Chris Devlis: ಕೇವಲ 72 ಬಾಲ್​ಗಳಲ್ಲಿ 237 ರನ್ ಚಚ್ಚಿದ ಬ್ಯಾಟರ್: ಕ್ರಿಕೆಟ್ ಜಗತ್ತಿನಲ್ಲಿ ಊಹಿಸಲಾಗದ ಘಟನೆ

Chris Devlis: ಕೇವಲ 72 ಬಾಲ್​ಗಳಲ್ಲಿ 237 ರನ್ ಚಚ್ಚಿದ ಬ್ಯಾಟರ್: ಕ್ರಿಕೆಟ್ ಜಗತ್ತಿನಲ್ಲಿ ಊಹಿಸಲಾಗದ ಘಟನೆ
Chris Devlis 237 runs in 72 balls

Victoria Premier Cricket: ಕ್ಯಾಂಪರ್​ವೆಲ್ ಮ್ಯಾಗ್​ಪಿಸ್ ತಂಡದ ಮೆಲ್ಬೋರ್ನ್ ಬ್ಯಾಟರ್ ಕ್ರೀಸ್ ಡೆವ್ಲಿಸ್​ ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಟಗಾರ. ಇವರ ಈ ಅಮೋಘ ಇನ್ನಿಂಗ್ಸ್​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

TV9kannada Web Team

| Edited By: Vinay Bhat

Jan 25, 2022 | 12:46 PM

ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್​ ಚಿತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿ ಆಗುತ್ತಾ ಇರುತ್ತದೆ. ಒಂದುಕಡೆ ಊಹಿಸಲಾಗದ ರೀತಿಯಲ್ಲಿ ಕ್ಯಾಚ್, ರನೌಟ್ ನಡೆದರೆ ಮತ್ತೊಂದೆಡೆ ಗ್ರಹಿಸಲೂ ಸಾಧ್ಯವಾಗದ ರೀತಿಯಲ್ಲಿ ಬ್ಯಾಟರ್ ಆಟವಾಡುತ್ತಾನೆ. ಈಗ ಇಂಥಹದೇ ಘಟನೆಯೊಂದು ಕ್ರಿಕೆಟ್ (Cricket) ಲೋಕದಲ್ಲಿ ನಡೆದಿದೆ. ಇಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಟಗಾರ ಕೇವಲ 72 ಎಸೆತಗಳಲ್ಲಿ ಬರೋಬ್ಬರಿ 237 ರನ್ ಚಚ್ಚಿದ್ದಾನೆ. ಇವರ ಬ್ಯಾಟ್​ನಿಂದ 20 ಬೌಂಡರಿ ಮತ್ತು 24 ಸಿಕ್ಸರ್​ಗಳು ಬಂದಿದೆ. ಈ ವಿಶೇಷ ಪಂದ್ಯ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್​ನಲ್ಲಿ (Victoria Premier Cricket) ಈ ಸ್ಫೋಟಕ ಬ್ಯಾಟಿಂಗ್ ಮೂಡಿಬಂದಿದೆ. ಕಿಂಗ್​ಸ್ಟೋನ್ ಹಾಥೋರ್ನ್​ ಮತ್ತು ಕ್ಯಾಂಪರ್​ವೆಲ್ ಮ್ಯಾಗ್​ಪಿಸ್​ (Camperwell Magpies Vs Kingston Hawthorne) ನಡುವಣ ಪಂದ್ಯ ಇದಾಗಿತ್ತು. ಹಾಗಾದ್ರೆ ಈ ಪಂದ್ಯದಲ್ಲಿ ಉಭಯ ತಂಡಗಳು ಕಲೆಹಾಕಿದ ರನ್ ಎಷ್ಟು?, ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಟಗಾರ ಯಾರು?, ಇಲ್ಲಿದೆ ಮಾಹಿತಿ.

ಕ್ಯಾಂಪರ್​ವೆಲ್ ಮ್ಯಾಗ್​ಪಿಸ್ ತಂಡದ ಮೆಲ್ಬೋರ್ನ್ ಬ್ಯಾಟರ್ ಕ್ರೀಸ್ ಡೆವ್ಲಿಸ್​ ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಟಗಾರ. ಇವರ ಈ ಅಮೋಘ ಇನ್ನಿಂಗ್ಸ್​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕ್ರೀಸ್ ಡೆವ್ಲಿಸ್​ ಬ್ಯಾಟ್​ನಿಂದ ಸಿಡಿದಿದ್ದು 20 ಬೌಂಡರಿ ಮತ್ತು 24 ಸಿಕ್ಸರ್. ಅಚ್ಚರಿ ಎಂದರೆ ಇವರು ಎದುರಿಸಿದ 74 ಬಾಲ್​ಗಳ ಪೈಕಿ 44 ಬಾಲ್ ಬೌಂಡರಿ-ಸಿಕ್ಸರ್​ಗೆಂದು ಮುಡಿಪಾಗಿಟ್ಟರು. ಇವರ ಈ ಸ್ಫೋಟಕ ಆಟದ ನೆರವಿನಿಂದ ಕ್ಯಾಂಪರ್​ವೆಲ್ ಮ್ಯಾಗ್​ಪಿಸ್ ತಂಡ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 441 ರನ್ ಬಾರಿಸಿತು.

ಕ್ರೀಸ್ ಡೆವ್ಲಿಸ್​ (ಥೆವ್ಲಿಸ್​) ಅವರು 236 ರನ್ ಗಳಿಸಿದ್ದಾಗ ಇವರು ಕ್ಯಾಚ್ ಡ್ರಾಪ್ ಆಗಿತ್ತು. ಸ್ಲೋ ಬಾಲ್​ಗೆ ಬ್ಯಾಟ್ ಬೀಸಿದಾಗ ದೀಪ್ ಪೊಸಿಷನ್​ನಲ್ಲಿದ್ದ ಫೀಲ್ಡರ್ ಕ್ಯಾಚ್ ಕೈಚೆಲ್ಲಿದರು. ಕ್ರೀಸ್ ಗಳಿಸಿದ 237 ರನ್ ವಿಕ್ಟೋರಿಯಾ ಪ್ರೀಮಿಯರ್ ಕ್ರಿಕೆಟ್​ ಇತಿಹಾಸದಲ್ಲಿ ಒರ್ವ ಆಟಗಾರ ಗಳಿಸಿದ ಆರನೇ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಮಾರ್ಗನ್ ಎಂಬವರು ಅಜೇಯ 254 ರನ್ ಸಿಡಿಸಿದ್ದರು.

ಈ ಪಂದ್ಯದಲ್ಲಿ ಕ್ಯಾಂಪರ್​ವೆಲ್ ಮ್ಯಾಗ್​ಪಿಸ್ ತಂಡ ನೀಡಿದ್ದ 442 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಕಿಂಗ್​ಸ್ಟೋನ್ ಹಾಥೋರ್ನ್ ತಂಡ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಕಂಡಿತು.

Keshav Maharaj: ಭಾರತವನ್ನು ವೈಟ್​ವಾಷ್ ಮಾಡಿದ ಬಳಿಕ ಜೈ ಶ್ರೀರಾಮ್ ಎಂದ ದಕ್ಷಿಣ ಆಫ್ರಿಕಾ ಆಟಗಾರ: ವೈರಲ್

India vs West Indies: ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ: ಇಲ್ಲಿದೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada