ಕೊಹ್ಲಿ- ರೋಹಿತ್ ಇಲ್ಲದ ಡ್ರೀಮ್ ಟಿ20 ತಂಡವನ್ನು ಪ್ರಕಟಿಸಿದ ವರುಣ್ ಚಕ್ರವರ್ತಿ
Varun Chakravarthy's Dream T20 XI Revealed: ವರುಣ್ ಚಕ್ರವರ್ತಿ ಅವರು ತಮ್ಮ ಕನಸಿನ ಟಿ20 ತಂಡವನ್ನು ಘೋಷಿಸಿದ್ದು, ಆ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಲ್ಲ. ಮೂವರು ಭಾರತೀಯ ಆಟಗಾರರು (ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ) ಮತ್ತು ಎಂಟು ವಿದೇಶಿ ಆಟಗಾರರು ಈ ತಂಡದಲ್ಲಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ತಕ್ಷಣ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಿಂದ ನಿವೃತ್ತಿ ಹೊಂದಿದ್ದರು. ಈ ವರ್ಷ, ಭಾರತದ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಎರಡು ಸ್ವರೂಪಗಳಿಂದ ನಿವೃತ್ತರಾಗಿರುವ ರೋಹಿತ್-ವಿರಾಟ್ ಈಗ ಏಕದಿನ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆದರೆ ಈ ಸ್ವರೂಪದಲ್ಲಿ ಅವರು ಎಷ್ಟು ಕಾಲ ಆಡಲು ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಇದೆ. ಏತನ್ಮಧ್ಯೆ, ಟೀಂ ಇಂಡಿಯಾದ ಯುವ ಗೂಗ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ತಮ್ಮ ಕನಸಿನ ಟಿ20 ತಂಡವನ್ನು ಘೋಷಿಸಿದ್ದು, ಈ ತಂಡದಿಂದ ಈ ಇಬ್ಬರೂ ಕ್ರಿಕೆಟಿಗರನ್ನು ಹೊರಗಿಟ್ಟಿದ್ದಾರೆ.
ಕೇವಲ ಮೂವರು ಭಾರತೀಯರಿಗೆ ಸ್ಥಾನ
ವರುಣ್ ಚಕ್ರವರ್ತಿ ಪ್ರಕಟಿಸಿರುವ ತಮ್ಮ ಕನಸಿನ ಟಿ20 ತಂಡದಲ್ಲಿ ರೋಹಿತ್ ಮತ್ತು ವಿರಾಟ್ ಅವರ ಹೆಸರುಗಳಿಲ್ಲ. ಅಂದರೆ ವರುಣ್ ಚಕ್ರವರ್ತಿ ಅವರಿಬ್ಬರನ್ನೂ ತಮ್ಮ ಕನಸಿನ ಟಿ20 ತಂಡದಿಂದ ಹೊರಗಿಟ್ಟಿದ್ದಾರೆ. ವರುಣ್ ಚಕ್ರವರ್ತಿ ಪ್ರಕಟಿಸಿರುವ ತಂಡದಲ್ಲಿ ಕೇವಲ ಮೂವರು ಭಾರತೀಯ ಆಟಗಾರರಿದ್ದರೆ, ಉಳಿದ 8 ಆಟಗಾರರು ವಿದೇಶಿಗರಾಗಿದ್ದಾರೆ. ಇನ್ನು ವರುಣ್ ಚಕ್ರವರ್ತಿ ಆಯ್ಕೆ ಮಾಡಿರುವ ಕನಸಿನ ತಂಡದಲ್ಲಿ ಸ್ಥಾನ ಪಡೆದಿರುವ ಮೂವರು ಭಾರತೀಯ ಆಟಗಾರರೆಂದರೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ.
6 ದೇಶಗಳಿಂದ 8 ಆಟಗಾರರ ಆಯ್ಕೆ
ವರುಣ್ ಚಕ್ರವರ್ತಿ ತಂಡದಲ್ಲಿರುವ ಉಳಿದ 8 ಆಟಗಾರರು ಜೋಸ್ ಬಟ್ಲರ್ (ಇಂಗ್ಲೆಂಡ್), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ), ರಶೀದ್ ಖಾನ್ (ಅಫ್ಘಾನಿಸ್ತಾನ), ಮಥಿಶಾ ಪತಿರಾನ (ಶ್ರೀಲಂಕಾ), ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್), ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್), ಸುನಿಲ್ ನರೈನ್ (ವೆಸ್ಟ್ ಇಂಡೀಸ್) ಮತ್ತು ಹೆನ್ರಿಕ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) ಸೇರಿದ್ದಾರೆ.
IND vs AUS: ಕೊಹ್ಲಿ- ರೋಹಿತ್ ಆಡುವ ಪಂದ್ಯದ ಟಿಕೆಟ್ 4 ತಿಂಗಳಿಗೂ ಮುನ್ನವೇ ಸೋಲ್ಡ್ ಔಟ್..!
ವರುಣ್ ಚಕ್ರವರ್ತಿ ತಮ್ಮ ಕನಸಿನ ಟಿ20 ತಂಡದಲ್ಲಿ ಜೋಸ್ ಬಟ್ಲರ್ ಮತ್ತು ಟ್ರಾವಿಸ್ ಹೆಡ್‌ಗೆ ಆರಂಭಿಕ ಜವಾಬ್ದಾರಿಯನ್ನು ನೀಡಿದ್ದು, ಸೂರ್ಯಕುಮಾರ್ ಯಾದವ್ರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್, ಹಾರ್ದಿಕ್ ಪಾಂಡ್ಯ, ನಿಕೋಲಸ್ ಪೂರನ್ ಮತ್ತು ಆಂಡ್ರೆ ರಸೆಲ್ ಇದ್ದಾರೆ. ಕೆಳ ಕ್ರಮಾಂಕದಲ್ಲಿ ಸುನಿಲ್ ನರೈನ್, ರಶೀದ್ ಖಾನ್, ಜಸ್ಪ್ರೀತ್ ಬುಮ್ರಾ ಮತ್ತು ಮಥಿಶಾ ಪತಿರಾನ ಇದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
