IPL 2022, CSK: ಸಿಎಸ್​ಕೆ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ತಂದೆಯನ್ನೇ ಕ್ಲೀನ್ ಬೌಲ್ಡ್ ಮಾಡಿದ ಮಗ: ಯಾರು ಗೊತ್ತೇ?

| Updated By: Vinay Bhat

Updated on: Apr 08, 2022 | 1:04 PM

Chennai Super Kings: ಚೆನ್ನೈ ಸೂಪರ್ ಕಿಂಗ್ಸ್​ ತನ್ನ ನಾಲ್ಕನೇ ಪಂದ್ಯವನ್ನು ಶನಿವಾರ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಆಡಲಿದೆ. ಇದಕ್ಕಾಗಿ ಸಿಎಸ್​​ಕೆ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಚೆನ್ನೈ​​ ತಂಡದ ದಕ್ಷಿಣ ಆಫ್ರಿಕಾದ ಡ್ವೇನ್ ಪ್ರೆಟೊರಿಯಸ್ ಅವರು ಕೂಡ ಬೊಂಬಾಟ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದು, ಇವರಿಗೆ ಇವರ ಮಗ ಕೂಡ ಸಾಥ್ ನೀಡುತ್ತಿದ್ದಾರೆ.

IPL 2022, CSK: ಸಿಎಸ್​ಕೆ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ತಂದೆಯನ್ನೇ ಕ್ಲೀನ್ ಬೌಲ್ಡ್ ಮಾಡಿದ ಮಗ: ಯಾರು ಗೊತ್ತೇ?
Dwaine Pretorius Son CSK
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯನ್ನು ಅತ್ಯಂತ ಕೆಟ್ಟದಾಗಿ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಒಂದು ಗೆಲುವಿಗಾಗಿ ಹಾತೊರೆಯುತ್ತಿದೆ. ಎಂಎಸ್ ಧೋನಿ (MS Dhoni) ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿದ ಬಳಿಕ ರವೀಂದ್ರ ಜಡೇಜಾ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ಆದರೆ, ಕೆಕೆಆರ್​​, ಲಖನೌ ಸೂಪರ್​ ಜೇಂಟ್ಸ್​ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಹೀಗೆ ಆಡಿದ ಮೂರೂ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಪಾತಳಕ್ಕೆ ಕುಸಿದಿದೆ. ಬೌಲಿಂಗ್​​ ಮತ್ತು ಬ್ಯಾಟಿಂಗ್​​ ಎರಡು ವಿಭಾಗಗಳಲ್ಲೂ ಕೆಟ್ಟ ಪ್ರದರ್ಶನ ನೀಡಿ ಮೂರಕ್ಕೆ 3 ಮ್ಯಾಚ್​​ ಸೋತಿದ್ದು ಮಾತ್ರವಲ್ಲದೆ ಇದು ಐಪಿಎಲ್ ಇತಿಹಾಸದಲ್ಲೇ ಸಿಎಸ್​ಕೆ ತಂಡದ ಅತ್ಯಂತ ಕಳಪೆ ಆರಂಭವಾಗಿದೆ. ಇದೀಗ ಜಡೇಜಾ ಪಡೆ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಚೆನ್ನೈ ತನ್ನ ನಾಲ್ಕನೇ ಪಂದ್ಯವನ್ನು ಶನಿವಾರ ಸನ್​ರೈಸರ್ಸ್​ ಹೈದರಾಬಾದ್ (CSK vs SRH) ವಿರುದ್ಧ ಆಡಲಿದೆ.

