ಕೈ ಹಿಡಿದ ಧೋನಿ…3 ಶತಕಗಳೊಂದಿಗೆ 624 ಬಾರಿಸಿ ಮಿಂಚಿದ ಪೂಜಾರ..!

| Updated By: ಝಾಹಿರ್ ಯೂಸುಫ್

Updated on: Sep 18, 2022 | 10:55 AM

Cheteshwar Pujara: ವಿಶೇಷ ಎಂದರೆ 2014 ರ ಬಳಿಕ ಐಪಿಎಲ್​ನಲ್ಲಿ ಅವಕಾಶ ಪಡೆಯದಿದ್ದ ಚೇತೇಶ್ವರ ಪೂಜಾರ ಅವರನ್ನು ಐಪಿಎಲ್ 2021 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್​ಕೆ ತಂಡ ಖರೀದಿಸಿತ್ತು.

ಕೈ ಹಿಡಿದ ಧೋನಿ...3 ಶತಕಗಳೊಂದಿಗೆ 624 ಬಾರಿಸಿ ಮಿಂಚಿದ ಪೂಜಾರ..!
Cheteshwar Pujara-CSK
Follow us on

ಟೀಮ್ ಇಂಡಿಯಾದ (Team India) ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ (Cheteshwar Pujara) ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಈ ಪಾಟಿ ಬ್ಯಾಟ್ ಬೀಸುತ್ತಾರೆ ಎಂಬುದು ಬಹುಶಃ ಕೌಂಟಿ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವ ತನಕ ಯಾರಿಗೂ ಕೂಡ ಗೊತ್ತಿರಲಿಲ್ಲ. ಏಕೆಂದರೆ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಪೂಜಾರ ಕೌಂಟಿ ಚಾಂಪಿಯನ್​ಶಿಪ್​ನತ್ತ ಮುಖ ಮಾಡಿದ್ದರು. ಅದರಂತೆ ಸಸೆಕ್ಸ್ ತಂಡದ ಪರ ರಾಯಲ್ ಲಂಡನ್ ಒನ್​ ಡೇ ಕಪ್​ನಲ್ಲಿ ಕಣಕ್ಕಿಳಿದ ಚೇತೇಶ್ವರ ಪೂಜಾರ ತಮ್ಮ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿದ್ದರು. ಇಡೀ ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಪೂಜಾರ ಸಸೆಕ್ಸ್‌ ಪರ 9 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 624 ರನ್​ಗಳು. ಇದರಲ್ಲಿ 3 ಅದ್ಭುತ ಶತಕಗಳು ಕೂಡ ಸೇರಿವೆ.

ಟೀಮ್ ಇಂಡಿಯಾ ಆಟಗಾರನ ಈ ಅಮೋಘ ಫಾರ್ಮ್ ಎಲ್ಲರನ್ನೂ ಅಚ್ಚರಿಗೊಳಿಸಿತು. ಏಕೆಂದರೆ ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದ ಪೂಜಾರ ಇಂಗ್ಲೆಂಡ್​ನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಬ್ಯಾಟಿಂಗ್ ಶೈಲಿಯಲ್ಲಿ ಇಂತಹದೊಂದು ಬದಲಾವಣೆಗೆ ಮುಖ್ಯ ಕಾರಣ ಚೆನ್ನೈ ಸೂಪರ್ ಕಿಂಗ್ಸ್​ ಎಂಬ ವಿಚಾರವನ್ನು ಚೇತೇಶ್ವರ ಪೂಜಾರ ಬಹಿರಂಗಪಡಿಸಿದ್ದಾರೆ.

