AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Keshav Maharaj: ಭಾರತವನ್ನು ವೈಟ್​ವಾಷ್ ಮಾಡಿದ ಬಳಿಕ ಜೈ ಶ್ರೀರಾಮ್ ಎಂದ ದಕ್ಷಿಣ ಆಫ್ರಿಕಾ ಆಟಗಾರ: ವೈರಲ್

South Africa vs India: ಭಾರತ ವಿರುದ್ಧ ವೈಟ್​ವಾಷ್ ಸಾಧನೆ ಮಾಡಿದ ಬಳಿಕ ದಕ್ಷಿಣ ಆಫ್ರಿಕಾ ಆಟಗಾರ ಕೇಶವ್ ಮಹರಾಜ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಟ್ರೋಫಿ ಜೊತೆ ಸಂಭ್ರಮಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋಟೋಕ್ಕೆ ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.

Keshav Maharaj: ಭಾರತವನ್ನು ವೈಟ್​ವಾಷ್ ಮಾಡಿದ ಬಳಿಕ ಜೈ ಶ್ರೀರಾಮ್ ಎಂದ ದಕ್ಷಿಣ ಆಫ್ರಿಕಾ ಆಟಗಾರ: ವೈರಲ್
Keshav Maharaj SA vs IND
TV9 Web
| Updated By: Vinay Bhat|

Updated on: Jan 25, 2022 | 11:35 AM

Share

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ (South Africa Cricket Team) ತಮ್ಮದೆ ನಾಡಿನಲ್ಲಿ ಬಲಿಷ್ಠ ಟೀಮ್ ಇಂಡಿಯಾವನ್ನು ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಸೋಲಿಸಿ ಶ್ರೇಷ್ಠ ಸಾಧನೆ ಮಾಡಿದೆ. ಅದರಲ್ಲೂ ಮೂರು ಏಕದಿನ ಪಂದ್ಯಗಳ ಪೈಕಿ ಮೂರರಲ್ಲೂ ಗೆಲುವು ಸಾಧಿಸಿ ವೈಟ್​ವಾಷ್ ಮಾಡಿದ ಸಾಧನೆ ಗೈದಿತು. ಕಳೆದ ಕೆಲವು ವರ್ಷಗಳಿಂದ ಸೋಲಿನ ಸರಪಳಿಯಲ್ಲಿ ಸಿಲುಕಿದ್ದ ಹರಿಣಗಳಿಗೆ ಈ ಸರಣಿ ಗೆಲುವು ಸಾಕಷ್ಟು ನೆಮ್ಮಿದಿ ನೀಡಿತು. ತಂಡದ ನಾಯಕ ಎಲ್ಲ ಆಟಗಾರರನ್ನು ಹಾಡಿಹೊಗಳಿದರು. ಆಫ್ರಿಕಾ ಆಟಗಾರರ ಸಂಘಟಿತ ಪ್ರದರ್ಶನ ಭಾರತಕ್ಕೆ (Team India) ದೊಡ್ಡ ಆಘಾತವನ್ನೇ ನೀಡಿದೆ. ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ವಿಶೇಷ ಸಾಧನೆ ಮಾಡಿದ ಆಫ್ರಿಕಾ ಆಟಗಾರರು ಟ್ರೋಫಿ ಹಿಡಿದು ಸಂಭ್ರಮಿಸಿದರು. ಅದರಲ್ಲೂ ಆಫ್ರಿಕಾ ತಂಡದಲ್ಲಿರುವ ಭಾರತ ಮೂಲದ ಆಟಗಾರ ಕೇಶವ್ ಮಹರಾಜ್ (Keshav Maharaj) ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಗೆಲುವಿನ ಫೋಟೋ ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಫೋಟೋದಲ್ಲಿ ಏನಿದೆ ಎಂಬುದನ್ನು ನೀವೇ ನೋಡಿ.

