ಟೀಮ್ ಇಂಡಿಯಾ ಗೆದ್ದರೆ ಆಸ್ಟ್ರೇಲಿಯಾ ಎದುರಾಳಿ, ಸೋತರೆ..!

Champions Trophy 2025 Semi-Final: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​ಗೆ ಭಾರತ, ನ್ಯೂಝಿಲೆಂಡ್, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಎಂಟ್ರಿ ಕೊಟ್ಟಿವೆ. ಇತ್ತ ಟೀಮ್ ಇಂಡಿಯಾ ಹಾಗೂ ನ್ಯೂಝಿಲೆಂಡ್ ನಡುವೆ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಸೆಮಿಫೈನಲ್ ವೇಳಾಪಟ್ಟಿ ಹೊರಬೀಳಲಿದೆ.

ಟೀಮ್ ಇಂಡಿಯಾ ಗೆದ್ದರೆ ಆಸ್ಟ್ರೇಲಿಯಾ ಎದುರಾಳಿ, ಸೋತರೆ..!
Champions Trophy 2025

Updated on: Mar 02, 2025 | 7:00 AM

Champions Trophy 2025: ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯು ನಾಕೌಟ್ ಹಂತಕ್ಕೆ ಬಂದು ನಿಂತಿದೆ. 8 ತಂಡಗಳೊಂದಿಗೆ ಶುರುವಾದ ಟೂರ್ನಿಯಲ್ಲಿ ಇದೀಗ ನಾಲ್ಕು ತಂಡಗಳು ಮಾತ್ರ ಉಳಿದಿವೆ. ಅದರಂತೆ ಭಾರತ, ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್ ಆಡಲಿವೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಹಾಗೂ ನ್ಯೂಝಿಲೆಂಡ್ ಲೀಗ್ ಹಂತದ ಕೊನೆಯ ಪಂದ್ಯವಾಡಬೇಕಿದೆ. ದುಬೈನ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಫೆ.2) ನಡೆಯಲಿರುವ ಈ ಪಂದ್ಯವು ಭಾರತ ತಂಡದ ಸೆಮಿಫೈನಲ್ ಎದುರಾಳಿಯನ್ನು ನಿರ್ಧರಿಸಲಿದೆ.

ಏಕೆಂದರೆ ಸೆಮಿಫೈನಲ್​ನ ಎದುರಾಳಿಗಳು ಯಾರೆಂಬುದು ನಿರ್ಧಾರವಾಗುವುದು ಆಯಾ ಗ್ರೂಪ್​ನ ಅಂಕ ಪಟ್ಟಿಯಲ್ಲಿ ತಂಡಗಳು ಪಡೆಯುವ ಸ್ಥಾನಗಳ ಆಧಾರ ಮೇಲೆ. ಅಂದರೆ ಗ್ರೂಪ್-A ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಗ್ರೂಪ್-B ನಲ್ಲಿ ದ್ವಿತೀಯ ಸ್ಥಾನ ಪಡೆಯುವ ತಂಡವನ್ನು ಸೆಮಿಫೈನಲ್​ನಲ್ಲಿ ಎದುರಿಸಲಿದೆ. ಹಾಗೆಯೇ ಗ್ರೂಪ್-B ನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಗ್ರೂಪ್-A ನಲ್ಲಿ ದ್ವಿತೀಯ ಸ್ಥಾನ ಪಡೆಯುವ ತಂಡದ ಸೆಮೀಸ್​ನಲ್ಲಿ ಸೆಣಸಲಿದೆ.

ಅದರಂತೆ ನ್ಯೂಝಿಲೆಂಡ್ ವಿರುದ್ಧ ಭಾರತ ತಂಡ ಗೆದ್ದರೆ, ಟೀಮ್ ಇಂಡಿಯಾ ಗ್ರೂಪ್-A ನಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಅತ್ತ ಗ್ರೂಪ್- B ನಲ್ಲಿ ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದ್ದು, ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬಹುದು.

ಇದನ್ನೂ ಓದಿ
ಟೀಮ್ ಇಂಡಿಯಾಗೆ ಹೊಸ ಚಿಂತೆ ಶುರು: ಅಭ್ಯಾಸಕ್ಕೆ ಇಬ್ಬರು ಆಟಗಾರರು ಗೈರು..!
ICC ODI Rankings: ಟಾಪ್-10 ನಲ್ಲಿ ಟೀಮ್ ಇಂಡಿಯಾದ ನಾಲ್ವರು ಬ್ಯಾಟರ್​ಗಳು
ಎಲ್ಲರೂ ಶತಕ ಬಾರಿಸಿದ್ರು... ಪಾಕಿಸ್ತಾನ್ ಬ್ಯಾಟರ್​ಗಳಿಗೆ ನಾಚಿಕೆಗೇಡು..!
IPL 2025: ಐಪಿಎಲ್​ನಲ್ಲೂ ಟೀಮ್ ಇಂಡಿಯಾಗೆ ಟೆಸ್ಟ್​

ಒಂದು ವೇಳೆ ಭಾರತದ ವಿರುದ್ಧ ನ್ಯೂಝಿಲೆಂಡ್ ತಂಡ ಸೋತರೆ, ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಲಿದೆ. ಅದರಂತೆ ಟೀಮ್ ಇಂಡಿಯಾ ಗ್ರೂಪ್-Bನಲ್ಲಿ ಮೊದಲ ಸ್ಥಾನ ಅಲಂಕರಿಸಿರುವ ಸೌತ್ ಆಫ್ರಿಕಾ ತಂಡವನ್ನು ಸೆಮಿಫೈನಲ್​ನಲ್ಲಿ ಎದುರಿಸಲಿದೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಫಲಿತಾಂಶವು ಟೀಮ್ ಇಂಡಿಯಾದ ಸೆಮಿಫೈನಲ್​ ಎದುರಾಳಿ ಯಾರೆಂಬುದನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನಿಯರು ಭಾರತದ ಧ್ವಜ ಹಾರಿಸಿದ್ರಾ?

ಇತ್ತ ಗೆಲುವಿನ ಲಯ ಮುಂದುವರೆಸುವ ಇರಾದೆಯಲ್ಲಿರುವ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದರೆ, ಮಾರ್ಚ್ 4 ರಂದು ನಡೆಯಲಿರುವ ಮೊದಲ ಸೆಮಿಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಸೋತರೆ, ಮೊದಲೇ ಹೇಳಿದಂತೆ ಸೌತ್ ಆಫ್ರಿಕಾ ವಿರುದ್ಧ ಸೆಮಿಫೈನಲ್ ಆಡಲಿದೆ.