ಹೌದು, ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ ಸೋತವರ ನಡುವೆ ಕಾಳಗ ನಡೆಯಲಿದೆ. ಐಪಿಎಲ್ 2022 ರಲ್ಲಿ ಒಂದೂ ಗೆಲುವು ಸಾಧಿಸದ ಸಿಎಸ್​ಕೆ ಹಾಗೂ ಎಸ್​ಆರ್​ಹೆಚ್ ಮುಖಾಮುಖಿ ಆಗಲಿದೆ. ಇದಕ್ಕಾಗಿ ಚೆನ್ನೈ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಮೈದಾನದಲ್ಲಿ ಎಲ್ಲ ಆಟಗಾರರು ಬೆವರಿಳಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​​ ಹರಾಜಿನಲ್ಲಿ ಖರೀದಿ ಮಾಡಿಕೊಂಡ ದಕ್ಷಿಣ ಆಫ್ರಿಕಾದ ಡ್ವೇನ್ ಪ್ರೆಟೊರಿಯಸ್ ಅವರು ಕೂಡ ಬೊಂಬಾಟ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದು, ಇವರಿಗೆ ಇವರ ಮಗ ಕೂಡ ಸಾಥ್ ನೀಡುತ್ತಿದ್ದಾರೆ.

ಪ್ರೆಟೊರಿಯಸ್ ತಮ್ಮ ಚೊಚ್ಚಲ ಐಪಿಎಲ್ ಸೀಸನ್​ನಲ್ಲೇ ಭರವಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಈ ವೇಗಿ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಇವರಿಗೆ ಇವರ ಮಗ ಕೂಡ ಸಹಾಯ ಮಾಡುತ್ತಿದ್ದಾರೆ. ಸಿಎಸ್​ಕೆ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಇದರಲ್ಲಿ ಪ್ರೆಟೊರಿಯಸ್ ಹಾಗೂ ಅವರ ಮಗ ಬೌಲಿಂಗ್-ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಅದರಲ್ಲೂ ತಂದೆಯನ್ನೇ ಮಗ ಕ್ಲೀನ ಬೌಲ್ಡ್ ಮಾಡಿದ್ದು ಸಖತ್ ಕ್ಯೂಟ್ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ 54 ರನ್‌ಗಳಿಗೆ ಸೋಲಿಸಿತು. ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ (60 ರನ್, 32 ಎಸೆತ, 5 ಬೌಂಡರಿ, 5 ಸಿಕ್ಸರ್, 25ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಗೆಲುವು ಸಾಧಿಸಿತ್ತು. ಈ ಮೂಲಕ ಆಲ್ರೌಂಡರ್ ರವೀಂದ್ರ ಜಡೇಜಾ ಸಾರಥ್ಯದ ಸಿಎಸ್‌ಕೆ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆರಂಭಿಕ ಮೂರು ಪಂದ್ಯಗಳಲ್ಲೂ ಸೋಲಿನ ರುಚಿ ಕಂಡ ಕೆಟ್ಟ ದಾಖಲೆ ನರೆಯಿತು. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 8 ವಿಕೆಟ್‌ಗೆ 180 ರನ್ ಪೇರಿಸಿತು. ನಂತರ ಪಂಜಾಬ್ ಬೌಲರ್‌ಗಳ ಸಂಘಟತ ಹೋರಾಟಕ್ಕೆ ತಲೆಬಾಗಿದ ಸಿಎಸ್‌ಕೆ 18 ಓವರ್‌ಗಳಲ್ಲಿ ಕೇವಲ 126 ರನ್‌ಗಳಿಗೆ ಸರ್ವಪತನ ಕಂಡಿತು. ಸಿಎಸ್​ಕೆ ಚೇಸಿಂಗ್ ವೇಳೆ ಸೋತಿದ್ದೇ ಕಮ್ಮಿ. ಆದರೀಗ ಟಾರ್ಗೆಟ್ ಬೆನ್ನಟ್ಟುವಲ್ಲೂ ಚೆನ್ನೈ ವಿಫಲವಾಗುತ್ತಿದೆ.

Yuzvendra Chahal: ಆ ಆಟಗಾರ ಕುಡಿದು ನನ್ನನ್ನು 15ನೇ ಮಹಡಿಯಲ್ಲಿ ನೇತು ಹಾಕಿದ: ಚಹಲ್ ಶಾಕಿಂಗ್ ಹೇಳಿಕೆ

Rishabh Pant: ಸತತ ಎರಡು ಸೋಲು: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಆಡಿದ ಮಾತುಗಳೇನು?

Published On - 1:03 pm, Fri, 8 April 22