ಕೇಶವ್ ಮಹರಾಜ್ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಟ್ರೋಫಿ ಜೊತೆ ಸಂಭ್ರಮಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋಟೋಕ್ಕೆ ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. “ಇದೊಂದು ಅದ್ಭುತ ಸರಣಿ, ಈ ತಂಡದ ಸದಸ್ಯನಾಗಿರುವುದು ಹೆಮ್ಮೆಯಾಗುತ್ತಿದೆ. ಇದೀಗ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ, ಜೈ ಶ್ರೀರಾಮ್” ಎಂದು ಬರೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರ ಇಲ್ಲಿ ಜೈ ಶ್ರೀರಾಮ್ ಎಂದು ಬರೆದಿರುವುದು ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆಫ್ರಿಕಾದಲ್ಲಿ ನೆಲೆಸಿದ್ದರೂ ಭಾರತದ ಸಂಪ್ರದಾಯವನ್ನು ಬಿಡದೆ ಅಳವಡಿಸಿಕೊಂಡಿರುವುದಕ್ಕೆ ಅನೇಕರು ತಲೆಬಾಗಿದ್ದಾರೆ.

ಭಾರತೀಯ ಮೂಲದವರಾಗಿರುವ ಕೇಶವ್ ಮಹಾರಾಜ್ ಫೆಬ್ರವರಿ 7, 1990 ರಂದು ಡರ್ಬನ್‌ನಲ್ಲಿ ಜನಿಸಿದರು. ಹನುಮಂತನ ಪರಮ ಭಕ್ತರಾಗಿರುವ ಕೇಶವ್, ತಮ್ಮ ಇನ್​ಸ್ಟಾದಲ್ಲಿ ಭಕ್ತಿಯನ್ನು ತೋರ್ಪಡಿಸುತ್ತಾ ಇರುತ್ತಾರೆ. ಇವರ ಇನ್​ಸ್ಟಾ ಬರೋದಲ್ಲಿ ಜೈ ಶ್ರೀಮ್, ಜೈ ಶ್ರೀ ಹನುಮಾನ್ ಎಂದು ಬರೆದಿಕೊಂಡಿದ್ದಾರೆ. ಅಲ್ಲದೆ ಅನೇಕ ಹನುಮಾ ದೇವಾಲಯಕ್ಕೆ ಇವರು ಭೇಟಿ ನೀಡಿರುವ ಫೋಟೋಗಳಿವೆ. ಕೇಶವ್ ಮಹಾರಾಜ್ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡುವ ಮೂಲಕ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ 4 ವಿಕೆಟ್ ಕಿತ್ತು ಮಿಂಚಿದ್ದರು. 2017 ರಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಏಕದಿನಕ್ಕೂ ಕಾಲಿಟ್ಟರು. ಇದೀಗ ಇವರು ಆಫ್ರಿಕಾ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ದಕ್ಷಿಣ ಆಫ್ರಿಕಾ ಪರ 39 ಟೆಸ್ಟ್, 18 ಏಕದಿನ ಪಂದ್ಯಗಳನ್ನಾಡಿದ್ದಾರೆ. ಎಡಗೈ ಸ್ಪಿನ್ನರ್ ಜೊತೆಗೆ ಬ್ಯಾಟಿಂಗ್​ನಲ್ಲೂ ಇವರು ಕಮಾಲ್ ಮಾಡಿದ್ದಾರೆ.

ಭಾರತಕ್ಕೆ ಆಘಾತ ನೀಡಿದ ಆಫ್ರಿಕಾನ್ನರು:

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲನ್ನ ಕಂಡಿತು. ಟೆಸ್ಟ್‌ ಸರಣಿಯಲ್ಲಿ 1-2 ಅಂತರದಲ್ಲಿ ಸೋತ ಭಾರತ, ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ಮುಗ್ಗರಿಸಿತು. ಏಕದಿನ ಸರಣಿಯಲ್ಲಿ ವೈಟ್ ವಾಶ್ ಅವಮಾನ ಎದುರಿಸಿದ ಭಾರತ, ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ ಕೆಟ್ಟ ಸೋಲುಗಳಲ್ಲಿ ಇದು ಒಂದಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಏಕದಿನ ಸರಣಿಯಲ್ಲಿ ನಾಯಕತ್ವ ವಹಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ 31 ರನ್‌ಗಳಿಂದ ಸೋತಿತ್ತು. ನಂತರ ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋತಿತ್ತು. ಮೂರನೇ ಏಕದಿನ ಪಂದ್ಯದಲ್ಲಿ 4 ರನ್‌ಗಳಿಂದ ಸೋತಿತ್ತು.

India vs West Indies: ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ: ಇಲ್ಲಿದೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ

Virat Kohli: ವಾಮಿಕ ಫೋಟೋ ವೈರಲ್ ಆದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ: ಏನಂದ್ರು?