ಬದಲಾದ ಹೆಸರಿನೊಂದಿಗೆ ಮತ್ತೆ ಆರಂಭವಾಗಲಿದೆ ಚಾಂಪಿಯನ್ಸ್ ಲೀಗ್
World Club Championship 2026: 2009 ರಿಂದ 2014 ರವರೆಗೆ ನಡೆದ ಚಾಂಪಿಯನ್ಸ್ ಲೀಗ್ ಟಿ20, "ವಿಶ್ವ ಕ್ಲಬ್ ಚಾಂಪಿಯನ್‌ಶಿಪ್" ಎಂಬ ಹೊಸ ಹೆಸರಿನೊಂದಿಗೆ 2026 ರಲ್ಲಿ ಮರಳಲಿದೆ. ಐಪಿಎಲ್, ಬಿಬಿಎಲ್ ಮುಂತಾದ ಟಿ20 ಲೀಗ್‌ಗಳ ವಿಜೇತ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಐಪಿಎಲ್ 2026 ರ ವಿಜೇತ ತಂಡವೂ ಸ್ಪರ್ಧಿಸಲಿದೆ. ಬಿಸಿಸಿಐ ಮತ್ತು ಇಸಿಬಿ ಈ ಕುರಿತು ಐಸಿಸಿ ಜೊತೆ ಮಾತುಕತೆ ನಡೆಸುತ್ತಿವೆ.

2009 ರಿಂದ ಆರಂಭವಾಗಿ 2014 ರವರೆಗೆ ಅದ್ಧೂರಿಯಾಗಿ ನಡೆದಿದ್ದ ಚಾಂಪಿಯನ್ಸ್ ಲೀಗ್ (Champions League T20) ಟಿ20 ಪಂದ್ಯಾವಳಿ ಬದಲಾದ ಹೆಸರಿನೊಂದಿಗೆ ಮತ್ತೊಮ್ಮೆ ಆರಂಭವಾಗಲಿದೆ. ದಿ ಕ್ರಿಕೆಟರ್ ಪ್ರಕಾರ ವರದಿ ಪ್ರಕಾರ, 2026 ರಿಂದ ದಿ ವರ್ಲ್ಡ್ ಕ್ಲಬ್ ಚಾಂಪಿಯನ್‌ಶಿಪ್ (World Club Championship) ಹೆಸರಿನೊಂದಿಗೆ ಮತ್ತೆ ಶುರುವಾಗಲಿದೆ. ನಿಮಗೆಲ್ಲ ತಿಳಿದಿರುವಂತೆ ಈ ಚಾಂಪಿಯನ್‌ಶಿಪ್‌ನಲ್ಲಿ ಆಡುವ ತಂಡಗಳು ಐಪಿಎಲ್ (IPL), ಬಿಬಿಎಲ್, ಸಿಪಿಎಲ್, ಪಿಎಸ್‌ಎಲ್, ಎಸ್‌ಎ 20 ಮತ್ತು ದಿ ಹಂಡ್ರೆಡ್‌ನಂತಹ ವಿಶ್ವದ ಉಳಿದ ಟಿ20 ಲೀಗ್‌ಗಳ ಚಾಂಪಿಯನ್‌ಗಳಾಗಿರುತ್ತವೆ. ಹೀಗಾಗಿ ಈ ಚಾಂಪಿಯನ್ಸ್ ಲೀಗ್ ಟಿ20 ಹೊಸ ಹೆಸರಿನೊಂದಿಗೆ ಮತ್ತು ಹೊಸ ಶೈಲಿಯಲ್ಲಿ ಆರಂಭವಾಗಲಿದೆ. ವರದಿಗಳ ಪ್ರಕಾರ, ಬಿಸಿಸಿಐ ಮತ್ತು ಇಸಿಬಿ ಐಸಿಸಿ ಅಧ್ಯಕ್ಷ ಜಯ್ ಶಾ ಅವರೊಂದಿಗೆ ಅನುಮೋದನೆ ಕುರಿತು ಮಾತುಕತೆ ನಡೆಸುತ್ತಿವೆ.
