುರುಷರ ಕಾಂಪಿಟೇಶ್ 2021 ರಲ್ಲಿ ಜೇಮ್ಸ್ ವಿನ್ಸ್ ನಾಯಕತ್ವದ ಸೌಥರ್ನ್ ಬ್ರೇವ್ (Southern Brave) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಬರ್ಮಿಂಗ್ಹ್ಯಾಮ್ ಫಿನಿಕ್ಸ್ ವಿರುದ್ಧದ ಅಂತಿಮ ಫೈನಲ್ ಪಂದ್ಯದಲ್ಲಿ ಸೌಥರ್ನ್ ಬ್ರೇವ್ 32 ರನ್ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. ಲೀಗ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದ ಬರ್ಮಿಂಗ್ಹ್ಯಾಮ್ (Birmingham) ಫೈನಲ್ನಲ್ಲಿ ಎಡವಿತು.
ಫೈನಲ್ ಕದನದಲ್ಲಿ ಮೊದಲ ಬ್ಯಾಟ್ ಮಾಡಿದ ಸೌಥರ್ನ್ ಬ್ರೇವ್ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲ. ಕ್ವಿಂಟನ್ ಡಿಕಾಕ್ ಕೇವಲ 7 ರನ್ಗೆ ಔಟ್ ಆದರೆ, ನಾಯಕ ಜೇಮ್ಸ್ ವಿನ್ಸ್ 4 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಪೌಲ್ ಸ್ಟಿರ್ಲಿಂಗ್ ಹಾಗೂ ಅಲೆಕ್ಸ್ ಡೆವಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಡೆವಿಸ್ 27 ರನ್ ಬಾರಿಸಿದರೆ, ಪೌಲ್ ಕೇವಲ 36 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಬಾರಿಸಿ 61 ರನ್ ಚಚ್ಚಿದರು.
ಅಂತಿಮ ಹಂತದಲ್ಲಿ ರಾಸ್ ವೈಟ್ಲೆ ಕೇವಲ 19 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 44 ರನ್ ಗಳಿಸಿದ ಪರಿಣಾಮ ಸೌಥರ್ನ್ ಬ್ರೇವ್ ತಂಡ ನಿಗದಿತ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಬರ್ಮಿಂಗ್ಹ್ಯಾಮ್ ತಂಡ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ನಾಯಕ ಮೊಯೀನ್ ಅಲಿ 30 ಎಸೆತಗಳಲ್ಲಿ 36 ರನ್ ಗಳಿಸಿ ನಿರ್ಗಮಿಸಿದರು. ಪ್ರತಿಬಾರಿ ತಂಡಕ್ಕೆ ಆಸರೆಯಾಗುತ್ತಿದ್ದ ಲಿವಿಂಗ್ಸ್ಟನ್ 19 ಎಸೆತಗಳಲ್ಲಿ 46 ರನ್ ಚಚ್ಚಿ ರನೌಟ್ಗೆ ಬಲಿಯಾದರು.
ಕೊನೆಯಲ್ಲಿ ಕ್ರಿಸ್ ಬೆಂಜಮಿನ್ 23 ಹಾಗೂ ಬೆನ್ ಹೊವೆಲ್ 20 ರನ್ ಗಳಿಸಿ ಅಜೇಯರಾಗಿ ಉಳಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಪರಿಣಾಮ ಬರ್ಮಿಂಗ್ಹ್ಯಾಮ್ ತಂಡ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಕಂಡಿತು.
A great day for James Vince’s side as Southern Brave were crowned the first men’s Hundred champions after beating Birmingham Phoenix by 32 runs. #bbccricket #TheHundred
— BBC Sport (@BBCSport) August 21, 2021
32 ರನ್ಗಳ ಅಮೋಘ ಜಯದೊಂದಿಗೆ ಸೌಥರ್ನ್ ಬ್ರೇವ್ ತಂಡ ಚೊಚ್ಚಲ ದಿ ಹಂಡ್ರೆಡ್ ಸೀಸನ್ನಲ್ಲಿ ಟ್ರೋಫಿ ಗೆದ್ದಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೌಲ್ ಸ್ಟಿರ್ಲಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರೆ, ಟೂರ್ನಿಯಿದ್ದಕ್ಕೂ ತಂಡದ ಗೆಲುವಿಗೆ ಹೋರಾಡಿದ ಲಿವಿಂಗ್ಸ್ಟನ್ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.
Wanindu Hasaranga: ಆರ್ಸಿಬಿ ತಂಡ ಸೇರಿದ ತಕ್ಷಣ ವನಿಂದು ಹಸರಂಗ ನೀಡಿದ ಪ್ರತಿಕ್ರಿಯೆ ನೋಡಿ
Formula 4 India: ಭಾರತೀಯ ಫಾರ್ಮುಲಾ ರೇಸಿಂಗ್ ಚಾಂಪಿಯನ್ಶಿಪ್ಗೆ ಚಾಲನೆ
(BPH vs SOB The Hundred Mens Final Southern Brave beat Birmingham Phoenix by 32 runs to clinch first ever title of The Hundred)