ಪಾಡ್‌ಕ್ಯಾಸ್ಟ್‌ ಒಂದರಲ್ಲಿ ಮಾತನಾಡಿದ ಚೇತೇಶ್ವರ ಪೂಜಾರ, ಖಂಡಿತವಾಗಿಯೂ ನನ್ನ ಬ್ಯಾಟಿಂಗ್ ಶೈಲಿ ಬದಲಾಗಿದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಂಗ್ಲೆಂಡ್​ನ ಪಿಚ್ ಚೆನ್ನಾಗಿತ್ತು. ಸ್ವಲ್ಪ ಸಮತಟ್ಟಾಗಿದ್ದರಿಂದ ಅಂತಹ ಪಿಚ್‌ಗಳಲ್ಲಿ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ಸ್ಕೋರ್ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸದಾ ಶ್ರಮಿಸಿದ್ದೇನೆ ಎಂದು ಪೂಜಾರ ತಿಳಿಸಿದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇನ್ನು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಹೊಂದಲು ಮುಖ್ಯ ಕಾರಣ ಐಪಿಎಲ್​. ಏಕೆಂದರೆ ನಾನು 2021 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಸಿಎಸ್​ಕೆ ತಂಡದ ಭಾಗವಾಗಿದ್ದೆ. ನಾನು ಯಾವುದೇ ಪಂದ್ಯದಲ್ಲಿ ಆಡದಿದ್ದರೂ, ಅಭ್ಯಾಸದ ವೇಳೆ ಸಹ ಆಟಗಾರರ ತಯಾರಿಯನ್ನು ಗಮನಿಸುತ್ತಿದ್ದೆ. ಅಲ್ಲದೆ ಶಾರ್ಟ್ ಫಾರ್ಮಾಟ್​ನಲ್ಲಿ ಆಡಬೇಕಾದರೆ ಯಾವ ರೀತಿ ಬ್ಯಾಟ್ ಬೀಸಬೇಕು, ದೊಡ್ಡ ಮೊತ್ತಗಳಿಸಬೇಕು ಎಂಬುದನ್ನು ಈ ವೇಳೆ ಅರಿತುಕೊಂಡೆ. ಇದರಿಂದ ನನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸಲು ಅನುಕೂಲವಾಯಿತು ಎಂದರು.

ಹಾಗೆಯೇ ರಾಯಲ್ ಲಂಡನ್ ಕಪ್ ವೇಳೆ ಕೋಚ್ ಗ್ರಾಂಟ್ ಫ್ಲವರ್ ನನಗೆ ಶಾಟ್​ಗಳ ಆಯ್ಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಬಳಿಕ ಕೆಲವು ಶಾಟ್​ಗಳ ಬಗ್ಗೆ ಕೇಳಿಕೊಂಡಿದ್ದೆ. ಅವರು ನೀಡಿದ ಮಾರ್ಗದರ್ಶನದಂತೆ ನಾನು ಆಡುತ್ತಿದ್ದೆ. ಇದನ್ನು ನೋಡಿ ಕೋಚ್ ಬಂದು ನಾನು ಸೂಚಿಸಿದ್ದಂತೆ ಆಡುತ್ತಿದ್ದೀಯಾ ಎಂದು ತಿಳಿಸುತ್ತಿದ್ದರು. ಕೋಚ್​ನ ಈ ಮಾತಿನಿಂದ ಕೂಡ ನನ್ನ ಆತ್ಮವಿಶ್ವಾಸ ಹೆಚ್ಚಿತು ಎಂದು ಚೇತೇಶ್ವರ ಪೂಜಾರ ಹೇಳಿದರು.

ವಿಶೇಷ ಎಂದರೆ 2014 ರ ಬಳಿಕ ಐಪಿಎಲ್​ನಲ್ಲಿ ಅವಕಾಶ ಪಡೆಯದಿದ್ದ ಚೇತೇಶ್ವರ ಪೂಜಾರ ಅವರನ್ನು ಐಪಿಎಲ್ 2021 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್​ಕೆ ತಂಡ ಖರೀದಿಸಿತ್ತು. 50 ಲಕ್ಷಕ್ಕೆ ಸಿಎಸ್​ಕೆ ತಂಡದ ಪಾಲಾಗಿದ್ದ ಪೂಜಾರ ಆಯ್ಕೆ ಎಲ್ಲರಿಗೂ ಅಚ್ಚರಿಯಾಗಿತ್ತು. ಇದಾಗ್ಯೂ ಸಿಎಸ್​ಕೆ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ರಾಯಲ್ ಲಂಡನ್​ ಕಪ್​ನಲ್ಲಿ ಅಬ್ಬರಿಸುವ ಮೂಲಕ ಚೇತೇಶ್ವರ ಪೂಜಾರ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ತಾನು ಕೂಡ ಬಿರುಸಿನ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನು ನಿರೂಪಿಸಿದ್ದಾರೆ.