ಐಪಿಎಲ್ ಚಾಂಪಿಯನ್ ತಂಡವೂ ಆಡಲಿದೆ
ವರದಿ ಹೇಳಿರುವಂತೆ ಈ ಪಂದ್ಯಾವಳಿಯನ್ನು 2026 ರಲ್ಲಿ ನಡೆಸಿದರೆ, ಇದು ಐಪಿಎಲ್ ನಂತರವೇ ಆಯೋಜನೆಯಾಗಲಿದೆ. ಸದ್ಯದ ವೇಳಾಪಟ್ಟಿಯ ಪ್ರಕಾರ 2026 ರಲ್ಲಿ ಟಿ20 ವಿಶ್ವಕಪ್ ಅನ್ನು ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಆರಂಭದಲ್ಲಿ ಆಯೋಜಿಸಲಾಗುವುದು. ಇದಾದ ನಂತರ 2026 ರ ಐಪಿಎಲ್ ಆರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2026 ರ ವಿಜೇತ ತಂಡವು ಕೂಡ ವಿಶ್ವ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬಹುದು.
🚨 CLT20 TO RETURN FROM 2026. 🚨
– The World Club Championship inspired by CLT20 to be launched in 2026.
– Champions from the IPL, SA20, Big Bash, The Hundred and other leagues will take part. (The Cricketer). pic.twitter.com/VxpF9bUWc9
— Mufaddal Vohra (@mufaddal_vohra) July 2, 2025
2 ಬಾರಿ ಚಾಂಪಿಯನ್ ಆಗಿದ್ದ ಸಿಎಸ್ಕೆ
ಮೇಲೆ ಹೇಳಿದಂತೆ ಚಾಂಪಿಯನ್ಸ್ ಲೀಗ್ ಟಿ20 ಮೊದಲ ಬಾರಿಗೆ 2009 ರಲ್ಲಿ ಆರಂಭವಾಯಿತು. ಆ ನಂತರ ಈ ಪಂದ್ಯಾವಳಿ 2014 ರವರೆಗೆ ನಡೆಯಿತು. ಆದರೆ ಆ ನಂತರ ಪ್ರಾಯೋಜಕತ್ವವನ್ನು ಪಡೆಯುವ ತೊಂದರೆ ಮತ್ತು ಅದರ ಕಳಪೆ ಟಿಆರ್‌ಪಿಯಿಂದಾಗಿ ಈ ಲೀಗ್ ಅನ್ನು ರದ್ದುಗೊಳಿಸಲಾಯಿತು. ಆದಾಗ್ಯೂ ಈ ಲೀಗ್ನಲ್ಲಿ ಐಪಿಎಲ್‌ನಂತೆಯೇ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕೂಡ ತಮ್ಮ ಪ್ರಾಬಲ್ಯ ಮೆರೆದಿವೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಅಂದರೆ 2010 ಮತ್ತು 2014 ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನು ಗೆದ್ದಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ 2 ಬಾರಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿ ಗೆದ್ದಿದೆ.
ಕೊಹ್ಲಿ- ರೋಹಿತ್ ಇಲ್ಲದ ಡ್ರೀಮ್ ಟಿ20 ತಂಡವನ್ನು ಪ್ರಕಟಿಸಿದ ವರುಣ್ ಚಕ್ರವರ್ತಿ
ಆದಾಗ್ಯೂ, ಕಳೆದ 10 ವರ್ಷಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ವಿಶ್ವದ ಹಲವು ದೇಶಗಳ ಕ್ರಿಕೆಟ್ ಮಂಡಳಿಗಳು ತಮ್ಮದೇ ಆದ ಟಿ20 ಲೀಗ್‌ಗಳನ್ನು ಪ್ರಾರಂಭಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲವೂ ಸರಿಯಾಗಿ ನಡೆದರೆ, ವಿಶ್ವ ಕ್ಲಬ್ ಚಾಂಪಿಯನ್‌ಶಿಪ್ ಮತ್ತೊಮ್ಮೆ ಆರಂಭವಾಗುವುದನ್ನು ನಾವು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Wed, 2 July 25
