CK Nayudu Trophy: 27 ಫೋರ್, 1 ಸಿಕ್ಸ್: ತ್ರಿಶತಕ ಸಿಡಿಸಿ ಮಿಂಚಿದ ವಿ. ಜಡೇಜಾ

| Updated By: ಝಾಹಿರ್ ಯೂಸುಫ್

Updated on: Jan 23, 2023 | 6:30 PM

CK Nayudu Trophy: ವಿಶೇಷ ಎಂದರೆ ಇದು ವಿಶ್ವರಾಜ್‌ಸಿನ್ಹ ಜಡೇಜಾ ಅವರ ಕಂಬ್ಯಾಕ್ ಪಂದ್ಯ. ಅಂದರೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಯುಪಿ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು.

CK Nayudu Trophy: 27 ಫೋರ್, 1 ಸಿಕ್ಸ್: ತ್ರಿಶತಕ ಸಿಡಿಸಿ ಮಿಂಚಿದ ವಿ. ಜಡೇಜಾ
Vishvarajsinh Jadeja
Follow us on

CK Nayudu Trophy 2o23: ಸಿಕೆ ನಾಯ್ಡು ಟೂರ್ನಿಯಲ್ಲಿ ಸೌರಾಷ್ಟ್ರ ತಂಡದ ನಾಯಕ ವಿಶ್ವರಾಜ್‌ಸಿನ್ಹ ಜಡೇಜಾ ಭರ್ಜರಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. 25 ವರ್ಷದೊಳಗಿನವರು ಈ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 79 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸೌರಾಷ್ಟ್ರ ತಂಡಕ್ಕೆ ನಾಯಕ ಆಸರೆಯಾದರು. ಗಜ್ಜರ್ ಸಮರ್ ಜೊತೆಗೂಡಿ ಇನಿಂಗ್ಸ್​ ಕಟ್ಟಿದ್ದ ವಿಶ್ವರಾಜ್‌ಸಿನ್ಹ ಜಡೇಜಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಜಡೇಜಾ ತಮ್ಮ ಅದ್ಭುತ ಇನ್ನಿಂಗ್ಸ್‌ನಲ್ಲಿ 27 ಬೌಂಡರಿ ಮತ್ತು ಒಂದು ಸಿಕ್ಸರ್​ನೊಂದಿಗೆ ತ್ರಿಶತಕ ಪೂರೈಸಿದರು. ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿ ತಂಡದ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 550 ಕ್ಕೆ ತಲುಪಿಸಿ ಡಿಕ್ಲೇರ್ ಘೋಷಿಸಿದರು.

ವಿಶೇಷ ಎಂದರೆ ಇದು ವಿಶ್ವರಾಜ್‌ಸಿನ್ಹ ಜಡೇಜಾ ಅವರ ಕಂಬ್ಯಾಕ್ ಪಂದ್ಯ. ಅಂದರೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಯುಪಿ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. 2018 ರಲ್ಲಿ ರಣಜಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಯುವ ಆಟಗಾರ ಇದೀಗ ಸಿಕೆ ನಾಯ್ಡು ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ
IPLನ ಒಂದು ಪಂದ್ಯಕ್ಕೆ 107 ಕೋಟಿ ರೂ: PSL ನ 1 ಪಂದ್ಯಕ್ಕೆ ಎಷ್ಟು ಗೊತ್ತಾ?
ಟೀಮ್ ಇಂಡಿಯಾ ಪರ ಅತೀ ಹೆಚ್ಚು ಬಾರಿ 150 ಕ್ಕೂ ಅಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ವಿಶ್ವರಾಜ್‌ಸಿನ್ಹ ಜಡೇಜಾ ಇದುವರೆಗೆ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು 671 ರನ್ ಕಲೆಹಾಕಿದ್ದಾರೆ. ಇದಕ್ಕೂ ಮುನ್ನ ಅಜೇಯ 105 ರನ್ ಗಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಅಲ್ಲದೆ ತಮ್ಮ ವೃತ್ತಿಜೀವನದಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ 20 ಲಿಸ್ಟ್ ಎ ಪಂದ್ಯಗಳಲ್ಲಿ 499 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲೂ ಜಡೇಜಾ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಸಿಕೆ ನಾಯ್ಡು ಟೂರ್ನಿಯ ಮೂಲಕ ಮತ್ತೆ ರಣಜಿ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ ವಿಶ್ವರಾಜ್‌ಸಿನ್ಹ ಜಡೇಜಾ.